1. ಯಶೋಗಾಥೆ

ಬರದ ನಾಡಿನಲ್ಲಿ ಗಂಧದಪರಿಮಳ ಹರಡಿಸಲು ಮುಂದಾಗಿದ್ದಾರೆ ಲಕ್ಷ್ಮಣಸಿಂಗ್ ಹಜೇರಿ

ಲಕ್ಷ್ಮಣಸಿಂಗ್ ಹಜೇರಿ

ಕೃಷಿತೋ ನಾಸ್ತಿ ಧುರ್ಬಿಕಂ, ರೈತನ ಆದಾಯ ದ್ವಿಗುಣಗೊಳಿಸಿವಲ್ಲಿ ರೈತರು ಅಳವಡಿಸುವ ವೈಜ್ಞಾನಿಕ ಕೃಷಿ ಪದ್ಧತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಮೂಲತಃ ವಿಜಯಪುರ ಜಿಲ್ಲೆ ಬಸವ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರಾದ ಶ್ರೀ ಲಕ್ಷ್ಮಣಸಿಂಗ್ ಹಜೇರಿಯವರು. ತಮ್ಮ ನಾಲ್ಕುಎಕರೆ ಹದಿನೇಳು ಗುಂಟೆ ಜಮೀನಿನಲ್ಲಿ ತರಹೇವರಿ ತೋಟಗಾರಿಕಾ ಬೆಳೆಗಳ ಜೊತೆಗೆ ಶ್ರೀಗಂಧ ಕೃಷಿಯನ್ನು ಕ್ಯಗೊಂಡು ಬರದ ನಾಡಿನಲ್ಲಿ ಗಂಧದಪರಿಮಳ ಹರಡಿಸಲು ಮುಂದಾಗಿದ್ದಾರೆ.

ಮಿಶ್ರಬೆಳೆ ರೈತನ ಮೊಗದಲ್ಲಿಕಳೆ : ಇವರು ತಮ್ಮ ಒಟ್ಟಾರೆ ನಾಲ್ಕುಎಕರೆ ಹದಿನೇಳು ಗುಂಟೆ ಜಮೀನಿನಲ್ಲಿ 1400-ಶ್ರೀಗಂಧ, 600-ಪೇರಲ , 360-ಸೀತಾಫಲ, 400-ಆಂಜೂರ, 50ನೇರಳೆ, 200ಗುಲಾಬಿ, 100-ತೆಂಗು ಹಾಗೂ ಮಾವಿನ ಗಿಡಗಳನ್ನು ನೆಟ್ಟು. ಅರಣ್ಯ ಮತ್ತು ಸಮಗ್ರ ತೋಟಗಾರಿಕಾ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ.

ಸದ್ಯ ಶ್ರೀಗಂಧ ಗಿಡಗಳಿಗೆ 14 ತಿಂಗಳು ಬೆಳೆಯಾಗಿದ್ದು ಇದು 12ವರ್ಷಗಳ ನಂತರ ಕಟಾವಿಗೆ ಬರುತ್ತದೆ. ಮೊದಲ ಬಾರಿಗೆ ಶ್ರೀಗಂಧ ಕೃಷಿಯಲ್ಲಿ ತೊಡಗಿರುವ ಲಕ್ಷ್ಮಣಸಿಂಗ್ ಹಜೇರಿ ವಿವಿಧ ಹಣ್ಣುಗಳ ತೋಟಗಾರಿಕಾ ಬೆಳೆ ಎರಡು ತಿಂಗಳದ ಆದಾಯದಂತಾದರೆ ಶ್ರೀಗಂಧ ಗಿಡದ ಆದಾಯ ನಿವೃತ್ತಿ ಅಂಚಿನ ಪಿಂಚಣಿಯಂತೆ ಸಿಗುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಶ್ರಿಗಂಧದ ಬೆಳವಣಿಗೆ ಆಗುವತನಕ ಉಪ ಆದಾಯ ದೊರಕುವದು ನಿರಂತವಾಗಿರುತ್ತದೆ.

ಹನಿ ನೀರಾವರಿ :- ಇತರ ಬೆಳಗಳಂತೆ ಈ ಅರಣ್ಯ ತೋಟಗಾರಿಕೆ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುವುದಿಲ್ಲ ಸ್ವಲ್ಪ ನೀರಿರುವ ಒಂದು ಕೊಳವೆ ಬಾವಿ ಮೂಲಕ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ ಅತೀಯಾದ ನೀರಿನ ಬಳಕೆಯಿಂದ ಭೂಮಿ ಹಾಳಾಗುವದನ್ನು ತಡೆಗಟ್ಟಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಅತೀಯಾದ ನೀರಿನಿಂದ ಮಣ್ಣಿನಸವಕಳಿಯನ್ನು ತಪ್ಪಿಸಲು ಸಾಧ್ಯ ಆದ್ದರಿಂದ ಹನಿ ನೀರಾವರಿ ಒದಗಿಸಿದ್ದಾರೆ ತೋಟಗಾರಿಕಾಬೆಳೆಗೆ ಕ್ರಮಬದ್ಧ ನೀರಾವರಿಯಿಂದ ಅಧಿಕ ಫಸಲು ಮತ್ತು ಲಾಭ ಪಡೆಯಬಹದು

ರೋಗ ಭಾದೆ ಕಡಿಮೆ - ಶ್ರೀಗಂಧ, ಅಂಜೂರ, ನೇರಳೆ, ಪೇರಲ ಮತ್ತು ಸೀತಾಫಲ ಸೇರಿದಂತೆ. –ಮಿಶ್ರಬೆಳೆಯಾಗಿ ಬೆಳೆಯುತ್ತಿರುವ ಈ ಬೆಳೆಗಳಿಗೆ ರೋಗ ಬಾದೆ ಕೂಡ ಕಡಿಮೆ. ವರ್ಷಕ್ಕೆ ಎರಡು ಬಾರಿ ತಿಪ್ಪೆಗೊಬ್ಬರ ಕೊಡುತ್ತಾ ಹಾಗು ಹನಿ ನೀರಾವರಿಯಿಂದ ಅತಿ ಕಡಿಮೆ ಖರ್ಚಿನಲ್ಲಿ ಈ ಬೆಳೆಯನ್ನು ಬೆಳೆಯಬಹುದು.

ಸಾವಯವ ಗೊಬ್ಬರಬಳಕೆ :

ಹಜೇರಿಯವರು ಯಾವುದೇ ತರಹದ ರಾಸಾಯನಿಕ ಗೊಬ್ಬರ ಬಳಸದೆ. ತಿಪ್ಪೆ ಗೊಬ್ಬರ, ಜೈವಿಕಗೊಬ್ಬರದಂತಹ ಸಾವಯವ ಗೊಬ್ಬರವನ್ನು ಬಳಸುತ್ತಿದ್ದಾರೆ ಇದರಿಂದ ರೋಗ ಮುಕ್ತ ಮತ್ತು ಆರೋಗ್ಯವಂತ ಗಿಡಗಳಾಗಿ ಸಮೃದ್ಧವಾದ ಫಸಲನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ ಇದಲ್ಲದೆ ಗಿಡಗಳ ಒಣಗಿದ ಎಲೆಗಳು, ಬುಡಚಿ, ಇತರೆ ಮರಗಳ ತ್ಯಾಜ್ಯವಸ್ತುಗಳನ್ನು ಗಿಡಗಳ. ಸುತ್ತಲೂ ಹಾಕಿ. ಮೇಲುಹೊದಿಕೆಯಾಗಿ ರೂಪಿಸಿದ್ದಾರೆ.

ರೈತನ ದೂರವಾಣಿ ಸಂಖ್ಯೆ-8088409017

ಲೇಖನ: ಸಾಗರ ಎಮ್ ಬಾಗೇವಾಡಿ, ಆತ್ಮಯೋಜನೆ, ರೈತ ಸಂಪರ್ಕ ಕೇಂದ್ರ, ಮನಗೂಳಿ Mail: sagarb729@gmail.com

Published On: 06 August 2021, 04:09 PM English Summary: Farmer successful in integrated horticulture

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.