1. ಸುದ್ದಿಗಳು

ಚಂದ್ರ ಗ್ರಹದ ಮಣ್ಣಿನಲ್ಲಿ ಕೃಷಿ: ಫ್ಲೋರಿಡಾ ವಿಜ್ಞಾನಿಗಳ ಅಚ್ಚರಿಯ ಸಂಶೋಧನೆ!

Kalmesh T
Kalmesh T
Agriculture on lunar planet soil: Surprising research of Florida scientists!

ತಂತ್ರಜ್ಞಾನ ಬೆಳೆದಂತೆಲ್ಲ ಮಾನವ ಒಂದೊಂದೆ ಹೆಜ್ಜೆ ಎತ್ತರಕ್ಕೆ ಏರುತ್ತಿದ್ದಾನೆ. ಈದೀಗ ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕರು ಚಂದ್ರ ಗ್ರಹದ ಮಣ್ಣಿನಲ್ಲಿಯೂ ಕೃಷಿ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದಾರೆ.

ಇದನ್ನೂ ಓದಿರಿ:

ಬಾಳೆಹಣ್ಣಿನ ಮೇಲೆ ಕಲೆಗಳಿರುವುದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧನೆ!

ಈ ಔಷದೀಯ ಸಸ್ಯಗಳನ್ನು ಬೆಳೆಯಿರಿ ದುಪ್ಪಟ್ಟು ಆದಾಯ ಪಡೆಯಿರಿ

ದಿನದಿಂದ ದಿನಕ್ಕೆ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವ ಮಹತ್ತರ ಪ್ರಗತಿ ಸಾಧಿಸುತ್ತಿದ್ದು, ಅದರಲ್ಲೂ ಕೃಷಿ ಕ್ಷೇತ್ರದಲ್ಲಿ ಹತ್ತು ಹಲವು ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ಇದೀಗ ಮತ್ತೊಂದು ಸಾಧನೆ ಅನಾವರಣಗೊಂಡಿದ್ದು, ಚಂದ್ರನ ಮಣ್ಣಿನಿಂದ ಕೂಡ ಕೃಷಿ ಕಾಯಕ ಮಾಡಬಹುದು ಎಂಬ ವಿಚಾರವನ್ನು ಅಮೆರಿಕಾದ ಫ್ಲೊರಿಡಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇದೀಗ ನಿರೂಪಿಸಿದ್ದಾರೆ.

ಬರೊಬ್ಬರಿ ೫೦ ವರ್ಷಗಳ ಹಿಂದೆ ಅಂದರೆ ಅಪೋಲಾ ಯುಗದ ಗಗನಯಾತ್ರಿಗಳು ಚಂದ್ರನ ಬಳಿಯಿಂದ ತಂದಿದ್ದ ರೆಗಾಲಿತ್ (ಚಂದ್ರನ ಮಣ್ಣು)ನಲ್ಲಿ ವಿಜ್ಞಾನಿಗಳು ಒಂದು ರೀತಿಯ ಸಸ್ಯ ಬೆಳೆಸಿದ್ದು, ಈ ಪ್ರಯತ್ನ ಇದೀಗ ಯಶಸ್ವಿಯಾಗಿ ನೆರವೇರಿದೆ.

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!

ಸಾರರಹಿತ ರೆಗಾಲಿತ್ನಲ್ಲಿ ವಿಜ್ಞಾನಿಗಳು ಯುರೇಶಿಯಾ-ಆಫ್ರಿಕಾ ಮೂಲದ, ಪಲ್ಯಕ್ಕೆ ಬಳಸುವ ಮಸ್ಟರ್ಡ್ ಗ್ರೀನ್, ಹೂಕೋಸು, ಬ್ರಕೋಲಿ ಮುಂತಾದ ಜಾತಿಗೆ ಸೇರಿದ ಅರಬಿಡೋಪ್ಸಿಸ್ ಥಾಲಿಯಾನಾ ಎಂಬ ಸಸ್ಯ ಬೆಳೆಸಿದ್ದರು.

ಆದರೆ ಅಚ್ಚರಿಯ ರೀತಿಯಲ್ಲಿ ಸಾರರಹಿತ ಚಂದ್ರನ ಮಣ್ಣಿನಲ್ಲೂ ಗಿಡ ಸ್ವಚ್ಛಂದವಾಗಿ ಬೆಳವಣಿಗೆ ಕಂಡಿದೆ. ಸದ್ಯ ಇದು ಸಹಜವಾಗಿಯೇ ವಿಜ್ಞಾನಿಗಳಲ್ಲಿ ಸಂತಸ ಮೂಡಿದೆ. ಈ ಮೂಲಕ ಚಂದ್ರ ಗ್ರಹದಲ್ಲೂ ಕೃಷಿಕ ಕಾಯಕ ನಡೆಸಬಹುದು ಎಂದು ತರ್ಕಕ್ಕೆ ಬರಲಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಸಾದ ಆಡಳಿತಗಾರ ಬಿಲ್ ನೆಲ್ಸನ್, ಈ ಸಂಶೋಧನೆಯು ನಾಸಾದ ದೀರ್ಘಾವಧಿಯ ಮಾನವ ಪರಿಶೋಧನೆಯ ಗುರಿಗಳಿಗೆ ನಿರ್ಣಾಯಕ.

ಭವಿಷ್ಯದ ಗಗನಯಾತ್ರಿಗಳಿಗೆ ಆಳವಾದ ಬಾಹ್ಯಾಕಾಶದಲ್ಲಿ ವಾಸಿಸುವ ಮತ್ತು ಕಾರ್ಯನಿರ್ವಹಿಸುವ ಆಹಾರ ಮೂಲಗಳನ್ನು ಅಭಿವೃದ್ಧಿಪಡಿಸಲು ನಾವು ಚಂದ್ರ ಮತ್ತು ಮಂಗಳದಲ್ಲಿ ಕಂಡುಬರುವ ಸಂಪನ್ಮೂಲಗಳನ್ನು ಬಳಸುವ ಅನಿವಾರ್ಯತೆ ಇದೆ.

PM GatiShakti: ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್ಬ್ಯಾಂಡ್ ಸೇವೆ ನೀಡಲು “GatiShakti Sanchar” ಪೋರ್ಟಲ್ ಪ್ರಾರಂಭ!

G7: ಉಕ್ರೇನ್ ವಿಶ್ವದ ಪ್ರಮುಖ ಧಾನ್ಯ ಪೂರೈಕೆದಾರರ ಪ್ರಭಾವಶಾಲಿ ಸಂಘಟನೆ ರಚಿಸಲು ಸಲಹೆ ನೀಡಿದೆ!

ಈ ಮೂಲಭೂತ ಸಸ್ಯ ಬೆಳವಣಿಗೆಯ ಸಂಶೋಧನೆಯು ಕೃಷಿ ನಾವೀನ್ಯತೆಗಳನ್ನು ತೆರೆದುಕೊಳ್ಳಲು ಮಾಡಲು ನಾಸಾ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಪ್ರಮುಖ ಉದಾಹರಣೆ.

ಇದು ಭೂಮಿಯ ಮೇಲಿನ ಆಹಾರ-ಕೊರತೆಯ ಪ್ರದೇಶಗಳಲ್ಲಿ ಸಸ್ಯಗಳು ಹೇಗೆ ಒತ್ತಡದ ಪರಿಸ್ಥಿತಿಗಳನ್ನು ನಿವಾರಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

Published On: 16 May 2022, 12:49 PM English Summary: Agriculture on lunar planet soil: Surprising research of Florida scientists!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.