1. ಸುದ್ದಿಗಳು

ವಿದ್ಯುತ್ ವೈರ್ ಮೇಲೆ ಹಕ್ಕಿಗಳು ಕೂತರೂ ಅವೇಕೆ ಸಾಯುವುದಿಲ್ಲ? ಏನಿದರ ಮರ್ಮ, ಇಲ್ಲಿದೆ ಮಾಹಿತಿ

ವಿದ್ಯುತ್ ತಂತಿಗಳ ಮೇಲೆ ಕುಳಿತಿರುವ ಹಕ್ಕಿಗಳಿಗೇಕೆ ವಿದ್ಯುತ್ ಶಾಕ್ ತಗಲುವುದಿಲ್ಲ ಎಂಬುದು ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡದೆ ಇರದು. ನಾವು ಮಕ್ಕಳಾಗಿದ್ದ ಸಮಯದಲ್ಲಿ ನಮಗೆ ಕುತೋಹಲ ಮೂಡಿಸುತ್ತಿದ್ದ ಪ್ರಶ್ನೆಯೊಂದಕ್ಕೆ ಈಗಲೂ ಸರಿಯಾದ ಉತ್ತರ ಪಡೆಯಲು ಆಗಿಲ್ಲ ಎನ್ನುವ ಪ್ರಶ್ನೆಯೊಂದಿದೆ. ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿರುತ್ತವೆ. ಅದರೂ ಅವುಗಳಿಗೆ ಶಾಕ್ ಏಕೆ ತಗಲುವುದಿಲ್ಲ ಎಂಬುದಕ್ಕೆ ಈಗಲೂ ಹಲವರಿಗೆ ಸ್ವಷ್ಟ ಉತ್ತರ ಸಿಕ್ಕಿಲ್ಲ. ಇಲ್ಲಿದೆ ಅದಕ್ಕೆ ಉತ್ತರ.

ಹೌದು ಸ್ನೇಹಿತರೇ, ನಾವು ನಮ್ಮ ದಿನನಿತ್ಯ ಪಕ್ಷಿಗಳು ವಿಹರಿಸುವುದನ್ನು ನೋಡುತ್ತೇವೆ. ಹಾಗೆ ಅನೇಕ ಪಕ್ಷಿಗಳು ಗಿಡದ ಟೊಂಗೆಯ ಹಾಗೂ ಎಲೆಕ್ಟ್ರಿಕ್ ಕಂಬದ ಮೇಲೆ ಕೂತಿರುವುದನ್ನು ನೋಡಿರುತ್ತೇವೆ. ವಿದ್ಯುತ್ ಎಷ್ಟು ಉಪಯೋಗಕಾರಿ ಇದೆಯೋ ಅಷ್ಟೇ ಅಪಾಯವೂ ಇದೆ. ಆದರೆ ಅದರ ಸಂಪರ್ಕದಲ್ಲಿರುವ ಪಕ್ಷಿಗಳಿಗಗೇಕೆ ಅದು ಬಾಧಿಸುವುದಿಲ್ಲ? .

ವಿದ್ಯುತ್ ಎಂದರೆ ಎಲೆಕ್ಟ್ರಾನ್ಗಳ ಚಲನೆ. ಚಲನೆಯಲ್ಲಿರುವ ಎಲೆಕ್ಟ್ರಾನ್ಗಳಿಂದ ವಿದ್ಯುತ್ ಉಂಟಾಗುತ್ತದೆ, ಹಾಗೆಯೇ ಎಲೆಕ್ಟ್ರಾನ್ಗಳು ಹೆಚ್ಚಿನ ಸಾಮರ್ಥ್ಯವುಳ್ಳ(higher potential) ಸ್ಥಳದಿಂದ ಕಡಿಮೆ ಸಾಮರ್ಥ್ಯವಿರುವ (lower potential) ಸ್ಥಳಕ್ಕೆ ಪ್ರವಹಿಸುತ್ತವೆ. ಹಾಗೆಯೇ ನಮ್ಮ ಮನೆಗಳಿಗೆ ಬರುವ ವಿದ್ಯುತ್ ಪವರ್ ಸ್ಟೇಷನ್ಗಳಿಂದ ಮೇನ್ಸ್ಗೆ ಇದರಿಂದ ಪವರ್ಲೈನ್ಗೆ ಹಾಗೂ ಪವರ್ ಲೈನಗಳಿಂದ ವಿದ್ಯುತ್ ಉಪಕರಣಗಳಿಗೆ ಬರುತ್ತದೆ. ಈ ಕ್ರಿಯೆಯು ಒಂದು ಮುಚ್ಚಿದ ಕುಣಿಕೆ (closed loop) ರೀತಿ ಕಾರ್ಯ ನಿರ್ವಹಿಸುತ್ತದೆ. ಮತ್ತೆ ವಿದ್ಯುತ್ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಬೇಕೆಂದರೆ ಆ ಏರಡು ಜಾಗಗಳ ವಿದ್ಯುತ್ ಸಾಮರ್ಥ್ಯದಲ್ಲಿ (electric potential)  ವ್ಯತ್ಯಾಸ ಇರಬೇಕು. ಹಾಗಾಗಿ ಪಕ್ಷಿಗಳು ಲೈನ್/ವೈರ್ಮೇಲೆ ಕುಳಿತಾಗ ಹಕ್ಕಿಯ ಏರಡು ಕಾಲುಗಳು ಒಂದೇ ಲೈನ್ಮೇಲೆ ಇರುತ್ತವೆ ಹಾಗೂ ಪಕ್ಷಿಯದೇಹದ ಮತ್ತು ವೈರನ ವಿದ್ಯುತ್ಸಾಮರ್ಥ್ಯ (voltage) ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ.

ಆದ್ದರಿಂದ ಹಕ್ಕಿಗೆ ಯಾವುದೇ ಹಾನಿಯಾಗುವುದಿಲ್ಲ. ಅದೇ ಹಕ್ಕಿ ತನ್ನ ರೆಕ್ಕೆಯಿಂದಲೋ / ಕಾಲಿನಿಂದ/ ಕೊಕ್ಕಿನಿಂದ ಮತ್ತೊಂದು ಬೇರೆವೈರ್ ಮುಟ್ಟಿದರೆ ಅದಕ್ಕೆ ವಿದ್ಯುತ್ ತಗಲುತ್ತದೆ. ಆದ್ದರಿಂದ ವಿದ್ಯುತ್ ರಿಪೇರಿ ಕೆಲಸಗಾರರು ಯಾವಾಗಲೂ ಅವರ ಕೈಗೆ ಮತ್ತು ಸಮವಸ್ತ್ರದಲ್ಲಿ ರಬ್ಬರ್ / ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುತ್ತಾರೆ.

ಲೇಖಕರು: ಆತ್ಮಾನಂದ ಹೈಗರ್

Published On: 29 December 2020, 02:46 PM English Summary: why can birds sit safely on power line

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.