ಸಿಗರೇಟ್ ನಿಂದಾಗುವ ಆರೋಗ್ಯ ಸಮಸ್ಯೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೆನಡಾ ಸರ್ಕಾರ ಮಹತ್ತರ ಹೆಜ್ಜೆಯನ್ನು ಇಡುತ್ತಿದೆ. ಏನದು ತಿಳಿಯಿರಿ.
ಇದನ್ನೂ ಓದಿರಿ: ಗುಡ್ ನ್ಯೂಸ್; 10 ಲಕ್ಷ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ..!
ಹಲವಾರು ರಾಷ್ಟ್ರಗಳಲ್ಲಿ ಸಿಗರೇಟ್ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತಾದ ಜಾಗೃತಿ ಕಾರ್ಯ ನಡೆಯುತ್ತದೆ.
ಭಾರತದಲ್ಲೂ ಸಿಗರೇಟ್ ಪ್ಯಾಕ್ಗಳ ಮೇಲೆ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶಗಳನ್ನು ನಮೂದಿಸಲಾಗಿರುತ್ತದೆ.
ಆದರೆ, ಈ ವಿಚಾರದಲ್ಲಿ ಕೆನಡಾ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಗುಡ್ನ್ಯೂಸ್: 40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯಲಿದೆ ₹1000 ..! ಅರ್ಜಿ ಸಲ್ಲಿಕೆ ಹೇಗೆ?
ಸಿಗರೇಟ್ನ ಮೇಲೂ ಎಚ್ಚರಿಕೆಯ ಸಂದೇಶ ಮುದ್ರಿಸಲು ಸಿಗರೇಟ್ಗಳಲ್ಲಿಯೂ ತಂಬಾಕು ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳ ಚಿತ್ರಗಳು ಸಂದೇಶಗಳನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ.
ಅಷ್ಟೇ ಅಲ್ಲ, ಪ್ರತಿಯೊಂದು ಸಿಗರೇಟಿನ ಮೇಲೂ "ಸಿಗರೇಟು ಸೇವನೆ ನಿಮ್ಮನ್ನು ಕೊಲ್ಲುತ್ತದೆ' ಎಂಬ ವಾಕ್ಯವನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ.
ಸಿಗರೇಟು ಪ್ಯಾಕ್ನ ಮುಂಭಾಗದಲ್ಲಿ ಅಸ್ವಸ್ಥ ಶ್ವಾಸಕೋಶದ ಚಿತ್ರ ಹಾಕಿ, ಸಿಗರೇಟ್ನಿಂದ ಶ್ವಾಸಕೋಶಕ್ಕೇನು ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಹಾಕಬೇಕೆಂದು ಹೇಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Share your comments