1. ಸುದ್ದಿಗಳು

ಕೃಷಿಗೆ ಸಂಬಂಧಿಸಿದ ಮಾಹಿತಿ. ಮಳೆಯ ಮುನ್ಸೂಚನೆ ಪಡೆಯಲು ಆತ್ಮನಿರ್ಭರ ಕೃಷಿ ಆ್ಯಪ್ ಬಿಡುಗಡೆ

ರೈತರಿಗಿಲ್ಲದೆ ಸಂತಸದ ಸುದ್ದಿ. ಕೃಷಿಗೆ ಸಂಬಂಧಿಸಿದ ವಿಚಾರಗಳ ಕುರಿತಾಗಿ ರೈತರಿಗೆ ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಮಾಹಿತಿ ನೀಡುವ ಆತ್ಮನಿರ್ಭರ ಕೃಷಿ  ಆ್ಯಪ್ ನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹವಾಮಾನ ಇಲಾಖೆಗೆ ಸಂಬಂಧಿಸಿದ ಕೃಷಿ ಮಿತ್ರ, ರೈತಮಿತ್ರ, ಮೇಘದೂತ ದಾಮಿನಿ  ಸೇರಿದಂತೆ ಇನ್ನಿತರ ಹವಾಮಾನ ಮುನ್ಸೂಚನೆ ನೀಡುವ ಆ್ಯಪ್ ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಈಗ ಕೃಷಿಗೆ ಸಂಬಂಧಿಸಿದ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆ ನೀಡವ ಆ್ಯಪ್  ನ್ನು  ಅನಾವರಣಗೊಳಿಸಿದೆ. ರೈತರು ಯಾವ ಬೆಳೆ ಬೆಳೆಯಬೇಕು, ಹವಾಮಾನ ಮುನ್ನೆಚ್ಚರಿಕೆಗಳಉ, ವಿವಿಧ ಇಲಾಖೆಗಳಿಂದ ಕ್ರೋಢೀಕರಿಸಿದ ರೈತರಿಗೆ ಸಂಬಂಧಿಸಿದ ಮಾಹಿತಿಗಳು ಈ ಆ್ಯಪ್  ನಲ್ಲಿ ಸಿಗಲಿದೆ.

ಕನ್ನಡ, ಇಂಗ್ಲೀಷ್, ಹಿಂದಿ, ತೆಲಗು, ಮರಾಠಿ, ಗುಜರಾತಿ, ತಮಿಳು,  ಸೇರಿದಂತೆ 12 ಭಾಷೆಗಳಲ್ಲಿ ಈ ಆ್ಯಪ್  ಕಾರ್ಯನಿರ್ವಹಿಸಲಿದೆ. ಈ ಆ್ಯಪ್ ನಲ್ಲಿರುವ ಮಾಹಿತಿ ಆಧರಿಸಿ ರೈತರು, ಬೆಳೆಯ ವಿಧಾನ, ಕಳೆನಾಶಕ ಸೇರಿದಂತೆ ವಿವಿದ ಮಾಹಿತಿಯನ್ನು ಪಡೆಯಬಹುದು. ಮತ್ತು ನೀರು –ಪರಿಸರದ ಸುಸ್ಥಿತರತೆಯ ಮಹತ್ವ ಸಂಪನ್ಮೂಲಗಳ ನ್ಯಾಯಯುತ ಬಳಕೆ ಕುರಿತು ತಿಳಿದುಕೊಳ್ಳಬಹಹುದು. ಬೆಂಗಳೂರು ಮೂಲದ ಐ.ಸಿ.ಎಸ್.ಟಿ ಸ್ಥಾಪಕ ಟ್ರಸ್ಟಿ ರಾಜ ಸೀವಾ ಅವರು ಈ ಆ್ಯಪ್ ನ್ನು ಅಭಿವೃದ್ಧಿಪಡಿಸಿದ್ದಾರೆ.

ಆತ್ಮನಿರ್ಭರ್ ಕೃಷಿ ಆ್ಯಪ್ ನೊಂದಿಗೆ, ರೈತರು ತಮ್ಮ ಕೈಯಲ್ಲಿ, ಐಎಂಡಿ, ಇಸ್ರೋ, ಐಸಿಎಆರ್ ಮತ್ತು ಸಿಜಿಡಬ್ಲ್ಯೂಎನಂತಹ ಸಂಶೋಧನಾ ಸಂಸ್ಥೆಗಳು ಉತ್ಪಾದಿಸಿದ ಸಾಕ್ಷ್ಯಾಧಾರಿತ ಮಾಹಿತಿಯನ್ನು ಪಡೆಯಬಹುದು.

ದೇಶದ ದೂರದ ಪ್ರದೇಶಗಳಲ್ಲಿನ ಸಂಪರ್ಕ ಸಮಸ್ಯೆಗಳನ್ನು ಪರಿಗಣಿಸಿ, ಈ ಆ್ಯಪ್ ಅನ್ನು ಸ್ಥಳೀಯವಾಗಿ ಸಂಪರ್ಕ ಕಲ್ಪಿಸುವ ಅಲ್ಲಿನ ಹವಾಮಾನವನ್ನು ಪರಿಗಣಿಸಿ  ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಈ ಆ್ಯಪ್  ರೈತನಿಂದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಇದು ಸಂಬಂಧಿತ ಡೇಟಾವನ್ನು ಒದಗಿಸಲು ರೈತರ ಭೂ-ಸ್ಥಳವನ್ನು ಅವಲಂಬಿಸಿದೆ. ಆ ಪ್ರದೇಶದ ಪಿನ್ ಕೋಡ್ ಅನ್ನು ನಮೂದಿಸುವುದರಿಂದ ಆಯಾ ಕ್ಷೇತ್ರದ ಹವಾಮಾನ ಹಾಗೂ ಇನ್ನಿತರ ಮಾಹಿತಿಯನ್ನು ನೀಡುತ್ತದೆ.

ಆತ್ಮ ನಿರ್ಭರ . ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಗೂಗಲ್ ನಲ್ಲಿ ಅಥವಾ ಗೂಗಲ್ ಪ್ಲೇಸ್ಟೋರ್ ನಲ್ಲಿ ಆತ್ಮನಿರ್ಭರ ಕೃಷಿ (atmanirbhar krishi) ಎಂದು ಟೈಪ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು. ಅಥವಾ https://play.google.com/store/apps/details?id=gov.psa.atmanirbharkrishi

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಡೌನ್ಲೋಡ್ ನಂತರ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಒಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ಇನ್ ಸ್ಟಾಲ್ ಆಗುತ್ತದೆ. ಇಷ್ಟೇ ಸಾಕು. ಮತ್ತೇನು ನಮೂದಿಸುವ ಅಗತ್ಯವಿಲ್ಲ. ಮಳೆ ಮುನ್ಸೂಚನೆ, ಹವಾಮಾನ ಆಧಾರಿತ ಮಾಹಿತಿ, ಜಮೀನು ಮೈಲ್ಮೈ ಮಾಹಿತಿ, ಬೆಳೆ ಡೇಟಾ, ಮಣ್ಣಿನ ಆರೋಗ್ಯ, ಸೇರಿದಂತೆ ಇನ್ನಿತರ ಮಾಹಿತಿಗಳಿರುತ್ತವೆ ಅಲ್ಲಿ ಕ್ಲಿಕ್ ಮಾಡಿ ಆಗತ್ಯ ಮಾಹಿತಿ ಪಡೆಯಬಹುದು.

Published On: 19 September 2021, 08:54 PM English Summary: Atmanirbha krishi app launched

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.