ಅಡುಗೆ ಅನೀಲ (ಎಲ್ಪಿಜಿ) ಸಿಲಿಂಡರ್ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ದೇಶಾದ್ಯಂತ 26.12 ಕೋಟಿಗೂ ಹೆಚ್ಚು ಎಲ್ಪಿಜಿ ಗ್ರಾಹಕರಿಗೆ ಸಿಗುತ್ತಿದ್ದ 'ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್' ಯೋಜನೆ (DBT) ಯಡಿ ಇನ್ನುಮುಂದೆ ಯಾವುದೇ ಸಬ್ಸಿಡಿ (Subsidy) ಸಿಗುವುದಿಲ್ಲ. ಇದರಿಂದಾಗಿ ಕೋಟ್ಯಂತರ ಗ್ರಾಹರಿಗೆ ನಿರಾಶೆಯಾಗಲಿದೆ.
ಜಾಗತಿಕ ತೈಲ ಬೆಲೆಗಳ ಕುಸಿತ ಮತ್ತು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗಾಗ್ಗೆ ಏರಿಕೆ ಆಗುತ್ತಿರುವುದರಿಂದ ದೇಶೀಯ ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿಯನ್ನು ಸ್ಥಗಿತಗೊಳಿಸಿದ್ದರಿಂದ ಅಡುಗೆ ಅನಿಲ ಸಬ್ಸಿಡಿ ದೇಶದ ಜನರ ಖಾತೆಯಲ್ಲಿ ಜಮೆ ಆಗುವುದಿಲ್ಲ.
ಜಾಗತಿಕ ಮಟ್ಟದಲ್ಲಿ ತೈಲ ದರ ಕುಸಿತ ಹಾಗೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿನ ನಿಯಮಿತ ಏರಿಕೆಯಿಂದಾಗಿ ಎಲ್ಪಿಜಿ ದರವು ಮಾರುಕಟ್ಟೆ ದರಕ್ಕೆ ಸಮವಾಗಿರುವ ಕಾರಣ, ಸಬ್ಸಿಡಿ ಮೊತ್ತವನ್ನು ಸಂಪೂರ್ಣವಾಗಿ ರದ್ದು ಮಾಡುತ್ತಿರುವುದಾಗಿ ಘೋಷಿಸಿದೆ. ಸೆ. 1ರಂದು ಸಬ್ಸಿಡಿಸಹಿತ ಮತ್ತು ಸಬ್ಸಿಡಿರಹಿತ 14.2 ಕೆಜಿ ಅಡುಗೆ ಅನಿಲದ ದರವು ಸಿಲಿಂಡರ್ಗೆ 594 ರೂಪಾಯಿ ಆಗಿದೆ. ಹೀಗಾಗಿ ಖಾತೆಗೆ ನೇರ ವರ್ಗಾವಣೆಯ ರೂಪದಲ್ಲಿ ಇನ್ನು ಮುಂದೆ ಫಲಾನುಭವಿಗಳಿಗೆ ಸಬ್ಸಿಡಿಯನ್ನು ನೀಡುವ ಅಗತ್ಯವಿಲ್ಲ ಎಂದು ಸರಕಾರ ಹೇಳಿದೆ.
ವಾಸ್ತವವಾಗಿ, ಪ್ರಸ್ತುತ ಆರ್ಥಿಕ ವರ್ಷದ ಆರಂಭದಿಂದಲೇ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲದ ನಡುವಿನ ಬೆಲೆಯ ಅಂತರ ಕಡಿಮೆಯಾಗುತ್ತಿತ್ತು. ಸರ್ಕಾರವು ಕಳೆದ ನಾಲ್ಕು ತಿಂಗಳುಗಳಿಂದ ಯಾವುದೇ ಫಲಾನುಭವಿಗಳ ಖಾತೆಗಳಿಗೆ ಸಬ್ಸಿಡಿ ಪಾವತಿಸಿರಲಿಲ್ಲ. ಸಬ್ಸಿಡಿ ಪಾವತಿ ಮಾಡಿಲ್ಲದಿರುವುದಕ್ಕೆ ಸರಕಾರ ಯಾವುದೇ ಕಾರಣ ತಿಳಿಸಿರಲಿಲ್ಲ. ಇದೀಗ ಗ್ಯಾಸ್ ಸಿಲಿಂಡರ್ಗಳ ಮೇಲಿನ ಸಬ್ಸಿಡಿಯನ್ನು ಸಂಪುರ್ಣವಾಗಿ ಸ್ಥಗಿತಗೊಳಿಸಿದೆ.
ಇನ್ನು ಮುಂದೆ ನಾನ್ ಸಬ್ಸಿಡಿ ಮತ್ತು ಸಬ್ಸಿಡಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ದೇಶಾದ್ಯಂತ 26.12 ಕೋಟಿಗೂ ಹೆಚ್ಚು ಎಲ್ಪಿಜಿ ಗ್ರಾಹಕರಿದ್ದರು. 18 ಕೋಟಿ ಗ್ರಾಹಕರು ಗ್ಯಾಸ್ ಸಿಲಿಂಡರ್ಗಳಿಗೆ ಯಾವುದೇ ಸಬ್ಸಿಡಿ ಪಡೆಯುವುತ್ತಿರಲಿಲ್ಲ. ಅಂದರೆ ಸದ್ಯ ದೇಶದಲ್ಲಿ ಸುಮಾರು 45 ಕೋಟಿ ಎಲ್ಪಿಜಿ ಗ್ರಾಹಕರಿದ್ದಾರೆ. ಇನ್ನೂ ಮುಂದೆ ಯಾರೇ ಸಿಲಿಂಡರ್ ಪಡೆಯಬೇಕೆಂದರೂ ಏಕರೂಪದ ಬೆಲೆ ಪಾವತಿಸಬೇಕು.
Share your comments