1. ಸುದ್ದಿಗಳು

Health Infrastructure ವಿಶ್ವಬ್ಯಾಂಕ್‌ನಿಂದ ಭಾರತಕ್ಕೆ ಬರೋಬ್ಬರಿ 1 ಬಿಲಿಯನ್‌ ಡಾಲರ್‌!

Hitesh
Hitesh
Health Infrastructure 1 billion dollars from the World Bank to India!

ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ವಿಶ್ವಬ್ಯಾಂಕ್‌ನಿಂದ ಹಣ ಪಡೆಯಲು ತಿಣುಕಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಭಾರತವು ವಿಶ್ವಬ್ಯಾಂಕ್‌ನಿಂದ ದೊಡ್ಡ ಮಟ್ಟದಲ್ಲಿ  ಹಣ ಪಡೆಯುವಲ್ಲಿ ಯಶಸ್ವಿಯಾಗಿದೆ.  

ಭಾರತ ಹಾಗೂ ವಿಶ್ವಬ್ಯಾಂಕ್ 500 ಮಿಲಿಯನ್ ಡಾಲರ್ ಪೂರಕ ಸಾಲಗಳ ಎರಡು ಪತ್ಯೇಕ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಒಪ್ಪಂದದ ಅನ್ವಯ ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಆದ್ಯತೆಯನ್ನಾಗಿ ಪರಿಗಣಿಸಲಾಗಿದೆ.

Pension ಹಳೇ ಪಿಂಚಣೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದ ಸರ್ಕಾರ!

ದೇಶದಲ್ಲಿ ಆರೋಗ್ಯ ಸೇವೆಯನ್ನು ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವುದು ಹಾಗೂ ದೇಶದಲ್ಲಿ ಆರೋಗ್ಯ

ಸೇವೆಯನ್ನು ಎಲ್ಲರಿಗೂ ತಲುಪಿಸುವುದು ಮತ್ತು ಉತ್ತೇಜನ ನೀಡುವುದು ಸೇರಿದಂತೆ ಹಲವು ಅಂಶಗಳು ಸೇರಿವೆ. 

Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್‌ ಉದ್ಯೋಗಿಗಳಿಗೆ ಕೆಲಸ ?

ಬರೋಬ್ಬರಿ 1 ಬಿಲಿಯನ್ ಡಾಲರ್‌ನಷ್ಟು ಮೌಲ್ಯದ ಆರ್ಥಿಕ ನೆರವಿನಿಂದಾಗಿ ಭಾರತದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.  

Gold Rate Today ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ!  

Health Infrastructure 1 billion dollars from the World Bank to India!

ಏಳು ರಾಜ್ಯಗಳ ಆರೋಗ್ಯ ಸೇವೆ ವೃದ್ಧಿ

ರಾಷ್ಟ್ರ ಮಟ್ಟದಲ್ಲಿ ಆರೋಗ್ಯ ಸೇವೆ ಅಭಿವೃದ್ಧಿ ಮಾಡುವುದರೊಂದಿಗೆ ದೇಶದಲ್ಲಿ ಯಾವೆಲ್ಲ ರಾಜ್ಯಗಳಲ್ಲಿ ಆರೋಗ್ಯ

ಸೇವೆಯಲ್ಲಿ ಗಣನೀಯ ಬದಲಾವಣೆ ಮಾಡಬೇಕು ಎನ್ನುವುದರ ಕುರಿತು ಸಹ ಸರ್ಕಾರ ರೂಪುರೇಷಗಳನ್ನು ಹಾಕಿಕೊಂಡಿದೆ.

ಕೋವಿಡ್‌ ನಂತರದಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಆರೋಗ್ಯ ಸೇವೆಯಲ್ಲಿನ ಲೋಪಗಳು ಬೆಳಕಿಗೆ ಬಂದಿದ್ದವು.

ಕೆಲವು ರಾಜ್ಯಗಳಲ್ಲಿ ಆಂಬುಲೆನ್ಸ್‌ ಸೇವೆ ಕೆಟ್ಟದಾಗಿರುವುದು, ಆರೋಗ್ಯ ಸಿಬ್ಬಂದಿಯ ಕೊರತೆ ಹಾಗೂ ಆರೋಗ್ಯ ಕಟ್ಟಡಗಳು ಇಲ್ಲದೆ

ಇರುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಕೋವಿಡ್‌

ನಂತರದಲ್ಲಿ ಆರೋಗ್ಯ ಸೇವೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಮುಂದಾಗಿದ್ದವು.

ಇದೀಗ ಕೇಂದ್ರವು ರಾಷ್ಟ್ರದ ಬಹುದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶ ಸೇರಿದಂತೆ ಏಳು

ರಾಜ್ಯಗಳಲ್ಲಿ ಆರೋಗ್ಯ ಸೇವೆ ಅಭಿವೃದ್ಧಿಪಡಿಸಲು ವಿಶ್ವಬ್ಯಾಂಕ್‌ನೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ.

ಕೇಂದ್ರವು ಪಟ್ಟಿ ಮಾಡಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೇರಳ, ಆಂಧ್ರಪ್ರದೇಶ, ಒಡಿಶಾ,

ಪಂಜಾಬ್, ಮೇಘಾಲಯ ಹಾಗೂ  ತಮಿಳುನಾಡು ಸೇರಿದೆ. ಈ ರಾಜ್ಯಗಳಲ್ಲಿ ಆರೋಗ್ಯ ಸೇವೆ ವಿತರಣೆಗೆ ಆದ್ಯತೆ ನೀಡಲಾಗುತ್ತದೆ

ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವಬ್ಯಾಂಕ್‌ನೊಂದಿಗೆ ಒಪ್ಪಂದದಂತೆ ಆರ್ಥಿಕ ವ್ಯವಹಾರಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ

ಆಗಿರುವ ರಜತ್ ಕುಮಾರ್ ಮಿಶ್ರಾ ಮತ್ತು ವಿಶ್ವಬ್ಯಾಂಕ್ ಭಾರತದ ನಿರ್ದೇಶಕ ಆಗಸ್ಟೆ ತಾನೋ ಕೌಮ್ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.  

ಆರೋಗ್ಯ ಸೇವೆ ಅಭಿವೃದ್ಧಿಯೇ ಗುರಿ

ಕೇಂದ್ರ ಮತ್ತು ವಿಶ್ವಬ್ಯಾಂಕ್‌ ಒಪ್ಪಂದದಂತೆ ದೇಶದಲ್ಲಿ ಆರೋಗ್ಯ ಸೇವೆಯನ್ನು ಮೇಲ್ದರ್ಜಗೇರಿಸುವುದೇ ಆಗಿದೆ ಎಂದು ಹೇಳಲಾಗಿದೆ.

ರಾಷ್ಟ್ರದಲ್ಲಿ ಕೋವಿಡ್‌ ಮೂರು ಅಲೆಗಳಲ್ಲಿ ಸಾಕಷ್ಟು ಜನ ಸಕಾಲದಲ್ಲಿ ಆರೋಗ್ಯ ಸೇವೆ ಲಭ್ಯವಾಗದೆ ಮೃತಪಟ್ಟಿದ್ದರು.

ಆಕ್ಸಿಜನ್‌ ಕೊರತೆ, ಹಾಸಿಗೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು.

ಇದೆಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯ ಸೇವೆಗೆ ಪೂರಕವಾದ ಕಟ್ಟಡ ಸೌಲಭ್ಯವೂ ರಾಜ್ಯದಲ್ಲಿ ಇಲ್ಲದೆ ಇರುವುದು ಸಮಸ್ಯೆಗೆ ಕಾರಣವಾಗಿತ್ತು.  

ಕೆಲಸದ ಅವಧಿ 9 ಗಂಟೆಯಿಂದ 12ಕ್ಕೆ: ಹೊಸ ಕಾಯ್ದೆಗೆ ರಾಜ್ಯ ಸರ್ಕಾರ ಅಸ್ತು! 

Published On: 03 March 2023, 04:36 PM English Summary: Health Infrastructure 1 billion dollars from the World Bank to India!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.