1. ಸುದ್ದಿಗಳು

ಐಎಎಸ್‌ ಅಧಿಕಾರಿಯಿಂದ ಉದ್ಯೋಗ ಕೊಡಿಸುವ ನೆಪದಲ್ಲಿ 20 ಯುವತಿಯರಿಗೆ ಲೈಂಗಿಕ ಕಿರುಕುಳ!

KJ Staff
KJ Staff
20 young women sexually harassed by an IAS officer on the pretext of giving them a job!

ಉದ್ಯೋಗ ನಿರೀಕ್ಷೆಯಲ್ಲಿರುವ ಯುವತಿಯರಿಗೆ ಉದ್ಯೋಗ ಕೊಡಿಸುವ ಆಮೀಷ ತೋರಿಸಿ ಸುಮಾರು 20 ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಇಲ್ಲೊಬ್ಬ ಐಎಎಸ್‌ ಆಫೀಸರ್‌.!

ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

ಅಂಡಮಾನ್‌ ಮತ್ತು ನಿಕೋಬಾರ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್‌ ಕೆಲಸ ಕೊಡಿಸುವ ನೆಪದಲ್ಲಿ 20ಕ್ಕೂ ಹೆಚ್ಚು ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಉದ್ಯೋಗದ ಅಗತ್ಯವಿದ್ದ ಹುಡುಗಿಯರನ್ನು ಪೋರ್ಟ್‌ ಬ್ಲೇರ್‌ನ ನಿವಾಸಕ್ಕೆ ಕರೆಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ತನಿಖೆಯಲ್ಲಿ ಹೊರ ಬಿದ್ದಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ದಿನಪತ್ರಿಕೆ ವರದಿ ಮಾಡಿದೆ.

ಅಂಡಮಾನ್‌ ಮತ್ತು ನಿಕೋಬಾರ್‌ನ ಮುಖ್ಯ ಕಾರ್ಯದರ್ಶಿಯಾಗಿದ್ದ ಜಿತೇಂದ್ರ ನರೇನ್‌ ಅತಿ ಹೆಚ್ಚು ಕಾಲ ಚೀಫ್‌ ಸೆಕ್ರೆಟರಿಯಾಗಿ ಕಾರ್ಯಸಲ್ಲಿಸಿದ್ದರು. ಈ ಸೆಕ್ಸ್‌ ರಾಕೆಟ್‌ ಆಚೆ ಬರಲು 21 ವರ್ಷದ ಯುವತಿ ಮಾಡಿದ ಆರೋಪವೇ ಕಾರಣ.

'Water Heroes: Share Your Stories’ ಸ್ಪರ್ಧೆಗೆ ಅರ್ಜಿ ಆಹ್ವಾನ; ನೀವೂ ನಿಮ್ಮ ಕಥೆ ಹಂಚಿಕೊಂಡು ರೂ.10,000 ಗೆಲ್ಲಬಹುದು!

ನರೇನ್‌ ಮತ್ತು ಕಾರ್ಮಿಕ ಆಯುಕ್ತ ಆರ್‌ ಎಲ್‌ ರಿಷಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ದಾಖಲಿಸಿದ್ದಳು.

ಕೆಲ ಯುವತಿಯರಿಗೆ ಸರ್ಕಾರಿ ನೌಕರಿಯನ್ನು ಸಹ ನರೇನ್‌ ಕೊಡಿಸಿದ್ದಾರೆ. ಇನ್ನು ಕೆಲವರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾರೆ ಎಂದೂ ಸಹ ವರದಿಯಲ್ಲಿ ಹೇಳಲಾಗಿದೆ.

ಯುವತಿಯ ದೂರಿನ ಅನ್ವಯ ಆಕೆಯನ್ನು ಎರಡು ವಾರಗಳ ನಂತರ ಮತ್ತೆ ಮನೆಗೆ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ.

ಜತೆಗೆ ದೂರು ನೀಡಿದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿ ಕಳಿಸಲಾಗಿದೆ. ಸರ್ಕಾರಿ ನೌಕರಿಯ ಆಸೆಗೆ ಹೋದವಳನ್ನು ಲೈಂಗಿಕವಾಗಿ ಬಳಸಿಕೊಂಡು ಹೆದರಿಸಿ ಮರಳಿ ಕಳಿಸಲಾಗಿದೆ.

ಪಡಿತರ ಚೀಟಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ, ಇನ್ಮುಂದೆ ನೀವು ಎಲ್ಲೆ ಇದ್ದರೂ ಈ ಸೌಲಭ್ಯ ಪಡೆಯಬಹುದು! ಏನದು ಗೊತ್ತೆ?

ವರದಿಗಳ ಪ್ರಕಾರ ಘಟನೆ ನಡೆದ ದಿನ ಯುವತಿ, ರಿಷಿ ಮತ್ತು ನರೇನ್‌ ಮೂವರ ಮೊಬೈಲ್‌ ಕೂಡ ಒಂದೇ ಲೊಕೇಷನ್‌ನಲ್ಲಿ ಇರುವುದು ಖಚಿತಪಡಿಸಿದೆ.

ನರೇನ್‌ ಸದ್ಯ ಸೇವೆಯಿಂದ ಅಮಾನತ್ತಾಗಿದ್ದು ಆರೋಪಗಳನ್ನು ಅಲ್ಲಗಳೆದಿದ್ದಾರೆ. ತಮ್ಮ ವಿರುದ್ಧ ನಡೆಸಿರುವ ಷಡ್ಯಂತ್ರ ಇದಾಗಿದೆ, ತಾವು ಯಾವುದೇ ಮಹಿಳೆಯನ್ನೂ ಲೈಂಗಿಕವಾಗಿ ಬಳಕೆ ಮಾಡಿಕೊಂಡಿಲ್ಲ ಎಂದು ಅವರು ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಘಟನೆ ನಡೆದಿರುವ ಎರಡು ದಿನಾಂಕಗಳಲ್ಲಿ ಒಂದು ದಿನ ಪೋರ್ಟ್‌ಬ್ಲೇರ್‌ನಲ್ಲಿ ತಾವು ಇರಲೇ ಇಲ್ಲ ಎಂಬುದನ್ನೂ ಕೋರ್ಟ್‌ನಲ್ಲಿ ನರೇನ್‌ ಪ್ರಶ್ನಿಸಿದ್ದಾರೆ.  

Published On: 27 October 2022, 05:39 PM English Summary: 20 young women sexually harassed by an IAS officer on the pretext of giving them a job!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.