1. ಸುದ್ದಿಗಳು

ಅಂತರರಾಜ್ಯ ಎತ್ತಿನಗಾಡಿ ಓಟದ ಸ್ಪರ್ಧೆ; ರೈತ ಸಾವು, ಕ್ರಮಕ್ಕೆ ಆಗ್ರಹ

Hitesh
Hitesh
Bullock Race

ಎತ್ತಿನಗಾಡಿ ಓಟದ ಸ್ಪರ್ಧೆ ಇಬ್ಬರ ಜೀವಕ್ಕೆ ಕುತ್ತಾದ ಘಟನೆ ಮಂಡ್ಯಾದಲ್ಲಿ ನಡೆದಿದೆ. ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಪ್ರೇಕ್ಷಕನ ಮೇಲೆ ಗಾಡಿ ಚಕ್ರ ಹರಿದು ಒಬ್ಬರು ರೈತ ಸಾವನ್ನಪ್ಪಿದ್ದು. ಬಾಲಕರೊಬ್ಬರಿಗೆ ತೀವ್ರ ಗಾಯಗೊಂಡಿದ್ದಾರೆ.

ದೆಹಲಿಯ ಪೆರೇಡ್‌: ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ!

ಮಂಡ್ಯದ ಚಿಕ್ಕಮಂಡ್ಯ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಪ್ರೇಕ್ಷಕನ ಮೇಲೆ ಗಾಡಿ ಚಕ್ರ ಹರಿದಿದೆ. ಇಲ್ಲಿನ ಕೀಲಾರ ಗ್ರಾಮದ ನಾಗರಾಜು (42) ಎತ್ತಿನ ಗಾಡಿ ಚಕ್ರ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ ರೈತ. ಹುಲಿವಾನ ಗ್ರಾಮದ ಋತ್ವಿಕ್ (10) ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.  

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ

ಹಳ್ವಿಕೇಶ್ವರ ಬೋರೇಶ್ವರ ಮತ್ತು ರೈತ ಮಿತ್ರ ಬಳಗದ ಸಹಯೋಗದಲ್ಲಿ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದ ಬಳಿ 8ನೇ ವರ್ಷದ ಅಂತರರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಕೀಲಾರ ಗ್ರಾಮದ ಮಧು, ಚಿಕ್ಕಮಂಡ್ಯ ಗ್ರಾಮದ ನರಸಿಂಹ, ಆನಂದ, ರಾಜಪ್ಪ ಅವರು ಆಯೋಜಿಸಿದ್ದರು.

ಸ್ಪರ್ಧೆಯಲ್ಲಿ ಭಾಗವಹಿಸಲು ಸುತ್ತಮುತ್ತಲಿನ ಹಲವು ಹಳ್ಳಿಗಳಿಂದ ಜನ ಭಾಗವಹಿಸಿದ್ದರು. ಅಲ್ಲದೇ ನೂರಾರು ಜನ ಸ್ಪರ್ಧೆಯನ್ನು ನೋಡಲು ಸೇರಿದ್ದರು. ಆದರೆ, ಸಂಭ್ರಮದ ವಾತಾವರಣವು ಕೆಲವೇ ಕ್ಷಣಗಳಲ್ಲಿ ಸೂತಕದ ಚಾಯೆ ಮೂಡಿತು.

ಒಂದು ಕಡೆಯಿಂದ ಪ್ರಾರಂಭವಾದ ಓಟದ ಸ್ಪರ್ಧೆ ಮತ್ತೊಂದು ತುದಿ ತಲುಪಿತ್ತು. ಮತ್ತೊಂದು ತುದಿಯಲ್ಲಿ ಸಾರ್ವಜನಿಕರು ನಿಂತು ನೋಡುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಎತ್ತಿನ ಗಾಡಿ ಜನರ ಮೇಲೆಯೇ  ಎರಗಿದೆ ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಈ ವೇಳೆ ನಾಗರಾಜುಗೆ ಗಾಡಿಯ ಮುಂಬದಿ ಡಿಕ್ಕಿ ಹೊಡೆ ಪರಿಣಾಮ ಅವರು ಕೆಳಗೆ ಬಿದ್ದಿದ್ದು, ಅವರ ಮೇಲೆಯೇ  ಚಕ್ರ ಹರಿದು ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಳಗೆ ಬಿದ್ದ ಋುತ್ವಿಕ್ ಕಾಲ್ತುಳಿತಕ್ಕೊಳಗಾಗಿ ಗಾಯಗೊಂಡಿದ್ದಾರೆ. ಕೂಡಲೇ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಎಂಬವರು ಸಾವನ್ನಪ್ಪಿದ್ದಾರೆ.

Aadhaar Card| ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು! Pan Card

ಗಂಭೀರವಾಗಿ ಗಾಯಗೊಂಡಿರುವ ಋತ್ವಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ನಾಗರಾಜು ರೈತ ಸಂಘದ ಸಕ್ರಿಯ ಕಾರ್ಯಕರ್ತನಾಗಿ ಆರ್ಗ್ಯಾನಿಕ್ ಮಂಡ್ಯ ಸಂಸ್ಥೆಯ ಫೀಲ್ಡ್ ಎಕ್ಸಿಕ್ಯೂಟಿವ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.  

ಈ ನಡುವೆ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಿದ್ದ ಮಧು ಹಾಗೂ ಇತರು ಸ್ಪರ್ಧೆಗೆ ಸಂಬಂಧಿಸಿದಂತೆ  ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.

ಕಂದಾಯ ನಿರೀಕ್ಷಕರು ಜಾನುವಾರುಗಳಿಗೆ ಗಂಟು ರೋಗ ಇರುವುದರಿಂದ ಸ್ಪರ್ಧೆಯನ್ನು ಮುಂದೂಡುವಂತೆ ನೋಟಿಸ್ ನೀಡಿದ್ದರೂ, ಅದನ್ನು ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.  

ಸ್ಪರ್ಧಿಗಳಿಂದ ತಲಾ 4 ಸಾವಿರ ರೂಪಾಯಿಗಳಂತೆ ಪ್ರವೇಶ ಶುಲ್ಕ ವಸೂಲಿ ಮಾಡಲಾಗಿತ್ತು. ಗೆದ್ದವರಿಗೆ ಬುಲೆಟ್, ಪಲ್ಸರ್, ಹೋಂಡಾ ಶೈನ್ ಸೇರಿ ಆರು ದ್ವಿಚಕ್ರ ವಾಹನಗಳ ಬಹುಮಾನ ಪ್ರಕಟಿಸಲಾಗಿತ್ತು. ಆದರೆ, ದುರ್ಘಟನೆಯಿಂದ ಸ್ಪರ್ಧೆ ಅರ್ಧಕ್ಕೆ ನಿಂತಿದೆ. 

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ 

Published On: 09 January 2023, 11:57 AM English Summary: Interstate Bullock Race; Farmer's death, demand for action

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.