ನಾಳೆ ಮಂಡ್ಯದ ಹುತಾತ್ಮ ಯೋಧ ಗುರು ನಿವಾಸಕ್ಕೆ ಸುಮಲತಾ ಭೇಟಿ
ಪುಲ್ವಾಮ ದಾಳಿಯಲ್ಲಿ ಹುತ್ಮಾತರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ ಅರ್ಧ ಏಕರೆ ಜಮೀನು ನೀಡಿ ಮಾನವೀಯತೆ ಮೆರೆದ ನಟಿ ನಟಿ ಸುಮಲತಾ ಅಂಬರೀಷ್ ನಾಳೆ ಹುತ್ಮಾತರಾದ ಮಂಡ್ಯದ ಯೋಧ ಗುರು ನಿವಾಸಕ್ಕೆ ಭೇಟಿ ನೀಡಲಿದ್ದಾರೆ.
ಹೌದು. ನಾಳೆ ಫೆ.21 ರಂದು ಬೆಳಗ್ಗೆ ನಟಿ ಸುಮಲತಾ ಅಂಬರೀಷ್ ಪುಲ್ವಾಮ ದಾಳಿಯಲ್ಲಿ ಹುತ್ಮಾತರಾದ ಮಂಡ್ಯದ ಯೋಧ ಗುರು ಅವರ ನಿವಾಸಕ್ಕೆ ತೆರಳಿ ಗುರು ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.
ಮಂಡ್ಯದ ದೊಡ್ಡ ಅರಸಿನಕೆರೆಯಲ್ಲಿರೊ ಅರ್ಧ ಏಕರೆ ಜಮೀನನ್ನು ಯೋಧನ ಕುಟುಂಬಕ್ಕೆ ಬರೆದುಕೊಡುವುದಾಗಿ ಸುಮಲತಾ ಅಂಬರೀಷ್ ಇತ್ತೀಚೆಗಷ್ಟೇ ತಿಳಿಸಿದ್ದರು.
Published On: 20 February 2019, 09:01 PMEnglish Summary: ನಾಳೆ ಮಂಡ್ಯದ ಹುತಾತ್ಮ ಯೋಧ ಗುರು ನಿವಾಸಕ್ಕೆ ಸುಮಲತಾ ಭೇಟಿ
Share your comments