ಚಾಮರಾಜನಗರ ಜಿಲ್ಲೆಯ ಸಾಗಡೆ ಗ್ರಾಮಪಂಚಾಯ್ತಿ ವ್ಯಾಪ್ತಿ ಪ್ರದೇಶದ ಬೆಟ್ಟದಪುರ ಗ್ರಾಮದ ರೈತನಾದ ಶ್ರೀಗುರುಲಿಂಗಪ್ಪ(65)ಬಿನ್ ಮಾದಪ್ಪರವರು ಸರ್ವೆ ನಂಬರ್ 313/ಎ ರಲ್ಲಿ 2 ಎಕರೆ 10 ಗುಂಟೆ ಜಮೀನು ಹೊಂದಿದ್ದು, ಇದರಲ್ಲಿ 225ಚ.ಮೀ ಕೃಷಿಹೂಂಡವನ್ನು ಕೃಷಿ ಇಲಾಖೆವತಿಯಿಂದ ನಿರ್ಮಿಸಿಕೊಂಡಿರುತ್ತಾರೆ. ಇದನ್ನು ವಿದ್ಯುಚ್ಛಕ್ತಿ ಸರಬರಾಜಿರುವಾಗ ಕೂಳವೆಬಾವಿ ನೀರನ್ನು ಶೇಖರಣೆ ಮಾಡಿಕೂಂಡು ವ್ಯವಸಾಯದ ಬೆಳೆಗಳಿಗೆ ನೀರನ್ನು ಹಾಯಿಸಲು ಉಪಯೋಗಿಸಲಾಗುತ್ತಿದೆ. ಇದರಲ್ಲಿ ಸುಮಾರು 5ರಿಂದ 6ಅಡಿ ನೀರು ಸದಾ ಇರುವಂತೆ ನೋಡಿಕೊಳ್ಳಲಾಗುತ್ತದೆ. ಬೆಟ್ಟದಪುರ ಗ್ರಾಮದಲ್ಲಿ ಸುಜಲಾ-3 ಯೋಜನೆವತಿಯಿಂದ ಕೃಷಿಹೂಂಡಗಳಲ್ಲಿ ಸಮಗ್ರ ಮೀನು ಕೃಷಿ ಮಾಡುವ ಕುರಿತು ತರಬೇತಿ ಏರ್ಪಡಿಸಿದಾಗ ಶ್ರೀಗುರುಲಿಂಗಪ್ಪರವರ ತುಂಬು ಆಸಕ್ತಿಯಿಂದ ಪಾಲ್ಗೊಂಡು ಮೀನುಕೃಷಿ ಮಾಡಲು ಒಪ್ಪಿದಾಗ ಯೋಜನಾವತಿಯಿಂದ ಅವರ ಕೃಷಿ ಹೂಂಡದಲ್ಲಿ ಸಮಗ್ರ ಮೀನುಕೃಷಿ ಪ್ರಾತೇಕ್ಷತೆ ಕೈಗೂಳ್ಳಲಾಯಿತು. ಯೋಜನಾವತಿಯಿಂದ ಅವರಿಗೆ 5ಕಿ.ಗ್ರಾಂ ಸುಣ್ಣ, 35ಕಿ.ಗ್ರಾಂ ದನದ ಕೂಟ್ಟಿಗೆ ಗೊಬ್ಬರ ನೀಡಿ ಬಿತ್ತನೆ ಪೂರ್ವ ಸಿದ್ದತೆ ಮಾಡಲು ಹೇಳಿಕೂಡಲಾಯಿತು. ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ(ಒ) ಹೆಬ್ಬಾಳದಿಂದ ಏಕರೂಪ ಗಾತ್ರದ ಬೆರಳುದ್ದ ಗಾತ್ರದ 225 ಅಮೂರ್ ಸಾಮಾನ್ಯ ಗೆಂಡೆ ಮರಿಗಳನ್ನು ಖರೀದಿಸಿ 1ಚ.ಮೀನಂತೆ ಬಿತ್ತನೆ ಮಾಡಲಾಯಿತು. ಒಂದು ಬದುವಿನ ಸಾಲಿಗೆ 10ರಂತೆ ಒಟ್ಟು 40ಬಾಳೆಗಿಡಗಳನ್ನು ಸಹ ಇವುಗಳೂಂದಿಗಿದ್ದು ಹೂಂಡದ ಸುತ್ತ ನೆಡಸಲ್ಪಟ್ಟಿತು. ಒಂದು ಬಾಳೆಗಿಡಕ್ಕೆ 1.6 ಕಿ.ಗ್ರಾಂನಂತೆ ಒಟ್ಟು 60.8ಕಿ.ಗ್ರಾಂ ಕೋಳಿಗೂಬ್ಬರವನ್ನು ಈ ಗಿಡಗಳಿಗೆ ಹಾಕಿಸಲಾಯಿತು. ಹೂಂಡದ ಸುತ್ತ ಹನಿನೀರಾವರಿ ವ್ಯವಸ್ಥೆ ಮಾಡಿಸಲಾಯಿತು, ಮೀನು ಸಾಕಣೆ ಕೂಳದ ನೀರನ್ನು ಈ ಗಿಡಗಳಿಗೆ ಹನಿ ನೀರಾವರಿ ಮುಖಾಂತರ ಉಣಿಸಲಾಯಿತು. ಮೀನುಗಳಿಗೆ ಆಹಾರವಾಗಿ ನೀರಿನಲ್ಲಿ ನೆನೆಹಾಕಿಟ್ಟ ಕಡ್ಲೆಕಾಯಿ ಹಿಂಡಿ ಮತ್ತು ಅಕ್ಕಿತೌಡನ್ನು 1:1 ಸಮ ಪ್ರಮಾಣದಲ್ಲಿ ಮೀನಿನ ದೇಹ ತೂಕದ ಶೇ10%ರಂತೆ 1ನೇ ಹಾಗು 2-3ನೇ ತಿಂಗಳು ಮೀನಿನ ದೇಹ ತೂಕದ 5%ರಂತೆ ನೀಡಲಾಯಿತು. 4ನೇ ತಿಂಗಳ ನಂತರದಿಂದ ಸಾಕಣಾ ಅವಧಿ ಮುಗಿಯುವವರೆಗೂ ತೇಲುವ ಆಹಾರವನ್ನು ಮೀನಿನ ದೇಹದ ತೂಕದ ಶೇ.2%ರಷ್ಟನ್ನು ಕೂಡಲಾಯಿತು. ತಿಂಗಳಲ್ಲಿ ಎರಡುಬಾರಿ ನೀರಿನ ಗುಣಧರ್ಮಗಳನ್ನು ಮತ್ತು ಒಂದು ಬಾರಿ ಮೀನಿನ ಬೆಳವಣಿಗೆಯನ್ನು ಪರೀಕ್ಷಿಸಲಾಯಿತು. 10 ತಿಂಗಳ ಸಾಕಣೆ ಮಾಡಿದ ನಂತರ ಕಟಾವು ಮಾಡಿದಾಗ ಒಟ್ಟು 56 ಕಿ.ಗ್ರಾಂ ಮೀನನ್ನು ಶೇ50% ಬದುಕುಳಿಯುವಿಕೆ ಜೋತೆಗೆ 0.5ಕಿ.ಗ್ರಾಂ ಸರಾಸರಿ ತೂಕದೂಂದಿಗೆ ಪಡೆಯಲಾಯಿತು. ಈ ಮೀನುಗಳನ್ನು ಕಿಲೋ ರೂ.80ರಂತೆ 4480ರೂಗೆ ಮಾರಾಟ ಮಾಡಲಾಯಿತು. ಜತೆಗೆ ಬಾಳೆ ಗಿಡಗಳಿಂದ ಒಟ್ಟು 40 ಬಾಳೆಗೊನೆಗಳನ್ನು ಕಟಾವು ಮಾಡಲಾಯಿತು. ಒಟ್ಟು 320ಕಿ.ಗ್ರಾಂ (ಬಾಳೆ ಗೋನೆ ಸರಾಸರಿ 8ಕಿ.ಗ್ರಾಂನಂತೆ) ಬಾಳೆ ಹಣ್ಣನ್ನು ಕಿಲೋಗೆ ರೂ. 40ರಂತೆ ರೂ 12800/- ಮಾರಾಟ ಮಾಡಲಾಯಿತು. ಇದರಲ್ಲಿ ಮೀನುಮರಿಗಳಿಗೆ(ರೂ. 225/-) ಗೊಬ್ಬರಕ್ಕೆ(ರೂ.175/-) ಮೀನಿನ ಆಹಾರಕ್ಕೆ (ರೂ. 900/-) ಸುಣ್ಣಕ್ಕೆ(ರೂ. 85/-) ಬಾಳೆಗಿಡಗಳಿಗೆ(ರೂ. 200/-) ಕೋಳಿ ಗೂಬ್ಬರಕ್ಕೆ (ರೂ.1520/-) ಹಾಗೂ ಹನಿ ನೀರಾವರಿಗೆ (ರೂ.510/-) ಕಳೆದಾಗ 300 ದಿನಗಳ ಕಾಲಾವಧಿಯಲ್ಲಿ ಒಟ್ಟು ನಿವ್ವಳ ಲಾಭ ರೂ.13074/- ಪಡೆಯಲಾಯಿತು. ಪ್ರಾತಕ್ಷತೆಯಿಂದ ಬಂದ ಫಲಿತಾಂಶವನ್ನು ಎಲ್ಲ ರೈತ ಬಾಂಧವರಲ್ಲಿ ಹಂಚಿಕೂಳ್ಳಲು ಮೀನು ಕೃಷಿ ಕ್ಷೇತ್ರೋತ್ಸವನ್ನು ಏರ್ಪಡಿಸಲಾಯಿತು. ಇದೇ ಸಂದರ್ಭದಲ್ಲಿ ಫಲಾನುಭವಿ ರೈತ ಗುರುಲಿಂಗಪ್ಪನವರು ಸಂತಸ ವ್ಯಕ್ತಪಡಿಸುತ್ತ, ನೆರೆದಿರುವ ಎಲ್ಲ ರೈತರು ತನ್ನಂತೆ ಹೂಂಡದ ಸಂಪೂರ್ಣ ಸ್ಥಳವನ್ನು ಉಪಯೋಗಿಸಿಕೂಂಡು ಹೆಚ್ಚುವರಿ ಆದಾಯ ಪಡೆಯಬೇಕಂದು ತಿಳಿಸಿದರು. ಹೂಂಡದ ಸುತ್ತ ಬಾಳೆ ಹಾಕಿರಿವುದಿರಿಂದ ಟಾರ್ಪಲ್‍ನ್ನು ಸೂರ್ಯನ ಬಿಸಿಲಿನಿಂದ ರಕ್ಷಿಸಿ ಧೀರ್ಘ ಬಾಳಿಕೆಯಾಗುತ್ತದೆ ಎಂದು ವಿವರಿಸಿದರು. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ರೈತರು ಸಹ ಮುಂದಿನ ದಿನಗಳಲ್ಲಿ ತಾವು ಕೂಡ ಸಮಗ್ರ ಮೀನು ಕೃಷಿ ಕೈಗೂಳ್ಳುವುದಾಗಿ ತಿಳಿಸಿದರು.
ಆರ್ಥಿಕತೆ (225 ಚ.ಮೀ. ಕೃಷಿಹೂಂಡ)
ಕಾರ್ಯಾಚರಣೆಯ ವೆಚ್ಚ |
ಪ್ರಮಾಣ |
ರೂಪಾಯಿಗಳಲ್ಲಿ |
||
ಮೀನು ಮರಿಗಳ ಬೆಲೆ |
225 ಬೆರೆಳುದ್ದ ಗಾತ್ರದ ಮೀನುಗಳು |
225.00 |
||
ಗೂಬ್ಬರದ ಬೆಲೆ |
35 ಕೆ.ಜಿ 1ಕಟಾವಿಗೆ ರೂ. 5 ಕಿ.ಗ್ರಾಂ |
175.00 |
||
ಮೀನುಮರಿ ಆಹಾರಕ್ಕೆ |
25 ಕೆ.ಜಿ ರೂ. 36/ ರೂನಂತೆ (ತೇಲುವ ಆಹಾರ+ ಅಕ್ಕಿತೌಡು + ಕಡ್ಲೆಕಾಯಿ ಇಂಡಿ) |
900.00 |
||
ಕೂಲಿ |
ರೂ. 300 ಪ್ರತಿ ದಿನದಂತೆ 2 ದಿನಕ್ಕೆ / ಒಂದು ಕಟಾವಿಗೆ |
600.00 |
||
ಸುಣ್ಣದ ಬೆಲೆ |
5 ಕೆ.ಜಿಗೆ 17ರೂನಂತೆ |
85.00 |
||
ಬಾಳೆ ಸಸಿಗಳ ಬೆಲೆ |
ಕೃಷಿ ಹೂಂಡದ ಸುತ್ತ 40 ಸಸಿಗಳಿಗೆ |
200.00
|
||
ಕೋಳಿ ಗೂಬ್ಬರ ಬಾಳೆ ಸಸಿಗಳಿಗೆ |
1.6 ಕೆ.ಜಿ ಕೋಳಿ ಗೂಬ್ಬರ/ಸಸಿಗೆ/38ಬಾಳೆ ಸಸಿಗಳು/ 25ರೂನಂತೆ |
1520.00 |
||
ಹನಿನೀರಾವರಿ ಮತ್ತು ಕನೆಕ್ಟರ್‍ನ ಬೆಲೆ |
15ಮೀ/ ಒಂದು ಬದಿಗೆ/60 ಮೀ (4ಸಾಲಿಗೆ)/ ರೂ.8 ಮತ್ತು ಕನೆಕ್ಟರ್ (ರೂ.30/-) |
510.00 |
||
ಒಟ್ಟು ವೆಚ್ಚ |
4215.00 |
|||
ಒಟ್ಟು ಉತ್ಪಾದನೆ |
|
|
||
ಅಮೂರ್ ಸಾಮಾನ್ಯ ಗೆಂಡೆ (112 ಸಂಖ್ಯೆ) |
ಬದುಕುಳಿಯುವಿಕೆ ಶೇ.50%. 112 ಮೀನುಗಳಿಗೆ 0.5ಕೆ.ಜಿ ಸರಾಸರಿ ತೂಕ 56 ಕೆ.ಜಿ ಮತ್ತು ರೂ.80/ ರಂತೆ ಮಾರಾಟ |
4480.00 |
||
ಒಟ್ಟು ಬಾಳೆ ಗೂನೆಗಳು |
ಸರಾಸರಿ ತೂಕ 8 ಕೆ.ಜಿ. 40 ಗೂನೆಗಳು 320 ಕೆ.ಜಿ.ಗೆ ರೂ. 40/ರಂತೆ ಮಾರಾಟ |
12800.00 |
||
ಆದಾಯ |
17289.00 |
|||
ನಿವ್ವಳ ಲಾಭ (ಆದಾಯ- ಕಾರ್ಯಾಚರಣೆ ವೆಚ್ಚ) |
13074.00 |
|||
225 ಚ.ಮೀ ಕೃಷಿ ಹೂಂಡಕ್ಕೆ ಕೇವಲ 300 ದಿನಗಳಿಗೆ (10 ತಿಂಗಳಲ್ಲಿ) ನಿವ್ವಳ ಲಾಭ ರೂ 13074.00 /- ಪಡೆಯಲಾಯಿತು |
Share your comments