1. ಸುದ್ದಿಗಳು

ಗವಿಸಿದ್ಧೇಶ್ವರ: ಅಜ್ಜನ ಜಾತ್ರಾ ಮಹೋತ್ಸವಕ್ಕೆ ಸಾಗರದಂತೆ ಬಂದ ಭಕ್ತರು!

Hitesh
Hitesh
Gavisiddheshwar

ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧ ಗಳಿಸಿರುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಭಾನುವಾರದಿಂದ ಆರಂಭವಾಗಿದೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ದರ ?

ಜನ ಈ ಜಾತ್ರೆಗೆ ತನು, ಮನ ಅರ್ಪಿಸಿ ಸೇವೆ ಮಾಡುತ್ತಿದ್ದಾರೆ. ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರು ಸಾಗರದಂತೆ ಹರಿದು ಬರುತ್ತಿದ್ದಾರೆ. ಮುಂದಿನ ಎರಡು ವಾರದಲ್ಲಿ 10ಲಕ್ಷಕ್ಕೂ ಹೆಚ್ಚು ಜನರ ಬರುವ ಸಾಧ್ಯತೆ ಇದೆ.

ದಾಸೋಹದ ಅಡುಗೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು,   ಈಗಾಗಲೇ 22 ಲಕ್ಷ ಜೋಳದ ರೊಟ್ಟಿಗಳು ಸಿದ್ಧಗೊಂಡಿವೆ.

ಹಲವು ದಶಕಗಳಿಂದ ಮಠಗಳ ಸುತ್ತಲಿನ ಗ್ರಾಮಸ್ಥರು ಜಾತ್ರೆ ಪ್ರಾರಂಭವಾಗುವ ಮುನ್ನವೇ ಜೋಳದ ಹಿಟ್ಟಿನಿಂದ ರೊಟ್ಟಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಈಗಾಗಲೇ ಜೋಳದ ರೊಟ್ಟಿಗಳಿದ್ದ ಟ್ರಕ್ ಗಳು ಮಠದ ಆವರಣಕ್ಕೆ ಬಂದಿದ್ದು, ರೊಟ್ಟಿಗಳ ಸಂಗ್ರಹಿಸಲು ಮಠದ ಬಳಿ ದೊಡ್ಡ ಪಂಡಾಲ್ ನ್ನು ಹಾಕಲಾಗಿದೆ. ಭದ್ರತೆ ಗಾಗಿ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸ್ವಚ್ಛತೆಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳಉ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Aadhaar Card| ಆಧಾರ್ ಕಾರ್ಡ್ ನವೀಕರಣ: UIDAI ಟೋಲ್ ಫ್ರೀ ಸಂಖ್ಯೆ ಪರಿಚಯ

ಹಲವು ವರ್ಷಗಳಿಂದಲೂ ಮಠಧೀಶಕರು ಬಡವರಿಗೆ ಊಟ ಹಾಗೂ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ.    

ಜೋಳದ ರೊಟ್ಟಿಗಳಷ್ಟೇ ಅಲ್ಲದೆ ಸಾವಿರಾರು ಜನ ಮಾಡ್ಲಿ ಸಿಹಿ ಖಾದ್ಯವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.

ಮಹಾದಾಸೋಹದಲ್ಲಿ ಲಕ್ಷ ಲಕ್ಷ ಭಕ್ತರು ನಿತ್ಯವೂ ಪ್ರಸಾದ ಸ್ವೀಕರಿಸಲಿದ್ದಾರೆ. ಮೊದಲೆರಡು ದಿನ 2 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಲಿದ್ದಾರೆ. ಶೇಂಗಾ ಹೋಳಿಗೆಯನ್ನು ತಂದಿರುವ ಲಾರಿಯನ್ನೇ ಮಹಾದಾಸೋಹದಲ್ಲಿ ನಿಲ್ಲಿಸಿ, ಶೇಂಗಾ ಹೋಳಿಗೆ ಬಳಕೆ ಮಾಡುತ್ತಿರುವುದು ವಿಶೇಷ.

ಕೊಪ್ಪಳದಲ್ಲಿ ಭಾನುವಾರದಿಂದ ನಡೆಯುವ ಗವಿಮಠದ ಜಾತ್ರೆಯ ದಾಸೋಹಕ್ಕೆ ವಾಣಿಜ್ಯ ಪಟ್ಟಣ ಕಾರಟಗಿಯಿಂದ ಶನಿವಾರ ಒಟ್ಟು 25 ಟನ್‌ ಅಕ್ಕಿಯನ್ನು ಶ್ರೀಮಠಕ್ಕೆ ಕಳುಹಿಸಿಕೊಡಲಾಯಿತು.  ಎಪಿಎಂಸಿಯಲ್ಲಿ ಅಕ್ಕಿ ಗಿರಣಿ ಮಾಲೀಕರು, ದಲ್ಲಾಳಿ ವರ್ತಕರು ಹಾಗೂ ಭಕ್ತರು ಸೇರಿಕೊಂಡು ಅಕ್ಕಿ ತುಂಬಿದ ಲಾರಿಯನ್ನು ಪೂಜೆ ಸಲ್ಲಿಸಿ ಶ್ರೀಮಠಕ್ಕೆ ಕಳುಹಿಸಿಕೊಟ್ಟು ಕೈಮುಗಿದರು.

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಮದ್ಯ ಪೂರೈಕೆ ತಡೆಗೆ ಚಿಂತನೆ!

ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಗಳು ನಡೆದಿರಲಿಲ್ಲ. ಈ ವರ್ಷ ಕೊರೊನಾ ನಾಲ್ಕನೆಯ ಅಲೆ ಭೀತಿಯ ಮಧ್ಯೆಯೂ ಜಾತ್ರೆಗಳು ನಡೆಯುತ್ತಿವೆ.  

ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರೆಯು ಅದ್ಧೂರಿಯಾಗಿ ಆರಂಭವಾಗಿದೆ.2017 ರಿಂದ ಜಾತ್ರೆಯ ಸಂದರ್ಭದಲ್ಲಿ ತೆಪ್ಪೋತ್ಸವ ನಡೆಯುತ್ತಿದೆ.   ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಆಕರ್ಷಣೆಗಳಲ್ಲಿ ಒಂದಾದ ತೆಪ್ಪೋತ್ಸವ ಕಾರ್ಯಕ್ರಮವು ಶ್ರೀ ಗವಿಮಠದ ಕೆರೆಯ ದಡದಲ್ಲಿ ಜರುಗಿತು. ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ಶ್ರೀ ಮಠದ ಆವರಣದಲ್ಲಿ ಜರುಗಿತು.

ಜಾತ್ರಾ ಮಹೋತ್ಸವದಲ್ಲಿ ಅತ್ಯಂತ ಕಣ್ಮನ ಸೆಳೆಯುವ ಉತ್ಸವ ತೆಪ್ಪೋತ್ಸವ. ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಮಹಾಮಹಿಮ ಕರ್ತೃ ಗವಿಶಿದ್ಧೇಶನನ್ನು ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ.  

ದೆಹಲಿಯ ಪೆರೇಡ್‌: ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ!   

Gavisiddheshwar

ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆ ತಂದು ಬಾಳೆ, ಕಬ್ಬು, ಮಾವಿನ ತಳಿರು ತೋರಣ, ಹಾಗೂ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಇರಿಸಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮೂಹೂರ್ತಗೊಳಿಸಿದ ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಭಕ್ತಾಧಿಗಳು ಹಗ್ಗದ ಮೂಲಕ ಹಾಗೂ ಅಂಬಿಗರು ಹುಟ್ಟು ಹಾಕಿ ಸಾಗಿಸಿದರು ವಿಶೇಷವಾಗಿತ್ತು.  ಇದಕ್ಕೆ ಸಾವಿರಾರು ಜನ ಸಾಕ್ಷಿಯಾದರು. 

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ  

Published On: 08 January 2023, 05:48 PM English Summary: Gavisiddheshwar: Devotees who came like an ocean for Ajjana Jatra Mahotsava!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.