1. ಸುದ್ದಿಗಳು

ವಧು ಹುಡುಕಿಕೊಡಿ ಎಂದು ಕುದುರೆಯಲ್ಲಿ ಬಂದರು!

Hitesh
Hitesh
Search for the bride and come in a horse!

ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲ. ನಮಗೆ ಹೆಣ್ಣು ಹುಡುಕಿಕೊಡಿ ಎಂದು ಹಲವು ಯುವಕರು ಭಿನ್ನವಾದ ಮನವಿ ಸಲ್ಲಿಸಿರುವುದು ನೀವು ನೋಡರುತ್ತೀರಿ. ಇದೀಗ ಅಂತಹದ್ದೇ ಮತ್ತೊಂದು ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.  

ಚೀನಾವನ್ನು ಕಾಡುತ್ತಿರುವ ಬಿಎಫ್‌7 ವೈರಸ್‌ ಭಾರತಕ್ಕೂ ಎಂಟ್ರಿ! 

ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲ ನಮಗೆ ಹೆಣ್ಣು ಹುಡುಕಿಕೊಡಿ ಎಂದು ವರರ ಸಂಘ ಮೆರವಣಿಗೆ ನಡೆಸಿದೆ.  ಅಲ್ಲದೇ ಈ ಮೆರವಣಿಗೆಯಲ್ಲಿ ಮದುವೆಯಾಗಲು ವಧುವನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಮನವಿ ಸಹ ಮಾಡಿದ್ದಾರೆ. 

ಮದುವೆಯ ಸಮವಸ್ತ್ರವನ್ನು ಧರಿಸಿ, ಕುದುರೆಯ ಮೇಲೆ ಕುಳಿತು ವಿನೂತನ ಪ್ರತಿಭಟನಾ ಮೆರವಣಿಗೆ ಮಾಡಿರುವುದು ಸ್ಥಳೀಯರನ್ನು ನಗೆಗಡಲಲ್ಲಿ ತೇಲಿಸಿದೆ. ಈ ರೀತಿ ಮೆರವಣಿಗೆ ಮಾಡುವ ಮೂಲಕ ಯುವಕರು ವಿವಾಹವಾಗಲು ವಧುವಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

PM Kisan| ಪಿ.ಎಂ ಕಿಸಾನ್‌ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ 

ನೂರಾರು ಅವಿವಾಹಿತರು ಮದುವೆಯ ಬಟ್ಟೆ ಧರಿಸಿ ಬಂದಿದ್ದರು. ಅಲ್ಲದೇ ಹಲವರು ಕುದುರೆ ಏರಿ ಆಗಮಿಸಿದ್ದರು. ವಾದ್ಯ ಮೇಳವೂ ಇದಿದ್ದು ವಿಶೇಷವಾಗಿತ್ತು.  

ವಧು–ವರರ ಮೋರ್ಚಾ ಎನ್ನುವ ಸಂಘಟನೆಯ ಸದಸ್ಯರು ಬುಧವಾರ ವಿಶೇಷ ದಿರಿಸು ಧರಿಸಿ ಮೆರವಣಿಗೆ ಮಾಡಿದರು.

ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮಹಾರಾಷ್ಟ್ರದಲ್ಲಿ ಗಂಡು –ಹೆಣ್ಣು ಅನುಪಾತ ಹೆಚ್ಚಿಸಲು ಪ್ರಸವ ಪೂರ್ವ ಜಾಗೃತಿ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಅಲ್ಲದೇ ಜನರು ಈ ಮೆರವಣಿಗೆಯನ್ನು ಹಾಸ್ಯವಾಗಿ ಕಾಣಬಹುದು. ಆದರೆ, ಗಂಡು–ಹೆಣ್ಣು ಅನುಪಾತದಲ್ಲಿ ಇಳಿಕೆಯಾಗಿರುವುದರಿಂದ ವಿವಾಹವಾಗಬಯಸುವ ಗಂಡು ಮಕ್ಕಳಿಗೆ ವಧು ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಗಂಡು–ಹೆಣ್ಣು ಅನುಪಾತ 1000:889 ಇದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Heavy Rain| ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ! 

Published On: 22 December 2022, 02:41 PM English Summary: Search for the bride and come in a horse!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.