1. ಸುದ್ದಿಗಳು

ಇನ್ಮುಂದೆ ಜಾನುವಾರುಗಳಿಗೂ ಆಧಾರ್ ಕಾರ್ಡ್: ಶೀಘ್ರದಲ್ಲೇ ಜಾರಿ !

Hitesh
Hitesh
Aadhaar Card for Livestock: Coming Soon!

ಫಲಾನುಭಗಳಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಹಲವು ಯೋಜನೆಗಳಲ್ಲಿ ಆಧಾರ್‌ ಕಡ್ಡಾಯ ಮಾಡಿದೆ.

ಈಚೆಗಷ್ಟೇ ಸೈಬರ್‌ ಕ್ರೈಂನಲ್ಲಿ ಆಗುತ್ತಿರುವ ಅಪರಾಧಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಸಿಮ್‌

ಕಾರ್ಡ್‌ಗೂ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಿದೆ. 

ಇದೀಗ ಜಾನುವಾರುಗಳಿಗೂ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗುತ್ತಿದೆ. ಹೌದು ಇದು ಹಾಸ್ಯವೆನಿಸಿದರೂ ಸತ್ಯ.  

ಶೀಘ್ರದಲ್ಲೇ ದೇಶದ ಜಾನುವಾರುಗಳಿಗೂ ಆಧಾರ್ ಕಾರ್ಡ್ ನೀಡಲಾಗುವುದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದ್ದಾರೆ.

Health Infrastructure ವಿಶ್ವಬ್ಯಾಂಕ್‌ನಿಂದ ಭಾರತಕ್ಕೆ ಬರೋಬ್ಬರಿ 1 ಬಿಲಿಯನ್‌ ಡಾಲರ್‌!

ಜಾನುವಾರುಗಳು ಹಿಂದೆ ಯಾವ ರೋಗಕ್ಕೆ ತುತ್ತಾಗಿದ್ದವು, ಅದರ  ಇತಿಹಾಸದ ಸಂಪೂರ್ಣ ಮಾಹಿತಿ ಸೇರಿದಂತೆ

ಎಲ್ಲಾ ರೀತಿಯ ಡೇಟಾವನ್ನು ಸಂಗ್ರಹಿಸಲು ಈ ಆಧಾರ್ ಕಾರ್ಡ್ ಉಪಯುಕ್ತವಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ಹೇಳಿದರು.

ಜಾನುವಾರುಗಳಿಗೆ ಸಂಬಂಧಿಸಿದ ಡೇಟಾ

ಆದಷ್ಟು ಬೇಗ ರೋಗದ ಮೂಲದ ಬಗ್ಗೆ ತಿಳಿದುಕೊಳ್ಳಬೇಕು ನಂತರ ಲಸಿಕೆ ಮತ್ತು ತಡೆಗಟ್ಟುವ ಇತರ

ಮಾರ್ಗಗಳನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

Pension ಹಳೇ ಪಿಂಚಣೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದ ಸರ್ಕಾರ! 

ಬಯೋ ಏಷ್ಯಾ ಸಮ್ಮೇಳನದ ಅಂಗವಾಗಿ ಮೊದಲ ದಿನ ‘ಒಂದು ಆರೋಗ್ಯ ವಿಧಾನ, ಸ್ಥಳೀಯ ಜ್ಞಾನ ಮತ್ತು ನೀತಿ’ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.

ಇದಕ್ಕೆ ಸಂಯೋಜಕರಾಗಿ ಸಿಎಂಸಿ ವೆಲ್ಲೂರು ಪ್ರಾಧ್ಯಾಪಕ ಡಾ.ಗಗನ್ ದೀಪ್ ಕಾಂಗ್ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿ.ಕೆ.ಪಾಲ್, ಮನುಷ್ಯರಂತೆ ಜಾನುವಾರುಗಳಿಗೂ ಆಧಾರ್ ರಚಿಸಲಾಗಿದೆ.

ಶೀಘ್ರದಲ್ಲೇ ಪ್ರತಿ ಜಾನುವಾರು ಮತ್ತು ಪ್ರಾಣಿಗಳಿಗೆ ಆಧಾರ್ ಸಂಖ್ಯೆ ನೀಡಲಾಗುವುದು ಎಂದು ಹೇಳಿದರು.

ಈ ಮೂಲಕ ದೇಶದ ಜಾನುವಾರು, ಪ್ರಾಣಿಗಳ ವಿವರಗಳು ಸುಲಭವಾಗಿ ದೊರೆಯುತ್ತವೆ.

ಅದರ ನಂತರ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಹೇಳಿದರು. 

Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್‌ ಉದ್ಯೋಗಿಗಳಿಗೆ ಕೆಲಸ ? 

Published On: 03 March 2023, 05:09 PM English Summary: Aadhaar Card for Livestock: Coming Soon!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.