1. ಸಕ್ಕರೆ ನಾಡಲ್ಲಿ ಮೋದಿಗೆ ಹೂವಿನ ಸುರಿಮಳೆ : ನಮೋ ನೋಡಲು ಕಿಕ್ಕಿರಿದ ಜನ
2. ಆಸ್ಕರ್ ಅನ್ನು ಮುಡಿಗೇರಿಸಿಕೊಂಡ ನಾಟು ನಾಟು : ರಾಜಮೌಳಿ ಚಿತ್ರಕ್ಕೆ ಮತ್ತೊಂದು ಗರಿ
3. ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
4. ಬಾಸುಮತಿ ಅಕ್ಕಿಗೆ ವಿಶೇಷ EU ಲೇಬಲ್
5. ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಸಮಾವೇಶ
6. ಆಹಾರ ಅರಸಿ , ನಾಡಿಗೆ ಬಂದ ಕಾಡಾನೆ
7..ನಾಳೆ ರೈತ ಸಮಾವೇಶದಲ್ಲಿ ಭಾಗವಹಿಸಿ ,ಇದು ರೈತರ ಸ್ವಾಭಿಮಾನದ ಪ್ರಶ್ನೆ -ಬಿ.ಸಿ ಪಾಟೀಲ್
8.ಧಾರವಾಡದಲ್ಲಿ ಅಗ್ರಿವಿಷನ್ ದಕ್ಷಿಣ ಭಾರತ ಸಮ್ಮೇಳನ
1. ದಶಪಥ ಹೆದ್ದಾರಿ ಲೋಕಾರ್ಪಣೆಗೆ ಮಂಡ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸಕ್ಕರೆ ನಾಡ ಜನರು ಅದ್ದೂರಿ ಹೂವಿನ ಸ್ವಾಗತ ಮಾಡಿದರು . ಮಂಡ್ಯ ಜಿಲ್ಲೆಯಾದ್ಯಂತ ಕೇಸರಿ ಬಾವುಟ ಗಳೇ ರಾರಾಜಿಸಿತ್ತು .
ಮಂಡ್ಯದ ಪಿಇಎಸ್ ಹೆಲಿಪ್ಯಾಡ್ನಿಂದ ಐಬಿ ವೃತ್ತಕ್ಕೆ ಬಂದು ಅಲ್ಲಿಂದಲೇ ಮೋದಿ ರೋಡ್ ಶೋ ಆರಂಭಿಸಿದ್ದು. ರಸ್ತೆಯ ಇಕ್ಕೆಲಗಳಲ್ಲೂ ಸಾವಿರಾರು ಜನ ಮೋದಿ ನೋಡಲು ನಿಂತಿದ್ದರು. ಬಿಜೆಪಿ, ಮೋದಿ ಪರ ಜೈಕಾರಗಳು ಮೊಳಗಿದ್ದು ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ರಸ್ತೆಯುದ್ದಕ್ಕೂ ಪ್ರಧಾನಿ ಮೋದಿಗೆ ಮಂಡ್ಯದ ಜನ ಹೂಮಳೆಯ ಮೂಲಕ ಸ್ವಾಗತ ಕೋರಿದ್ರು. ಪ್ರಧಾನಿ ಮೋದಿ ಕೂಡ ಜನರತ್ತ ಕೈ ಬೀಸುತ್ತಾ ಕಾರಿನ ಮೇಲೆ ಬಿದ್ದ ಹೂವುಗಳನ್ನು ಜನರತ್ತ ಹಾಕಿದ್ದು ವಿಶೇಷವಾಗಿತ್ತು. ಇನ್ನು ಮಂಡ್ಯದ ಸಂಜಯ್ ವೃತ್ತ, ಮಹಾವೀರ, ನಂದ ವೃತ್ತ ಹಾಗೂ ಅಮರಾವತಿ ಹೋಟೆಲ್ ವರೆಗೂ ಪ್ರಧಾನಿ ಮೋದಿ ಬೃಹತ್ ರೋಡ್ ಶೋ ನಡೆಸಿದ್ರು ಸುಮಾರು 1.8 ಕಿ.ಮೀ ರೋಡ್ ಶೋ ನಡೆಸಿದ ಪ್ರಧಾನಿ ಮೋದಿಗೆ ವಿವಿಧ ರಾಜ್ಯಗಳಿಂದ ಬಂದಿದ್ದ 47 ಕಲಾತಂಡಗಳು ಸಾಥ್ ನೀಡಿದ್ದವು.
Dearness allowance: ಸರ್ಕಾರಿ ನೌಕರರೇ ಗಮನಿಸಿ; ಶೀಘ್ರದಲ್ಲೇ 4% ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ!
2. ಚಲನಚಿತ್ರ ಪ್ರಶಸ್ತಿಯಲ್ಲಿ ವಿಶ್ವದ ಅತಿದೊಡ್ಡ ಪ್ರಶಸ್ತಿ ಆಸ್ಕರ್ . ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್ನಲ್ಲಿ ಆಯೋಜಿಸಲಾಗಿದೆ ಹಾಗು ಈ ವರ್ಷವೂ ಕೂಡ ದೀಪಿಕಾ ಪಡುಕೋಣೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಆರ್ಆರ್ಆರ್ ಚಲನಚಿತ್ರದಲ್ಲಿ ಇರುವ ನಾಟು ನಾಟು ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು ಕೂಡಾ . ಈ ಹಾಡು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಈ ವರ್ಷದ ಅತ್ಯುತ್ತಮ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ ಕೂಡ .
ಈ ಹಾಡು ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರಶಸ್ತಿಗಳನ್ನು ತಂದಿದೆ. ಇದರ ಜೊತೆಗೆ ಆಸ್ಕರ್ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದೆ.
3. ಭಾರತ ಸರಕಾರ ನೆಹರು ಯುವ ಕೇಂದ್ರದಿಂದ ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 2 ಹುದ್ದೆಯಂತೆ ತಾತ್ಕಾಲಿಕವಾಗಿ ಒಂದು ವರ್ಷ ಅಥವಾ 2 ವರ್ಷದ ಅವಧಿಗೆ ನೇಮಕ ಮಾಡಲು ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 24 ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿಗಳನ್ನ ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
4. ಯುರೋಪಿಯನ್ ಯೂನಿಯನ್ (EU) ನಲ್ಲಿ ತನ್ನ ಪರಿಮಳಯುಕ್ತ ಬಾಸ್ಮತಿ ಅಕ್ಕಿಗೆ ವಿಶೇಷವಾದ ಭೌಗೋಳಿಕ ಸೂಚನೆ (GI) ಲೇಬಲ್ ಪಡೆಯಲು ಭಾರತ ಪ್ರಯತ್ನಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವ್ಯಾಪಾರಿಗಳು ಮತ್ತು ತಜ್ಞರ ಪ್ರಕಾರ, EU ವೈನ್ ಮತ್ತು ವಿಸ್ಕಿಗೆ ಪ್ರವೇಶ ಪಡೆಯಲು ತನ್ನ ವ್ಯಾಪಾರ ಮಾತುಕಟ್ಟೆಗಳಲ್ಲಿ ಭಾರತವನ್ನು (ಅದರ ದೃಢವಾದ ಸ್ಥಾನದಿಂದ) ಸೋಲಿಸಲು ಪ್ರಯತ್ನಿಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರೈತರ ಚುನಾವಣಾ ಪ್ರಣಾಳಿಕೆ ಒಪ್ಪುವ ಪಕ್ಷಕ್ಕೆ ಮಾತ್ರ ರೈತರ ಬೆಂಬಲ! ಈ ಬೇಡಿಕೆ ಮುಂದಿಟ್ಟ ರೈತ ಸಂಘ
5. ಒಕ್ಕಲುತನ ಪ್ರತಿ ಕುಟುಂಬದ ಉಪ ಕಸುಬಾಗಬೇಕು ಎಂದು ಬಿಜೆಪಿ ಮುಖಂಡ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಹಿರೇಮಠ ಹಿರಿಯ ಪ್ರಥಾಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಮಟ್ಟದ ಸಮಾವೇಶ ನಡೆಯಿತು . ಈ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಓದಿದ ಎಲ್ಲರಿಗೂ ಉದ್ಯೋಗ ಸಿಗುವುದು ಸಾಧ್ಯವಿಲ್ಲ. ಅದ್ದರಿಂದ ಶಿಕ್ಷಣದ ಜೊತೆಗೆ ನಮ್ಮ ಮಕ್ಕಳಿಗೆ ಒಕ್ಕಲುತವನ್ನು ಕಲಿಸಬೇಕಾಗಿದೆ. ಶೇ 95ಕ್ಕೂ ಹೆಚ್ಚು ಅಂಕ ಪಡೆದವರಿಗೂ ಕೆಲಸ ಸಿಗುತ್ತಿಲ್ಲ. ಇದರಿಂದ ನಾವು ಮರಳಿ ಭೂಮಿ ಕಡೆ ಬರಬೇಕಾಗಿದೆ. ಇದಕ್ಕಾಗಿ ಪ್ರತಿಯೊಬ್ಬರು ಕೃಷಿ ಕೆಲಸ ಮಾಡುವುದನ್ನು ರೂಡಿಸಿಕೊಳ್ಳಬೇಕು. ಗೋ ಸಗಣಿ, ಮೂತ್ರ ಬಂಗಾರವಾಗುತ್ತಿದ್ದು, ಜಾನುವಾರುಗಳ ಜೊತೆ ಬದುಕುವವರಿಗೆ ರೋಗ ಬರುವುದಿಲ್ಲ ಎಂದು ತಮ್ಮ ಕೃಷಿ ಬದುಕಿನ ಅನುಭವ ಹಂಚಿಕೊಂಡರು.
6.ಜನವಸತಿ ಪ್ರದೇಶದಲ್ಲಿ ಆನೆಯೊಂದು ಆತಂಕ ಮೂಡಿಸಿದ ಘಟನೆ ನಡೆದಿದೆ . ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬೇವಾಡಿ ನವಗ್ರಾಮದಲ್ಲಿ ಈ ಘಟನೆ ನಡೆದಿದೆ . ಆನೆ ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದು , ಬಾಳೆ, ಅಡಿಕೆ ತೋಟಕ್ಕೆ ನುಗ್ಗಿದ ಆನೆ ಬೆಳೆಗಳನ್ನು ತಿಂದು ಹಾಕಿದೆ. ತಾಲೂಕಿನ ರೇವಣಕರ ಅವರ ಮನೆ ಬಳಿ ಆನೆ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಸಿಬ್ಬಂದಿ ಕಾಡಾನೆಯನ್ನು ಮತ್ತೆ ಕಾಡಿಗೆ ಓಡಿಸಿದರು.
7. ನಾಳೆ ಮಾರ್ಚ 14ರಂದು ಮಧ್ಯಾಹ್ನ 1 ಗಂಟೆಗೆ ಹಿರೇಕೆರೂರಿನ ಪೊಲೀಸ್ ಮೈದಾನದಲ್ಲಿ ಹಾವೇರಿ ಜಿಲ್ಲೆ ರೈತ ಮೋರ್ಚಾದ ವತಿಯಿಂದ ರೈತ ಸಮಾವೇಶಕ್ಕೆ ಆಯೋಜಿಸಲಾಗಿದ್ದು ಎಲ್ಲ ರೈತ ಬಾಂಧವರು ಆಗಮಿಸಬೇಕಾಗಿ ರಾಜ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ವಿಡಿಯೋ ವೊಂದರ ಮೂಲಕ ರೈತರು ಭಾಗವಹಿಸಬೇಕೆಂದು ವಿನಂತಿ ಮಾಡಿದ್ದಾರೆ .
8.ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿ ಯಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಅಗ್ರಿವಿಷನ್ ದಕ್ಷಿಣ ಭಾರತ ಸಮ್ಮೇಳನ ನಡೆಯಿತು . ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಕ್ಕೆ ಚಾಲನೆ ನೀಡಿ, ಮಾತನಾಡಿದರು .
ಈ ಸಮ್ಮೇಳನದಲ್ಲಿ ಕೆ.ಎಸ್.ಉತ್ಪರ್ಷ, ಮಣಿಕಂಠ ಕಳಸ, ಪೂಜಿತಾ ಗದ್ದೆಮನಿ, ಶ್ರೀನಿವಾಸ, ಶಿವಪ್ರಕಾಶ ಸೇರಿದಂತೆ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದ 1500 ಪ್ರತಿನಿಧಿಗಳು ಪಾಲ್ಗೊಂಡಿದ್ದರ
Share your comments