ಸ್ವಾತಂತ್ರ್ಯ ಹೋರಾಟದ ಬಿಸಿ ದೇಶಾದ್ಯಂತ ಹಬ್ಬಿದ್ದ ಸಮಯಯದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧಿ ಹಾಗೂ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರು ಒಂದು ಕರೆ ಕೊಟ್ಟರೆ ಇಡೀ ದೇಶಕ್ಕೆ ದೇಶವೇ ಅವರ ಹಿಂದೆ ಇರುತ್ತಿತ್ತಂತೆ. ಸ್ವಾತಂತ್ರ್ಯ ಪೂರ್ವದ ಮಾತೇಕೆ, ಗೋಕಾಕ್ ಚಳವಳಿ ಸಂದರ್ಭದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರು ನೀಡಿದ ಒಂದೇ ಒಂದು ಕರೆಗೆ ಓಗೊಟ್ಟು ಇಡೀ ಕರ್ನಾಟಕವೇ ಅವರ ಬೆಂಬಲಕ್ಕೆ ನಿಂತಿದ್ದು ಈಗಲೂ ಕನ್ನಡ ಹೋರಾಟಗಾರರ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿದೆ. ಆದರೆ ಇಂದು ಅಂತಹ ಪ್ರಬುದ್ಧ ಹಾಗೂ ಪ್ರಭಾವಿ ನಾಯಕರೂ ಇಲ್ಲ. ನಾಯಕರು ಕರೆದರು ಎಂದು ಹಿಂದೆ ಹೋಗುವ ಜನರೂ ಇಲ್ಲ. ಆದರೆ ಜಗತ್ತಿನಾದ್ಯಂತ ಕ್ರೀಡೆಯ ಹುಚ್ಚು ಹಚ್ಚಿಕೊಂಡಿರುವ, ಪ್ರಖ್ಯಾತ ಕ್ರೀಡಾಪಟುಗಳನ್ನೇ ಆರಾಧ್ಯ ದೈವವೆಂದು ನಂಬಿರುವ ಕೋಟ್ಯಂತ ಅಭಿಮಾನಿಗಳಿದ್ದಾರೆ.
ಜನಬೆಂಬಲ, ಫ್ಯಾನ್ ಫಾಲೋಯಿಂಗ್, ಕ್ರೀಡಾಭಿಮಾನದ ಬಗ್ಗೆ ಇಷ್ಟಲ್ಲಾ ಹೇಳಲು ಕಾರಣವಿದೆ. ಅದೇನೆಂದರೆ ವಿಶ್ವದ ನಂ.1 ಫುಟ್ಬಾಲ್ ಆಟಗಾರ, ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ನೀಡಿದ ಒಂದೇ ಒಂದು ಹೇಳಿಕೆ ಕೊಕಾಕೋಲಾದಂತಹ ದೈತ್ಯ ಕಾಪೊರೇಟ್ ಕಂಪನಿಯಲ್ಲಿ ಕೋಲಾಹಲ ಸೃಷ್ಟಿಸಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಬಂದಿದ್ದ ಕ್ರಿಸ್ಟಿಯಾನೊ ರೊನಾಲ್ಡೊ, ಜನರಿಗೆ ‘ನೀರು ಕುಡಿಯಿರಿ, ಆರೋಗ್ಯವಾಗಿರಿ’ ಎಂಬ ಸಂದೇಶ ನೀಡಿದ್ದರು. ಫುಟ್ಬಾಲ್ ತಾರೆ ನೀಡಿದ ಈ ಒಂದೇ ಒಂದು ಸಂದೇಶದಿAದ ಕೋಲಾ ಕಂಪನಿ ಒಂದೇ ದಿನದಲ್ಲಿ ಬರೋಬ್ಬರಿ 29 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
ನಡೆದದ್ದೇನು?
ಈಗ ಯೂರೊ ಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದೆ. ಈ ಟೂರ್ನಿಯ ‘ಇ’ ಗುಂಪಿನ ತಂಡಗಳಾಗಿರುವ ಪೋರ್ಚುಗಲ್ ಮತ್ತು ಹಂಗೇರಿ ನಡುವೆ ಮಂಗಳವಾರ ಪಂದ್ಯ ನಡೆದಿತ್ತು. ಪಂದ್ಯ ಆರಂಭಕ್ಕೂ ಮುನ್ನ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು, ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಪತ್ರಿಕಾ ಗೋಷ್ಠಿಗೆ ಬಂದರು. ಬಂದವರೇ ಎಲ್ಲರಿಗೂ ವಿಷ್ ಮಾಡಿ, ಇನ್ನೇನು ಕುರ್ಚಿ ಮೇಲೆ ಆಸೀನರಾಗಬೇಕು, ಎದುರಿಗಿದ್ದ ಕೋಲಾ ಪಾನೀಯದ ಬಾಟಲಿಗಳನ್ನು ನೋಡಿ ಕೋಪಗೊಂಡAತೆ ಕಂಡರು. ತಕ್ಷಣ ಕೋಲಾ ಬಾಟಲಿಗಳನ್ನು ಪಕ್ಕಕ್ಕೆ ಸರಿಸಿ, ಅಲ್ಲೇ ಇದ್ದ ನೀರಿನ ಬಾಟಲಿ ಕೈಗೆ ತೆಗೆದುಕೊಂಡು, ಅದನ್ನು ಕ್ಯಾಮೆರಾಗಳತ್ತ ತೋರಿಸುತ್ತಾ, ‘ನೀರು ಕುಡಿಯಿರಿ, ಆರೋಗ್ಯವಾಗಿರಿ’ ಎಂದು ಸಂದೇಶ ನೀಡಿದರು.
ಕೋಲಾ ಕಂಪನಿಗೆ ಭಾರೀ ನಷ್ಟ!
ರೊನಾಲ್ಡೊ ಅಷ್ಟು ಹೇಳಿದ್ದೇ ತಡ, ಪತ್ರಿಕಾಗೋಷ್ಠಿ ಮುಗಿದು ಪಂದ್ಯ ಪ್ರಾರಂಭವಾಗುವಷ್ಟರಲ್ಲಿ ಸ್ಟಾರ್ ಫುಟ್ಬಬಾಲಿಗ ‘ನೀರು ಕುಡಿಯಿರಿ’ ಎಂಬ ಸಂದೇಶ ನೀಡಿದ್ದ ವಿಡಿಯೋ ಟ್ವಿಟರ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಆದರೆ ರೊನಾಲ್ಡೊ ನೀಡಿದ ಈ ಒಂದು ಸಂದೇಶದಿAದಾಗಿ ತನಗೆ ಇಷ್ಟೊಂದು ನಷ್ಟವಾಗಲಿದೆ ಎಂದು ಕೋಲ ಕಂಪನಿ ಕೂಡ ನಿರೀಕ್ಷಿಸಿರಲಿಕ್ಕಿಲ್ಲ. ಈ ಮೊದಲು 56.10 ಡಾಲರ್ ಇದ್ದ ಪಾನೀಯ ಸಂಸ್ಥೆಯ ಶೇರು ಮೌಲ್ಯ, ಖ್ಯಾತ ಫುಟ್ಬಾಲಿಗ ಕೋಲಾ ಬಾಟಲ್‌ಗಳನ್ನು ಪಕ್ಕಕ್ಕೆ ಸರಿಸಿದ ಘಟನೆ ಬೆನ್ನಲ್ಲೆ ಶೇ.1.6 ಡಾಲರ್ ಕುಸಿತ ಕಂಡು, 55.22 ಡಾಲರ್‌ಗೆ ಇಳಿಯಿತು. ಅಲ್ಲದೆ, ಈ ಮೊದಲು 242 ಬಿಲಿಯನ್ ಡಾಲರ್ ಇದ್ದ ಕಂಪನಿಯ ಮಾರುಕಟ್ಟೆ ಮೌಲ್ಯ ದಿಢೀರನೆ 4 ಬಿಲಿಯನ್ ಡಾಲರ್ ಕುಸಿದು 238 ಬಿಲಿಯನ್ ಡಾಲರ್ ತಲುಪಿತು.
ಇನ್ನು ಯುರೋ 2020 ಟೂರ್ನಿಯಗೆ ಅಧಿಕೃತ ಪ್ರಾಯೋಜಕತ್ವ ಸಂಸ್ಥೆಯಾಗಿರುವ ಕೊಕಾಕೋಲಾ, ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ವಿಭಿನ್ನ "ಅಭಿರುಚಿ ಮತ್ತು ಅಗತ್ಯತೆಗಳೊಂದಿಗೆ" ಪ್ರತಿಯೊಬ್ಬರೂ ತಮ್ಮ ಪಾನೀಯದ ಆಯ್ಕೆ ಮತ್ತು ಆದ್ಯತೆಗಳಿಗೆ ಅರ್ಹರಾಗಿದ್ದಾರೆ" ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮನುಷ್ಯನ ದೇಹದಲ್ಲಿ ಶೇ.60ರಷ್ಟು ನೀರಿದೆ. ಹೀಗಾಗಿ ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲ ಹೆಚ್ಚು ಹೆಚ್ಚು ನೀರು ಕಡಿಯಬೇಕು. ಈ ಸೂತ್ರ ಅರ್ಥ ಮಾಡಿಕೊಂಡಿರುವ ರೊನಾಲ್ಡೊ, ಜನರಿಗೆ ‘ನೀರು ಕುಡಿಯಿರಿ, ಆರೋಗ್ಯದಿಂದಿರಿ’ ಎಂಬ ಆರೋಗ್ಯಕರ ಸಂದೇಶ ನೀಡಿದ್ದಾರೆ. ನೀವು ರೊನಾಲ್ಡೋ ಅಭಿಮಾನಿ ಆಗಿರಿ, ಆಗಿಲ್ಲದಿರಿ; ನೀರು ಕುಡಿದು ಆರೋಗ್ಯದಿಂದಿರಿ!
ಅAದಹಾಗೆ, ಮಂಗಳವಾರ ನಡೆದ ಪಂದ್ಯದಲ್ಲಿ ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ತಂಡ, ಹಂಗೇರಿ ವಿರುದ್ಧ 3-0 ಗೋಲುಗಳ ಅಂತರದಿAದ ಜಯಯ ಗಳಿಸಿತು. ಈ ಪೈಕಿ ಎರಡು ಗೋಲು ಗಳಿಸಿದ ಕ್ರಿಸ್ಟಿಯಾನೊ ರೊನಾಲ್ಡೊ, ಯುರೋ ಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲುಗಳಿಸಿದ ಫುಟ್ಬಾಲಿಗ ಎಂಬ ಹೊಸ ದಾಖಲೆ ಬರೆದರು. ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ಅತ್ಯಂತ ಜನಪ್ರಿಯ ಫುಟ್ಬಾಲ್ ಆಟಗಾರರಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ 300 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.
Share your comments