ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಹಲವು ವಿಷಯಗಳಲ್ಲಿ ಸೌಹಾರ್ದಯುತವಾದ ವಾದ- ವಿವಾದ ಇದೆ. ಅದರಲ್ಲಿ ಇಡ್ಲಿ ಯಾರದು ಎನ್ನುವ ಚರ್ಚೆಯೂ ಒಂದು!
ಮಲ್ಲಿಗೆಯಂತ ಮೆತ್ತನೆಯ ಇಡ್ಲಿ, ಚಟ್ನಿ, ಬೆಣ್ಣೆ ಜೊತೆಗೆ ಬಾಯಿಗಿಟ್ಟರೆ ಮೆಲ್ಲನೆ ಕರಗುತ್ತೆ. ಇಡ್ಲಿ ಯಾರದು ಎನ್ನುವ ವಿಷಯದಲ್ಲಿ ಮಾತ್ರ ಅದು ಬಿಸಿತುಪ್ಪ!
ಹೌದು ಇಡ್ಲಿಯ ಬಗ್ಗೆ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಸೌಹಾರ್ದವಾದ ಚರ್ಚೆ ಸದಾ ಇದೆ.
ಅಷ್ಟೇ ಏಕೆ ಇಂದಿಗೂ ಗೂಗಲ್ ಸಹ ಎರಡೂ ರಾಜ್ಯಗಳು ಇಡ್ಲಿ ನಮ್ಮದು ಎಂದು ಹೇಳಿಕೊಳ್ಳುತ್ತವೆ ಎಂದೇ ವಿವರಣೆ ನೀಡುತ್ತದೆ.
ಅಪರೂಪದ ಕಾಯಿಲೆ: ಔಷಧಿ, ಉಪಕರಣ ಖರೀದಿಗೆ ಸುಂಕ ವಿನಾಯಿತಿ
Which country invented idli?
Image result for idli from which country While both Karnataka and Tamil Nadu claim to have invented the recipe, food historian K T Achaya believes the idli probably arrived in India from present-day Indonesia around 800-1200 CE. ಎನ್ನುವ ಉತ್ತರವನ್ನು ಗೂಗಲ್ ನೀಡುತ್ತದೆ.
ಇಡ್ಲಿಯನ್ನು ಕಂಡುಹಿಡಿದ ದೇಶ ಯಾವುದು?
ಇಡ್ಲಿಯನ್ನು ಕರ್ನಾಟಕ ಮತ್ತು ತಮಿಳುನಾಡು ಎರಡೂ ಪಾಕವಿಧಾನವನ್ನು ಕಂಡುಹಿಡಿದಿದೆ ಎಂದು ಹೇಳಿಕೊಂಡರೂ,
ಆಹಾರ ಇತಿಹಾಸಕಾರ ಕೆ.ಟಿ ಅಚಾಯ ಅವರು ಇಡ್ಲಿಯು ಬಹುಶಃ ಇಂದಿನ ಇಂಡೋನೇಷ್ಯಾದಿಂದ 800-1200 CE ಯಲ್ಲಿ
ಭಾರತಕ್ಕೆ ಬಂದಿರಬಹುದು ಎಂದು ನಂಬುತ್ತಾರೆ ಎಂಬ ಉತ್ತರವನ್ನು ಗೂಗಲ್ ನೀಡುತ್ತದೆ.
Rain ಬೆಂಗಳೂರು ಸೇರಿದಂತೆ ವಿವಿಧೆಡೆ ಎರಡು ದಿನ ಮಳೆ
ಇಡ್ಲಿ ಭಾರತದ ಆಹಾರವಲ್ಲ!
ಹೌದು ಹಲವರ ವಾದ ಇದು. ಇಡ್ಲಿ ಭಾರತದಲ್ಲ ಅದರ ಮೂಲ ವಿದೇಶದ್ದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಇನ್ನು ಇಡ್ಲಿಯಲ್ಲಿ ಸಾಕಷ್ಟು ಪೌಷ್ಠಿಕಾಂಶಗಳೂ ಇವೆ.
ಇಡ್ಲಿಯ ಮೂಲದ ಬಗ್ಗೆ ಅನೇಕರು ಹಕ್ಕು ಸಾಧಿಸುತ್ತಾರೆ. ನಮ್ಮದು ಎಂದು ಹೇಳುತ್ತಾರೆ.
ಆಹಾರ ಇತಿಹಾಸಕಾರ ಕೆ ಟಿ ಅಚಾಯಾ ಅವರ ಪ್ರಕಾರ, ಇಡ್ಲಿ ಇಂಡೋನೇಷ್ಯಾದಿಂದ 800-1200 CE ಯಲ್ಲಿ ಹಿಂದೂ ರಾಜರು ಆಳ್ವಿಕೆ ನಡೆಸಿದ ಪ್ರದೇಶಗಳಿಂದ ಭಾರತಕ್ಕೆ ಬಂದಿರಬಹುದು.
ಇಡ್ಲಿಗಳು ಇಂಡೋನೇಷ್ಯಾದ ಕೆಡ್ಲಿಯನ್ನು ಹೋಲುತ್ತವೆ ಎಂದು ಅವರು ಹೇಳುತ್ತಾರೆ. ನಿಖರವಾಗಿ ಇದು ಇಲ್ಲಿಯದೇ ಎನ್ನುವುದು ಸ್ಪಷ್ಟವಾಗಿಲ್ಲ.
Gold Rate Today ಸಿಹಿಸುದ್ದಿ: ರಾಜ್ಯದಲ್ಲಿ ಚಿನ್ನದ ದರದಲ್ಲಿ ಇಳಿಕೆ!
ದಕ್ಷಿಣ ಭಾರತದ ಪ್ರಮುಖ ಆಹಾರ ಪದ್ಧತಿ
ದಕ್ಷಿಣ ಭಾರತದಲ್ಲಿ ಇಡ್ಲಿಗೆ ತನ್ನದೇ ಆದ ವಿಶೇಷತೆ ಇದೆ. ಇಡ್ಲಿಯನ್ನು ತಮಿಳುನಾಡಿನಲ್ಲಿ ಹಾಗೂ ಕರ್ನಾಟಕದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಬೆಳಿಗ್ಗೆಯ ಉಪಹಾರದಲ್ಲಿ ಇಡ್ಲಿ ದಕ್ಷಿಣ ಭಾರತದಲ್ಲಿ ಪ್ರಮುಖ ಆಹಾರ ಪದ್ಧತಿ.
Ration Card- Aadhar Card ರೇಷನ್, ಪ್ಯಾನ್- ಆಧಾರ್ ಜೋಡಣೆ ಎರಡರ ಅವಧಿ ವಿಸ್ತರಣೆ!
ಇಡ್ಲಿಯಲ್ಲಿ ಆರೋಗ್ಯಕರ, ಪೌಷ್ಟಿಕ ಮತ್ತು ರುಚಿಕರವಾದ ಪಾಕವಿಧಾನಗಳಿವೆ. ಅಲ್ಲದೇ ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಉತ್ತಮ ಮೂಲವಾಗಿದೆ.
ಇದರ ಹುದುಗುವಿಕೆ ಪ್ರಕ್ರಿಯೆಯು ಆಹಾರದ ವಿಟಮಿನ್ ಬಿ ಅಂಶವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಅಲ್ಲದೇ ಇಡ್ಲಿಯಲ್ಲಿ ಇರುವ ಫೈಬರ್ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.
ತಟ್ಟೆ ಇಡ್ಲಿ, ಸಾಮಾನ್ಯ ಇಡ್ಲಿಗಳು, ಗೋವಾದ ಶೈಲಿಯ ಸಣ್ಣ, ಮುದ್ದೆ ಇಡ್ಲಿ ಸೇರಿದಂತೆ ಇಡ್ಲಿಯಲ್ಲಿ ಹಲವು ವಿಧಗಳಿವೆ.
ಇಡ್ಲಿಯ ಮೂಲ ಯಾವುದಾದರೇನು ನಮ್ಮದೇ ಎನ್ನುವಂತೆ ಇಡ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಕೊಂಡಿದೆ.
ಅಂದಾಗೇ ಇಂದು ವಿಶ್ವ ಇಡ್ಲಿ ದಿನ. ಇಂದಾಗದಿದ್ರೂ ನಾಳೆ ಇಡ್ಲಿ ತಿನ್ನಿ! ಹ್ಯಾಪಿ ಇಡ್ಲಿ ಡೇ!
Share your comments