1. ಸುದ್ದಿಗಳು

ಅನ್ನಭಾಗ್ಯ ಯೋಜನೆಯಡಿ ರಾಗಿ ವಿತರಣೆ- ಬೇಡಿಕೆಯಲ್ಲಿ ಹೆಚ್ಚಳ

ಅತ್ಯದಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವನ್ನೊಳಗೊಂಡ ರಾಗಿಗೆ ಈಗ ಹೆಚ್ಚು ಬೇಡಿಕೆ ಬರುತ್ತಿದೆ. ವಿಶೇಷವಾಗಿ ರಾಮನಗರ, ಹಾಸನ,ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳೆಯುವ ಈ ರಾಗಿಗೆ ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಸರ್ಕಾರ ನಿರ್ಧರಿಸಿದ್ದರಿಂದ ಹೆಚ್ಚು ಬೇಡಿಕೆ ಬರುತ್ತಿದೆ.

ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ರಾಗಿಗೆ 3150 ರೂಪಾಯಿ ಬೆಂಬಲ ಬೆಲೆ ಘೋಷಿಸಿದ್ದರಿಂದ ಈ ವರ್ಷ ಬಿತ್ತಣಿಕೆಯೂ ಹೆಚ್ಚಾಗಿದೆ. ಜನರು ಆರೋಗ್ಯಕ್ಕೆ ಹೆಚ್ಚು ಮಹತ್ವಕೊಡುತ್ತಿದ್ದರಿಂದ ಬೇಡಿಕೆ ಸಹಜವಾಗಿ ಹೆಚ್ಚಾಗಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರದಾರರು ರಾಗಿ ಸ್ವೀಕರಿಸುತ್ತಾರಾ ಎಂಬ ಅನುಮಾನ ಇತ್ತಾದರೂ ಉತ್ತಮ ಸ್ಪಂದನೆ ದೊರೆತು ಈಗ  3 ತಿಂಗಳು ದಾಸ್ತಾನು ಖಾಲಿಯಾಗಿದ್ದೆ  ಇದಕ್ಕೆ ನಿದರ್ಶನ. ರೈತ ಸಿರಿ’ ಯೋಜನೆಯಿಂದ ರಾಗಿ ಬಿತ್ತನೆಯಲ್ಲೂ ಸಹ ಹೆಚ್ಚುತ್ತಿದೆ

ಈ ಮಧ್ಯೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಕಾರ್ಡ್ ದಾರರಿಗೆ ತಿಂಗಳಿಗೆ ತಲಾ ಐದು ಕೆಜಿ ಅಕ್ಕಿ ನವೆಂಬರ್ ವರೆಗೂ ಮುಂದುವರೆಯಲಿದ್ದು, ಅದಕ್ಕೆ ಬೇಕಾದ ದಾಸ್ತಾನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 1.25 ಕೋಟಿ ಬಿಪಿಎಲ್ ಕಾರ್ಡಗಳಿದ್ದು,4.32 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ. ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯದ 1.80 ಲಕ್ಷ ಕುಟುಂಬಗಳಿಗೂ ಸಹ ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರ ಧಾನ್ಯ ನೀಡಲಾಗುತ್ತಿದೆ.ಲಾಕ್ಡೌನ್ ನಂತರ ಹೊಸದಾಗಿ ಪಡಿತರ ಕಾರ್ಡಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ರಾಗಿಯ ಬೇಡಿಕೆಯೂ ಹೆಚ್ಚಾಗುತ್ತದೆ.

Published On: 04 September 2020, 09:41 AM English Summary: Demond increase for ragi crop

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.