1. ಸುದ್ದಿಗಳು

ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ರೈಲುಗಳ ವೇಗ ಹೆಚ್ಚಳ!

KJ Staff
KJ Staff
train

ಬೆಂಗಳೂರಿನಿಂದ ಮೈಸೂರಿನ ನಡುವೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. 20 ರೈಲುಗಳು ಸಾಮಾನ್ಯ ವೇಗಕ್ಕಿಂತ ಹೆಚ್ಚು ವೇಗವಾಗಿ ಸಂಚರಿಸಲಿವೆ.

ಬೆಂಗಳೂರು ಕೃಷಿ ವಿವಿಯಿಂದ 9 ಹೊಸ ತಳಿಗಳ ಶೋಧ ರೈತರಿಗೆ ಅಧಿಕ ಇಳುವರಿ, ತಳಿಗಳಿಗೆ ರೋಗ ನಿರೋಧಕ ಶಕ್ತಿ

ಬೆಂಗಳೂರಿನಿಂದ ಮೈಸೂರಿಗೆ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಸಂಚರಿಸುತ್ತಾರೆ.

ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ವೇಗವನ್ನು ಹೆಚ್ಚಿಸಲಾಗುತ್ತಿದೆ. ಎರಡು ನಗರಗಳ ನಡುವೆ ಉಂಟಾಗುವ ಸಂಚಾರ ದಟ್ಟಣೆಯನ್ನು ತಗ್ಗಿಸುವುದು ಸಹ ಇದರ ಉದ್ದೇಶವಾಗಿದೆ.  

ಬೆಂಗಳೂರು ಮತ್ತು ಮೈಸೂರು ಮಾರ್ಗದಲ್ಲಿ ಸಂಚರಿಸುವ 20 ರೈಲುಗಳ ವೇಗ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ. ಈ ಪೈಕಿ ಎಂಟು ರೈಲುಗಳನ್ನು ಸೂಪರ್‌ಫಾಸ್ಟ್ ಎಂದು ಮರುವಿನ್ಯಾಸಗೊಳಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.  

train

ವೇಗ ಹೆಚ್ಚಿಸಿಕೊಂಡ ಬೆಂಗಳೂರು-ಮೈಸೂರು ರೈಲು ವಿವರ

  • ಹೌರಾ-ಮೈಸೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
  • ಸಾಯಿನಗರ-ಶಿರಡಿ ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌
  • ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
  • ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್
  • ಹುಬ್ಬಳ್ಳಿ-ಮೈಸೂರು ಎಕ್ಸ್‌ಪ್ರೆಸ್

ವೇಗ ಹೆಚ್ಚಿಸಿಕೊಂಡ ಬೆಂಗಳೂರು-ಮೈಸೂರು ರೈಲಿನ ಪಟ್ಟಿ

  • ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್  
  • ಅಜ್ಮೀರ್-ಮೈಸೂರು ಪಾಕ್ಷಿಕ ಎಕ್ಸ್‌ಪ್ರೆಸ್
  • SMVT ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್
  • ಚಾಮರಾಜನಗರ-ತುಮಕೂರು ದೈನಂದಿನ ಪ್ಯಾಸೆಂಜರ್
  •  ಮೈಸೂರು ಯಶವಂತಪುರ ಎಕ್ಸ್‌ಪ್ರೆಸ್ 
train

ಸೂಪರ್‌ಫಾಸ್ಟ್ ಆಗಿ 8 ರೈಲುಗಳ ಮರುವಿನ್ಯಾಸ

ಎಸ್‌ಡಬ್ಲ್ಯೂಆರ್ ಎಂಟು ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್‌ಫಾಸ್ಟ್ ಎಂದು ಮರುವಿನ್ಯಾಸಗೊಳಿಸಲಾಗಿದೆ. ಮೈಸೂರು ಮತ್ತು ಬೆಂಗಳೂರು ನಡುವೆ ಚಲಿಸುವ ರೈಲುಗಳ ಪರಿಷ್ಕೃತ ಸಂಖ್ಯೆಯ ವಿವರ ಈ ರೀತಿ ಇದೆ.

ಮೈಸೂರು-ಮೈಲಾಡುತುರೈ ಎಕ್ಸ್‌ಪ್ರೆಸ್ ಮತ್ತು ಮೈಸೂರು ಸಾಯಿಂಗಾರ್ ಶಿರಡಿ ಎಕ್ಸ್‌ಪ್ರೆಸ್‌ಗೆ ಸಂಬಂಧಿಸಿದಂತೆ ರೈಲು ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

  • ಸಂಖ್ಯೆ 16557 (ಪರಿಷ್ಕೃತ ಸಂಖ್ಯೆ 20659)
  • 16558 (ಪರಿಷ್ಕೃತ 20660)  
  • 16023 (ಪರಿಷ್ಕೃತ 20623)  
  • 16024 (ಪರಿಷ್ಕೃತ 20624)
  • ಮೈಸೂರು-ಮೈಲಾಡುತುರೈ ಎಕ್ಸ್‌ಪ್ರೆಸ್ (16231 ಮತ್ತು 16232) ಮತ್ತು * ಮೈಸೂರು ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ 16217 ಮತ್ತು 16218
train

ನಿತ್ಯ ಬೆಂಗಳೂರಿನಿಂದ ಮೈಸೂರಿಗೆ 23 ರೈಲುಗಳ ಸಂಚಾರ 

 ಇವುಗಳಲ್ಲಿ ಪ್ಯಾಸೆಂಜರ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳೂ ಸೇರಿವೆ. ಮೈಸೂರು ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು, ಬೆಂಗಳೂರು-ಮೈಸೂರು ಮೆಮೋ ರೈಲು, ಕಾವೇರಿ ಎಕ್ಸ್‌ಪ್ರೆಸ್, ಚಾಮರಾಜನಗರ ಎಕ್ಸ್‌ಪ್ರೆಸ್, ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್, ಹಂಪಿ ಎಕ್ಸ್‌ಪ್ರೆಸ್, ಮೈಸೂರು ಎಕ್ಸ್‌ಪ್ರೆಸ್, ಮೈಸೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಗೋಲ್-ಗುಂಬಜ್ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್, ಮೈಸೂರು ಎಕ್ಸ್‌ಪ್ರೆಸ್.

ಬೆಂಗಳೂರು-ಮೈಸೂರು ಮೆಮೋ ಎಕ್ಸ್‌ಪ್ರೆಸ್, ಮೈಸೂರು ರಾಜ್ಯರಾಣಿ ಎಕ್ಸ್‌ಪ್ರೆಸ್, ಮಾಲ್ಗುಡಿ ಎಕ್ಸ್‌ಪ್ರೆಸ್, ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ತುಮಕೂರು-ಚಾಮರಾಜನಗರ ಪ್ಯಾಸೆಂಜರ್ ರೈಲು, ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್, ಚಾಮುಂಡಿ ಎಕ್ಸ್‌ಪ್ರೆಸ್, ಬೆಂಗಳೂರು-ಮೈಸೂರು ಮೆಮೋ ಸ್ಪೆಷಲ್, ಮೈಸೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತವೆ.  

Published On: 27 October 2022, 05:28 PM English Summary: Increase in the speed of trains running between Bangalore and Mysore!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.