1. ಸುದ್ದಿಗಳು

Yamuna river ಅಪಾಯದ ಮಟ್ಟ ಮೀರುತ್ತಿದೆ ಯಮುನಾ ನದಿ: ಕೇಜ್ರಿವಾಲ್‌ ತುರ್ತು ಸಭೆ!

Hitesh
Hitesh
Yamuna river crossing danger level: Kejriwal emergency meeting!

ಕಳೆದ ಒಂದು ವಾರದಲ್ಲಿ ಉತ್ತರ ಭಾರತದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿದೆ.

ಇದೀಗ ದೆಹಲಿಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತುರ್ತು ಸಭೆ ಕರೆದಿದ್ದಾರೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿದಿದ್ದು, ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಯಮುನಾ ನದಿ ಪ್ರವಾಹದ ಮಟ್ಟವನ್ನು ತಲುಪಿದ್ದು,

ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.   

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಹರಿವು ಪಾಯದ ಮಟ್ಟ ಮೀರಿದೆ. ಇದರಿಂದ ಇದೀಗ ದೆಹಲಿಯಲ್ಲಿ  ಪ್ರವಾಹ ಪರಿಸ್ಥಿತಿ ಎದುರಾಗಿದೆ.  

ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದಾಗಿ  ದೆಹಲಿಯಲ್ಲಿ ಯಮುನಾ ನದಿ ಪ್ರವಾಹದ ಮಟ್ಟವನ್ನು ಮೀರಿದ್ದು,

ನೀರಿನ ಮಟ್ಟ 207.25 ಮೀಟರ್‌ ಮುಟ್ಟಿದೆ.  

ಈ ಪ್ರಮಾಣದಲ್ಲಿ ನೀರು ಹರಿಯುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟದ ಹತ್ತಿರಕ್ಕೆ  ಯಮುನಾ ನದಿ ಹರಿವು ಮುಟ್ಟಿದೆ.

ಇನ್ನು ಯಮುನಾ ನದಿ ನೀರಿನ ಮಟ್ಟವು 1978ರಲ್ಲಿ 207.49 ಮೀಟರ್‌ಗೆ ಏರಿಕೆ ಕಂಡಿತ್ತು.

1978ರಲ್ಲಿ ದಾಖಲಾದ ನೀರಿನ ಪ್ರಮಾಣ ದಾಖಲೆ ಮಟ್ಟದ್ದು ಎಂದು ಕೇಂದ್ರ ಜಲ ಆಯೋಗದ ವರದಿ ತಿಳಿಸಿದೆ.

ಇನ್ನು ಮಂಗಳವಾರ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ದೆಹಲಿಯ ಹಳೇ ರೈಲು ಸೇತುವೆ ಬಳಿ ನೀರಿನ ಮಟ್ಟ 207 ಮೀಟರ್‌ ಗಡಿ ದಾಟಿದೆ.

ಅದೇ 8 ಗಂಟೆಯ   ಹೊತ್ತಿಗೆ 207.25 ಮೀಟರ್‌ಗೆ ಏರಿಕೆ ಕಂಡಿದೆ.

ಈ ಪ್ರಮಾಣವು 2013ರ ಇಸವಿಗೆ ಹೋಲಿಕೆ ಮಾಡಿದರೆ, ಗರಿಷ್ಠ ಪ್ರಮಾಣ ಎನ್ನಲಾಗಿದೆ.

ಆದರೆ, ಆ ಸಂದರ್ಭದಲ್ಲಿ ನೀರಿನ ಮಟ್ಟವು 207.32 ಮೀಟರ್‌ಗೆ ತಲುಪಿತ್ತು.

ಉತ್ತರ ಭಾರತದಲ್ಲಿ ಧಾರಾಕಾರ ಮಳೆ: ದೆಹಲಿಯಲ್ಲಿ ಇನ್ನೆರಡು ದಿನ ನಿರ್ಣಾಯಕ!

ಇನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಯಮುನಾ ನದಿ ನೀರಿನ ಮಟ್ಟದ ಪ್ರಮಾಣವು 207.35 ಮೀಟರ್‌ಗೆ ಏರಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಅಲ್ಲದೇ ನೀರಿನ ಪ್ರಮಾಣವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ವರದಿ ಮಾಡಿದೆ.    

ದೆಹಲಿಯಲ್ಲಿ ಪ್ರವಾಹದ ಪರಿಸ್ಥಿತಿ

ಉತ್ತರ ಭಾರತದ ಭಾಗದಲ್ಲಿ ಮಳೆ ಮುಂದುವರಿದಿರುವುದು ಪರೋಕ್ಷವಾಗಿ ದೆಹಲಿಯಲ್ಲಿ ಸಂಕಷ್ಟವನ್ನು ತಂದೊಡ್ಡಿದೆ.

ಕಳೆದ ಒಂದು ವಾರದ ಅವಧಿಯಿಂದಲೂ ಉತ್ತರ ಭಾರತದ ಹಲವು ಭಾಗದಲ್ಲಿ ಮಳೆ ಮುಂದುವರಿದಿದೆ.

ಇದರಿಂದ ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ.  

ನದಿ ನೀರು ಅಪಾಯದ ಮಟ್ಟ 205.33 ಮೀಟರ್‌ ಗಡಿ ದಾಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ತಗ್ಗುಪ್ರದೇಶಗಳಲ್ಲಿ

ವಾಸಿಸುತ್ತಿರುವವರನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ಪ್ರವಾಹಪೀಡಿತ ಪ್ರದೇಶಗಳ ಮೇಲೆ ಕಣ್ಗಾವಲಿರಿಸುವ

ಉದ್ದೇಶದಿಂದಾಗಿ 16 ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.   

ತುರ್ತು ಸಭೆ ಕರೆದ ದೆಹಲಿ ಮುಖ್ಯಮಂತ್ರಿ  

ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕ ಇರುವ ಹಿನ್ನೆಲೆಯಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ

ಕೇಜ್ರಿವಾಲ್‌ ಅವರು ತುರ್ತು ಸಭೆಯನ್ನು ನಡೆಸಿದ್ದಾರೆ. ಈಗಾಗಲೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ದೆಹಲಿ ಸರ್ಕಾರವು ಕೆಲವು ತುರ್ತು ಕ್ರಮಗಳನ್ನು ಕೈಗೊಂಡಿದೆ.   

ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿರುವುದು ಹಾಗೂ ನಗರದ ವಿವಿಧೆಡೆ ನೀರು ನಿಂತು ಉಂಟಾಗಿರುವ ಸಮಸ್ಯೆ

ಕುರಿತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಹರಿಯಾಣದ ಹಥಿನಿಕುಂಡ ಬ್ಯಾರೇಜ್‌ಗೆ ಒಳಹರಿವು ಹೆಚ್ಚಳವಾಗಿದೆ.

ಹೀಗಾಗಿ, ಬ್ಯಾರೇಜ್‌ನಿಂದ ನೀರು ಬಿಡಲಾಗುತ್ತಿದ್ದು, ದೆಹಲಿಯಲ್ಲಿ ಯಮುನಾ ನದಿ ತುಂಬಿ ಹರಿಯುತ್ತಿದೆ.   

Published On: 12 July 2023, 04:28 PM English Summary: Yamuna river crossing danger level: Kejriwal emergency meeting!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.