ಆನೇಕಲ್: ಹೆಬ್ಬಗೋಡಿಯ 750ಕ್ಕೂ ಹೆಚ್ಚು ಅಂಗನವಾಡಿಯ ಮಕ್ಕಳಿಗೆ ಚೈಲ್ಡ್ ಹೆಲ್ಪ್ ಫೌಂಡೇಶನ್ ವತಿಯಿಂದ ಹೈಜೀನ್ ಕಿಟ್ ಮತ್ತು ಸ್ಲಿಪ್ -ಸ್ಯಾಕ್‌ಗಳನ್ನು ವಿತರಿಸಲಾಯಿತು.
ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದ ಚೈಲ್ಡ್ ಹೆಲ್ಪ್ ಫೌಂಡೇಷನ್‌ನ ಕರ್ನಾಟಕದ ವ್ಯವಸ್ಥಾಪಕ ಜಿಮ್ಸನ್. ವಿ.ರಾಜನ್ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಾದುದ್ದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, . ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಅಭಿವೃದ್ಧಿಗೆ ತಮ್ಮ ವ್ಯಾಪ್ತಿಯಲ್ಲಿ ಕೊಡುಗೆ ನೀಡಬೇಕು ಎಂದರು.
ಇನ್ನು ಚೈಲ್ಡ್ ಹೆಲ್ಪ್ ಫೌಂಡೇಷನ್ ಮೂಲ ಉದ್ಧೇಶ 1-16 ವಯಸ್ಸಿನ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಾಗಿದೆ. ಇದರ ಮೂಲಕ ಆರೋಗ್ಯ, ಶಿಕ್ಷಣ ಸೇರಿದಂತೆ ಸ್ವಚ್ಛತಾ ಕ್ಷೇತ್ರಕ್ಕೆ ಕೊಡುಗೆ ನೀಡಲಾಗುವುದು ಎಂದರು.
ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ತಾಲ್ಲೂಕಿನಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮ ರೂಪಿಸುವು ಮೂಲಕ ಗಡಿಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಹೆಬ್ಬಗೋಡಿ ಗ್ರಾಮದ ಮುಖಂಡ ಬಾಲಪ್ಪ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸೇವಾ ಕ್ಷೇತ್ರಗಳಾಗಿವೆ. ಸಾಕಷ್ಟು ಬಡ ಕುಟುಂಬಗಳಿಗೆ ನೆರವು ನೀಡಲು ಚೈಲ್ಡ್ ಹೆಲ್ಪ್ ಫೌಂಡೇಷನ್ ವತಿಯಿಂದ ಮಕ್ಕಳಿಗೆ ವಿವಿಧ ಪರಿಕರಗಳನ್ನು ನೀಡಲಾಗಿದೆ. ಅಷ್ಟೇ ಅಲ್ಲದೇ ಸಮಾಜದ ಪ್ರತಿಯೊಂದ ಸಂಘ ಸಂಸ್ಥೆಗಳು ಕೂಡ ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು ಎಂದರು.
ಇನ್ನು ಈ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ವೆಂಕಟೇಶ್, ಅರುಣ್, ಮುಖಂಡ ದೀಪಕ್, ಶ್ಯಾಮ್ ಮುಂತಾದವರು ಇದ್ದರು.
Share your comments