1. ಸುದ್ದಿಗಳು

ರಾಜ್ಯದಲ್ಲಿ ರಸ್ತೆ ಸುರಕ್ಷತಾ ನಿಯಂತ್ರಣ ಪ್ರಾಧಿಕಾರ, ಕಾರಣವೇನು ?

Hitesh
Hitesh
Road safety control authority in the state, what is the reason?

ರಾಜ್ಯದಲ್ಲಿ ಅಪಘಾತಗಳನ್ನು ತಗ್ಗಿಸುವುದು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಸುರಕ್ಷತಾ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿಕೊಂಡಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ.  

ಚೀನಾವನ್ನು ಕಾಡುತ್ತಿರುವ ಬಿಎಫ್‌7 ವೈರಸ್‌ ಭಾರತಕ್ಕೂ ಎಂಟ್ರಿ! 

ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ 942 ಅಪಘಾತ ಸ್ಥಳಗಳನ್ನು (ಬ್ಲ್ಯಾಕ್‌ ಸ್ಪಾಟ್‌) ಗುರುತಿಸಲಾಗಿದೆ. ಇವುಗಳಲ್ಲಿ 214 ಸ್ಥಳಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿವೆ. ಇದರಲ್ಲಿ 186 ಸ್ಥಳಗಳನ್ನು ಸರಿಪಡಿಸುವ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

PM Kisan| ಪಿ.ಎಂ ಕಿಸಾನ್‌ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ  

ಲೋಕೋಪಯೋಗಿ ಇಲಾಖೆ ವತಿಯಿಂದ ಭಾರತೀಯ ರಸ್ತೆ ಕಾಂಗ್ರೆಸ್‌ ನೀತಿಯ ಅನುಸಾರ 10 ಕೋಟಿ ರೂಪಾಯಿಗೂ ಹೆಚ್ಚಿನ ರಸ್ತೆ ಕಾಮಗಾರಿಗಳ ಸುರಕ್ಷತಾ ಆಡಿಟ್ (ಪರೀಕ್ಷೆ) ಕೈಗೊಳ್ಳಲಾಗುವುದು. ನಿಯಮಾನುಸಾರ 5 ಅಪಘಾತಗಳು ಅಥವಾ 10 ಜನರಿಗೂ ಅಧಿಕ ಸಾವುಗಳು ಸಂಭವಿಸಿದರೆ, 10 ಮೀಟರ್ ವ್ಯಾಪ್ತಿಯ ವಲಯಗಳನ್ನು ಅಪಘಾತದ ಸ್ಥಳಗಳು ಎಂದು ಗುರುತಿಸಲಾಗಿದೆ.   

10 ಕೋಟಿ ರೂಪಾಯಿಗೂ ಅಧಿಕ ರಸ್ತೆ ಕಾಮಗಾರಿಗಳಲ್ಲಿ ಶೇ3 ರಿಂದ 5 ರಷ್ಟು ಮೊತ್ತವನ್ನು ರಸ್ತೆ ಸುರಕ್ಷತೆಗೆ ಮೀಸಲಿರಿಸಲಾಗಿದೆ. ರಸ್ತೆ ಸುರಕ್ಷತೆ ಚಿಹ್ನೆ, ಫಲಕ ಅಳವಡಿಕೆ, ತಿರುವು ರಕ್ಷಣೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.   

PM Kisan| ಪಿ.ಎಂ ಕಿಸಾನ್‌ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ  

ಸಾವಿನ ಪ್ರಮಾಣ ಹೆಚ್ಚಳ

ರಾಜ್ಯದಾದ್ಯಂತ 2019ರಲ್ಲಿ 40,658 ಅಪಘಾತಗಳು ಸಂಭವಿಸಿದ್ದು, 10,958 ಮಂದಿ ಸಾವಿಗೀಡಾಗಿದ್ದಾರೆ. 2020ರಲ್ಲಿ 34,178 ಅಪಘಾತಗಳಲ್ಲಿ 9,760 ಜನರು ಸಾವಿಗೀಡಾಗಿದ್ದಾರೆ. 2021ರಲ್ಲಿ 34,647 ಅಪಘಾತಗಳಲ್ಲಿ 10,038 ಮಂದಿ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 2022ರ ನವೆಂಬರ್‌ವರೆಗೆ ರಾಜ್ಯದಲ್ಲಿ 36,100 ಅಪಘಾತಗಳು ಸಂಭವಿಸಿರುವುದು ವರದಿ ಆಗಿದೆ. ಇನ್ನು ಅತಿ ಹೆಚ್ಚು ಅಪಘಾತಗಳು ಬೆಂಗಳೂರು ನಗರದಲ್ಲಿ ಸಂಭವಿಸಿವೆ. 3,479 ಅಪಘಾತಗಳು ಬೆಂಗಳೂರು ನಗರದಲ್ಲಿ ಸಂಭವಿಸಿದ್ದು, 670 ಮಂದಿ ಸಾವಿಗೀಡಾಗಿದ್ದಾರೆ. ಎರಡನೇ ಸ್ಥಾನದಲ್ಲಿ ತುಮಕೂರು ಜಿಲ್ಲೆಯಲ್ಲಿ 2,064 ಅಪಘಾತಗಳು ಸಂಭವಿಸಿದ್ದು 677 ಮಂದಿ ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1,764 ಅಪಘಾತಗಳು ನಡೆದಿದ್ದು, 602 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.  

ಚರ್ಮಗಂಟು ರೋಗ ನಿಯಂತ್ರಿಸಲು ಜಿಲ್ಲೆಗಳಿಗೆ 37.5 ಲಕ್ಷ ಲಸಿಕೆ: ಪ್ರಭು ಚವ್ಹಾಣ 

Published On: 22 December 2022, 12:50 PM English Summary: Road safety control authority in the state, what is the reason?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.