1. ಸುದ್ದಿಗಳು

ವಿದ್ಯುತ್ ದರ ಪ್ರತಿ ಯೂನಿಟ್ ಗೆ 30 ಪೈಸೆ ಏರಿಕೆ

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಜನರು ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಈಗಾಗಲೇ ಕೊರೋನಾ ಸೋಂಕಿನಿಂದ ರಾಜ್ಯದ ಜನ‌ ಸಂಕಷ್ಟಕ್ಕೆ ಸಿಲುಕಿದ್ದು ಅವರ ಮೇಲೆ ಮತ್ತಷ್ಟು ಗಾಯದ ಮೇಲೆ ಬರೆಯುವಂತಾಗಿದೆ.

ಪರಿಷ್ಕೃತ ದರಗಳು 2021 ರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಪರಿಷ್ಕೃತ ದರಗಳು ಕಳೆದ ತಿಂಗಳ ಬಿಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆ ಹೆಚ್ಚಳಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಬೇಕು ಎನ್ನುವ ನೀಡಿದ ವಿದ್ಯುತ್ ಚ್ಚಕ್ತಿ ಮಂಡಳಿಗಳ ಬೇಡಿಕೆಯನ್ನು ಆಧರಿಸಿ ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆ ಹೆಚ್ಚಳ ಮಾಡಲಾಗಿದೆ.

2021-22 ರಲ್ಲಿ ವಿದ್ಯುತ್ ಕಂಪನಿಗಳ ಬೇಡಿಕೆ ಪೂರೈಕೆ ಸೇರಿದಂತೆ ವಿವಿಧ ವಿಷಯಗಳನ್ನು ಪರಿಗಣಿಸಿ ವಿದ್ಯುತ್ ದರ ಏರಿಕೆ ಮಾಡಿರುವ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ,ಶೇ.3.84 ರಷ್ಟು ಹೆಚ್ಚಳ ಮಾಡಿದೆ.

ರಾಜ್ಯದ ವಿವಿಧ ವಿದ್ಯುಚ್ಛಕ್ತಿ ಸಂಸ್ಥೆಗಳು ಒಂದು ರೂಪಾಯಿ 35 ಪ್ರತಿ ಯೂನಿಟಿಗೆ ದರ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದವು ಅದನ್ನು ಪರಿಶೀಲಿಸಿ ಆಯೋಗ ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಿದೆ.

* 0-50 ಯೂನಿಟ್‌ಗಳ( ಈ ಹಿಂದೆ 0-30 ಯೂನಿಟ್) ಮಾಸಿಕ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 4 ರೂಪಾಯಿಗಳಿಂದ 4.10 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.  51-100 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 5.45 ರೂಪಾಯಿಗಳಿಂದ 5.55 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

Published On: 09 June 2021, 08:54 PM English Summary: Power rate revision paise per unit increase

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.