ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ 3,591 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 24 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಇದು ನೇರ ನೇಮಕಾತಿ ಪ್ರಕ್ರಿಯೆಯಾಗಿದ್ದರಿಂದ ಇಲ್ಲಿ ಪರೀಕ್ಷೆ ನಡೆಸಲಾಗುವುದಿಲ್ಲ.
ನೇಮಕಾತಿ ಪ್ರಕ್ರಿಯೆ ಮೆರಿಟ್ ಲಿಸ್ಟ್ ಆಧಾರದಲ್ಲಿ ನಡೆಯಲಿದೆ. ಮೆರಿಟ್ ಲಿಸ್ಟ್ನ್ನು 10ನೇ ತರಗತಿ ಮತ್ತು ಐಟಿಐ ಪರೀಕ್ಷೆಯ ಅಂಕದ ಆಧಾರದ ಮೇಲೆ ತಯಾರಿಸಲಾಗುತ್ತದೆ. ಒಂದು ವೇಳೆ ಇಬ್ಬರು ವಿದ್ಯಾರ್ಥಿಗಳು ಸರಾಸರಿ ಅಂಕವು ಸಮನಾಗಿದ್ದರೆ ಅಂತಹ ಅಭ್ಯರ್ಥಿಗಳಲ್ಲಿ ಯಾರು ವಯಸ್ಸಿನಲ್ಲಿ ಹಿರಿಯರೋ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು.
ವಯೋಮಿತಿ: ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 15 ವರ್ಷ ಮೇಲ್ಪಟ್ಟವರಾಗಿ ಇರಬೇಕು. ಮತ್ತು 24 ವರ್ಷಕ್ಕಿಂತ ಒಳಗಿನ ಅಭ್ಯರ್ಥಿಗಳಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರುವ ಅಭ್ಯರ್ಥಿಗಳ ಗರಿಷ್ಠ ವಯೋಮಾನ ಮಿತಿ 5 ವರ್ಷ ವಿನಾಯಿತಿ ಇರುತ್ತದೆ.. ಉಳಿದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಾನ ಮಿತಿಯಲ್ಲಿ 3 ವರ್ಷಗಳ ವಿನಾಯಿತಿ ನೀಡಲಾಗಿದೆ.
ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು 100 ರೂಪಾಯಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ಮಹಿಳಾ ಅಭ್ಯರ್ಥಿಗಳು ಕೂಡ ಯಾವುದೇ ಶುಲ್ಕ ಪಾವತಿಸಬೇಕಿಲ್ಲ.
ಹುದ್ದೆಗಳು: ಮುಂಬೈ ವಿಭಾಗ (ಎಮ್ಎಮ್ಸಿಟಿ) – 738
ವಡೋದರಾ ವಿಭಾಗ (ಬಿಆರ್ಸಿ) – 489
ಅಹಮದಾಬಾದ್ ವಿಭಾಗ (ಎಡಿಐ) – 611
ರತ್ಲಮ್ ವಿಭಾಗ (ಆರ್ಟಿಎಮ್) – 434
ರಾಜ್ಕೋಟ್ ವಿಭಾಗ (ಆರ್ಜೆಟಿ) – 176
ಭಾವ್ನಗರ್ ವರ್ಕ್ಶಾಪ್ (ಬಿವಿಪಿ) – 210
ಲೋವರ್ ಪರೇಲ್ ವರ್ಕ್ಶಾಪ್ (ಪಿಎಲ್) – 396
ಮಹಾಲಕ್ಷ್ಮೀ ವರ್ಕ್ಶಾಪ್ (ಎಮ್ಎಕ್ಸ್) – 64
ದಾಹೊದ್ ವರ್ಕ್ಶಾಪ್ (ಡಿಹೆಚ್ಡಿ) – 187
ಪ್ರತಾಪ್ ನಗರ್ ವರ್ಕ್ಶಾಪ್ (ಪಿಆರ್ಟಿಎನ್) – 45
ಸಾಬರ್ಮತಿ ವರ್ಕ್ಶಾಪ್ (ಎಸ್ಬಿಐ) – 60
ಸಾಬರ್ಮತಿ ಸಿಗ್ನಲ್ ವರ್ಕ್ಶಾಪ್ (ಎಸ್ಬಿಐ) – 25
ಪ್ರಧಾನ ಕಚೇರಿ – 34
ಅರ್ಜಿ ಸಲ್ಲಿಸುವ ಪ್ರಕ್ರಿಯೆ?
ಇಲಾಖೆಯ ಲಿಂಕ್ www.rrc-wr.com ಗೆ ಭೇಟಿ ನೀಡಬೇಕು. ಇಲ್ಲಿ ಮೇಲ್ಗಡೆಯಿರುವ ಹೊಸ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮತ್ತೇ ನಾಲ್ಕು ಪುಟಗಳ ಲಿಂಕ್ ಕಾಣಿಸುತ್ತದೆ. ಕ್ಲಿಕ್ ಹಿಯರ್ ಟು ಅಪ್ಲೈ, ಹೌ ಟು ಅಪ್ಲೈ ಹಾಗೂ ಡೌನ್ಲೋಡ್ ನೋಟಿಫಿಕೇಷನ್ ಹೀಗೆ ಕಾಣಿಸುತ್ತದೆ. ಅಪ್ಲೈ ಮಾಡುವುದಕ್ಕಿಂತ ಮುಂಚಿತವಾಗಿ ನೋಟಿಫಿಕೇಷನ್ ಮತ್ತ್ ಅರ್ಜಿ ಹೇಗೆ ಸಲ್ಲಿಸಬೇಕೆಂಬುದನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.
Share your comments