1. ಸುದ್ದಿಗಳು

Rain ಬೆಂಗಳೂರು ಸೇರಿದಂತೆ ವಿವಿಧೆಡೆ ಎರಡು ದಿನ ಮಳೆ

Hitesh
Hitesh
Rain for two days in various places including Bangalore

ರಾಜ್ಯದ ವಿವಿಧೆಡೆ ಇನ್ನು ಎರಡು ದಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಅಲ್ಲಲ್ಲಿ ಮಾರ್ಚ್‌ 31ರ ವರೆಗೆ ಮಳೆ ಆಗುವ ಸಾಧ್ಯತೆ ಇದೆ.

ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಬಹಳಷ್ಟು ಸಾಧ್ಯತೆಗಳಿವೆ. ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ ಅಂದರೆ ಹೆಚ್ಚು ಬಿಸಿಲು ಕಂಡು ಬಂದ ಪ್ರದೇಶಗಳಲ್ಲಿ ಕಲಬುರಗಿ ಇದೆ. ಕಲಬುರಗಿಯಲ್ಲಿ 38.9 ಡಿಗ್ರಿ ಸೆಲ್ಸಿಯಸ್‌ (ನೆತ್ತಿ ಸುಡುವ ಬಿಸಿಲು) ದಾಖಲಾಗಿದೆ. 

ಇನ್ನು ಮುಂದಿನ 48 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ.

Gold Rate Today ಸಿಹಿಸುದ್ದಿ: ರಾಜ್ಯದಲ್ಲಿ ಚಿನ್ನದ ದರದಲ್ಲಿ ಇಳಿಕೆ!

ಇನ್ನು ಅತೀ ಕನಿಷ್ಠ ತಾಪಮಾನ ಅಂದರೆ, ಚಳಿ ಹೆಚ್ಚಾಗಿ ಕಂಡು ಬಂದ ಪ್ರದೇಶಗಳಲ್ಲಿ ಬಾಗಲಕೋಟೆ ಇದೆ.

ಬಾಗಲಕೋಟೆಯಲ್ಲಿ ಕನಿಷ್ಠ ಉಷ್ಣಾಂಶವು 14 ಡಿಗ್ರಿ ಸೆಲ್ಸಿಯಸ್‌ ಇರುವುದು ದಾಖಲಾಗಿದೆ.

ಇನ್ನು ಮುಂದಿನ 24 ಗಂಟೆಗಳಲ್ಲಿ

ರಾಜ್ಯದಾದ್ಯಂತ ಮುಂದಿನ 48 ಗಂಟೆಗಳ ಕಾಲ ಒಣಹವೆ ಮುಂದುವರಿಯುವ ಬಹಳಷ್ಟು ಸಾಧ್ಯತೆಗಳಿವೆ.

ಈ ಸಂದರ್ಭದಲ್ಲಿ ಮೀನುಗಾರರಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ.

Ration Card- Aadhar Card ರೇಷನ್‌, ಪ್ಯಾನ್‌- ಆಧಾರ್‌ ಜೋಡಣೆ ಎರಡರ ಅವಧಿ ವಿಸ್ತರಣೆ!

Rain for two days in various places including Bangalore

ಗರಿಷ್ಠ ಉಷ್ಣಾಂಶದ ಎಚ್ಚರಿಕೆ

ಗರಿಷ್ಠ ಉಷ್ಣಾಂಶವು ಉತ್ತರ ಒಳನಾಡಿನ ವಿವಿಧೆಡೆ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಆಗುವ ಸಾಧ್ಯತೆ ಇದೆ.

ಮುಂದಿನ 24 ಗಂಟೆಗಳಲ್ಲಿ ಗರಿಷ್ಠ ಉಷ್ಣಾಂಶವು ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಾಧ್ಯತೆ ಇದೆ.

ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ

ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇರಲಿದೆ.

ಸಂಜೆ, ರಾತ್ರಿ ವೇಳೆ ಹಗುರದಿಂದ ಕೂಡಿದ ಮಳೆ ಹಾಗೂ ಗುಡುಗಿನಿಂದ ಕೂಡಿದ ಹಗುರ ಮಳೆ ಆಗುವ ಸಾಧ್ಯತೆ ಇದೆ.

ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್‌ ಇರುವ ಬಹಳಷ್ಟು ಸಾಧ್ಯತೆಗಳಿವೆ.

ಮುಂದಿನ 48 ಗಂಟೆಗಳಲ್ಲಿ

ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ನಿರ್ಮಲ ಆಕಾಶವಿರುತ್ತದೆ.

ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್‌ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.   

ಪ್ಯಾನ್‌- ಆಧಾರ್‌ ಕಾರ್ಡ್‌ ಅಷ್ಟೇ ಅಲ್ಲ ರೇಷನ್‌ ಕಾರ್ಡ್‌ನೊಂದಿಗೂ ಜೋಡಣೆ ಮಾಡಬೇಕು!

Published On: 30 March 2023, 10:36 AM English Summary: Rain for two days in various places including Bangalore

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.