1. ಸುದ್ದಿಗಳು

ಗ್ರಾಮಸ್ಥರ ದಾಳಿ; 50 ಮರಿಗಳಿಗೆ ಜನ್ಮ ನೀಡಿ ಸಾವನ್ನಪ್ಪಿದ Russell's viper ಗರ್ಭಿಣಿ ಹಾವು..!

Kalmesh T
Kalmesh T
Russell's viper: A pregnant snake killed by villagers

ಚಿತ್ರದುರ್ಗ ತಾಲ್ಲೂಕಿನ ಹಂಪನೂರು ಗ್ರಾಮದ ಜಮೀನೊಂದರಲ್ಲಿ ಕಂಡ ರಸೆಲ್ಸ್ ವೈಪರ್ (Russell's viper) ಹಾವನ್ನು ಜನ ಭಯದಿಂದ ಹೊಡೆದು ಕೊಂದಿದ್ದಾರೆ. ಮೃತ ಹಾವು 50 ಮರಿಗಳಿಗೆ ಜನ್ಮ ನೀಡಿ ಸಾವನ್ನಪ್ಪಿದೆ.

ಇದನ್ನೂ ಓದಿರಿ: ಕಾಳುಮೆಣಸಿನಲ್ಲಿ ಬರುವ ರೋಗಗಳು ಮತ್ತು ಅದರ ಸಮಗ್ರ ನಿರ್ವಹಣೆ

ಬಿಸಿಲಿನ ಶಾಖದಿಂದ ಈ ಬಾರಿ ಮಾವಿನ ಉತ್ಪಾದನೆಯಲ್ಲಿ ಕುಂಠಿತ: ಕೃಷಿ ತಜ್ಞರ ಅಭಿಪ್ರಾಯ

 

ಚಿತ್ರದುರ್ಗ ತಾಲೂಕಿನ ಹಂಪನೂರು ಗ್ರಾಮದ ರೈತರೊಬ್ಬರ ಹೊಲದಲ್ಲಿ ಆಕಸ್ಮಿಕವಾಗಿ ರಸೆಲ್ಸ್ ವೈಪರ್ (Russell's viper) ಹಾವು ಕಾಣಿಸಿಕೊಂಡಿತ್ತು. ವಿಷಕಾರಿ ಹಾವು ಎಂದು ತಿಳಿದ ರೈತರು ಕಲ್ಲು, ಕೋಲುಗಳಿಂದ ಹೊಡೆದು ಕೊಂದಿದ್ದಾರೆ.

ಆದರೆ, ಸಾವನ್ನಪ್ಪಿದ ಹಾವು ಗರ್ಭಿಣಿ ಎಂಬುದು ನಂತರ ತಿಳಿದು ಮಮ್ಮಲ ಮರುಗಿದ್ದಾರೆ. ಹೌದು, ಅವರೆಲ್ಲ ಹೊಡೆದ ಹಾವು ಗರ್ಭಿಣಿ ಹಾವಾಗಿತ್ತು. ಹೊಡೆತ ತಿಂದ ಹಾವು 50 ಮರಿಗಳಿಗೆ ಜನ್ಮ ನೀಡಿ ನಂತರ ಪ್ರಾಣ ಬಿಟ್ಟಿದೆ.

₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?

ಅಚಾನಕ್ಕಾಗಿ ದೂರದಲ್ಲಿ ಏನೋ ಮಿಸುಕಾಡಿದಂತೆ ಕಂಡ ಕಾರಣ ಹತ್ತಿರ ಹೋದ ವ್ಯಕ್ತಿ ಹಾವೆಂದು ತಿಳಿದ ನಂತರ ಅಕ್ಕಪಕ್ಕದವರನ್ನು ಕೂಗಿದ್ದಾರೆ. ಎಲ್ಲರೂ ಸೇರಿದ ನಂತರ ಭಯದಿಂದ ಹೊಡೆದು ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಮೈಕ್ರೋಬಯಾಲಜಿ ವಿಭಾಗದ ಪ್ರೊ.ಎಸ್.ಶಿಶುಪಾಲ ಅವರು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..! ನೀವು ಇದರ ಬಗ್ಗೆ ತಿಳಿದಿರಲೇಬೇಕು..

“ಮೊಟ್ಟೆಯಿಡುವ ನಾಗರಹಾವು ಮತ್ತು ಇಲಿ ಹಾವುಗಳಿಗಿಂತ ಭಿನ್ನವಾಗಿ ರಸೆಲ್ಸ್ ವೈಪರ್ಗಳು ಮಕ್ಕಳನ್ನು ಹೆರುತ್ತವೆ. ರಸ್ಸೆಲ್‌ನ ವೈಪರ್‌ಗಳು ಒಂದೇ ಬಾರಿಗೆ 50 ರಿಂದ 70 ಮರಿ ಹಾವುಗಳಿಗೆ ಜನ್ಮ ನೀಡುತ್ತವೆ ಎಂದು ಅವರು ಕಮೆಂಟ್ ಮಾಡಿದ್ದಾರೆ.

"ಆದರೆ ಅವುಗಳಲ್ಲಿ 5-10% ಮಾತ್ರ ಬದುಕುಳಿಯುತ್ತವೆ. ಇನ್ನೂ ಕೆಲವುಗಳು ಪಕ್ಷಿಗಳು ಬೇಟೆಯಾಡಿ ತಿನ್ನುತ್ತವೆ ಎಂದು ಮಾಹಿತಿ ನೀಡಿದ್ದಾರೆ. ಹಾವುಗಳ ಬಗ್ಗೆ ಅರಿವಿನ ಕೊರತೆಯಿಂದ ಗ್ರಾಮಸ್ಥರು ಹಾವನ್ನು ಹೊಡೆದು ಕೊಂದಿದ್ದಾರೆ ಎಂದು ಪ್ರೊ.ಶಿಶುಪಾಲ ವಿಷಾದ ವ್ಯಕ್ತಪಡಿಸಿದ್ದಾರೆ.

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ

Published On: 28 May 2022, 05:17 PM English Summary: Russell's viper: A pregnant snake killed by villagers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.