1. ಸುದ್ದಿಗಳು

ನೂತನ ಸಂಸತ್‌ ಲೋಕಾರ್ಪಣೆ: ಹಳೆಯ ಸಂಸತ್ ಭವನ ಏನಾಗಲಿದೆ?

Maltesh
Maltesh
What will Happen to old Parliament House?

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲಿದೆ. ಹಲವು ಸೌಕರ್ಯಗಳು ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ವಿನ್ಯಾಸಗೊಂಡಿರುವ ನೂತನ ಸಂಸತ್ ಭವನ ಉದ್ಘಾಟನೆಗೊಂಡಿದೆ. ಇಂದು ನೂತನ ಸಂಸತ್ ಕಟ್ಟಡವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ .. 1927ರಲ್ಲಿ ನಿರ್ಮಾಣಗೊಂಡ ಈಗಿನ ಸಂಸತ್ ಭವನ ಇನ್ನು ನಾಲ್ಕು ವರ್ಷಗಳಲ್ಲಿ 100 ವರ್ಷ ಪೂರೈಸಲಿದೆ.  ತ್ರಿಕೋನಾಕಾರದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾದ ಕ್ಯಾಂಪಸ್ 64,500 ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ.

ಈ ಕಟ್ಟಡವು ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂಬ ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಈ ಕಟ್ಟಡದಲ್ಲಿ ಸಂಸದರು, ವಿಐಪಿಗಳು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ 862 ಕೋಟಿ ರೂ.ಗಳ ವೆಚ್ಚದಲ್ಲಿ  ಇದನ್ನು ನಿರ್ಮಾಣ ಮಾಡಲಾಗಿದೆ. . 888 ಲೋಕಸಭಾ ಸದಸ್ಯರು ಮತ್ತು 384 ರಾಜ್ಯಸಭಾ ಸದಸ್ಯರಿಗೆ ಅವಕಾಶ ಕಲ್ಪಿಸುವ ಈ ಕಟ್ಟಡದ ನಿರ್ಮಾಣವನ್ನು ಟಾಟಾ ಯೋಜನೆಯು ಅತ್ಯಂತ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಿದೆ.

ಇನ್ಮುಂದೆ ಹಳೆಯ ಸಂಸತ್‌ ಭವನ ಏನಾಗುತ್ತೆ?

ಇಂದು ನೂತನ ಸಂಸತ್ತು ಲೋಕಾರ್ಪಣೆಗೊಂಡಿದೆ. ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಹೊಸ ಸಂಸತ್‌ ಭವನವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.  ಹೊಸ ಸಂಸತ್‌ ಭವನ ಲೋಕಾರ್ಪಣೆಗೊಂಡ ಬಳಿಕ ಹಳೆಯ ಸಂಸತ್‌ ಏನಾಗಲಿದೆ ಎಂಬ ಸಾಕಷ್ಟು ಕುತೂಹಲದ ಪ್ರಶ್ನೆಯೊಂದು ಓಡಾಡುತ್ತಿದೆ. ಸದ್ಯದ ಮಾಹಿತಿಗಳಂತೆ ಹಳೆಯ ಸಂಸತ್‌ ಭವನವನ್ನು ಮ್ಯೂಸಿಯಂ ಆಗಿ ಮಾರ್ಪಡಿಸಲಾಗುತ್ತದೆ ಎನ್ನಲಾಗುತ್ತಿದೆ.

ಹೌದು ಹೊಸ ಸಂಸತ್‌ನಲ್ಲಿ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಶುರುವಾಗುವ ವರೆಗೆ ಎಲ್ಲೆ ಕೆಲಸಗಳು ಹಳೆಯ ಸಂಸತ್‌ ಭವನದಲ್ಲಿಯೇ ನಡೆಯಲಿದೆ. ಹೊಸ ಸಂಸತ್‌ನಲ್ಲಿ ಕಾರ್ಯ ಚಟುವಟಿಕೆಗಳನ್ನ ಶಿಫ್ಟ್‌ ಮಾಡಿದ ನಂತರ ಹಳೆಯ ಸಂಸತ್‌ ಭವನವನ್ನು ಮ್ಯೂಸಿಯಂ ಮಾಡಿ ಇದನ್ನು ಪುರಾತತ್ವ ಸಂಪತ್ತು ಎಂದು ಪರಿಗಣಿಸುವ ಸಾಧ್ಯತೆಗಳು ದಟ್ಟವಾಗಿವೆ ಎನ್ನುತ್ತವೆ ವರದಿಗಳು.

75 ರೂಪಾಯಿ ನಾಣ್ಯದ ಮೇಲೆ ಏನೇನಿದೆ?

ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ 75 ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯವು ಈ ನಾಣ್ಯವನ್ನು ಸಿದ್ಧಪಡಿಸಿದೆ. ನಾಣ್ಯವೂ ಸಂಪೂರ್ಣ ವಿಶೇಷತೆಯಿಂದ ಕೂಡಿದೆ. 75 ರೂಪಾಯಿಯ ನಾಣ್ಯದ ಮೇಲೆ  ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ನಾಣ್ಯದ ಬಲ ಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದರೆ, ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ  ಭಾರತ್‌ ಎಂದು ಬರೆಯಲಾಗಿದೆ. 

ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂಪಾಯಿ ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ ಎಂದು ತಿಳಿದು ಬಂದಿದೆ.ಇನ್ನು, ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ್​ ಸಂಕೀರ್ಣದ ಫೋಟೋ ಇರಲಿದೆ. “ಸಂಸದ್ ಸಂಕುಲ್” ಪದಗಳನ್ನು ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ಮತ್ತು ಕೆಳಗಿನ ಪರಿಧಿಯಲ್ಲಿ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಅನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ.ನಾಣ್ಯವು 44 ಮಿಲಿಲೀಟರ್‌ ವ್ಯಾಸವನ್ನು ಹೊಂದಿದ್ದು, ವೃತ್ತಾಕರದಲ್ಲಿರುತ್ತದೆ ಎಂದು ಹೇಳಲಾಗುತ್ತಿದೆ.

ಪಿಎಂ ಮೋದಿಗೆ ಥ್ಯಾಂಕ್ಸ್‌ ಹೇಳಿದ ತಲೈವಾ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನೂತನವಾಗಿ ನಿರ್ಮಿಸಲಾದ ಹೊಸ ಸಂಸತ್‌ ಭವನವನ್ನು ಉದ್ಘಾಟನೆ ಮಾಡಿದ್ದಾರೆ. ಸಾಕಷ್ಟು ಪೂಜಾ ಕೈಂಕರ್ಯಗಳ ಮೂಲಕ ಇಂದು ನೂತನ ಸಂಸತ್‌ ದೇಶಕ್ಕೆ ಸಮರ್ಪಣೆಯಾಗಿದೆ. ಕಳೆದ ಕೆಲವು ದಿನಗಳಿಂದ ಸಾಕಷ್ಟು ಸದ್ದು ಮಾಡುತ್ತಿದ್ದ ಸೆಂಗೋಲ್‌ ಅನ್ನು ಇಂದು 8 30ಕ್ಕೆ ಪ್ರಧಾನಿ ಮೋದಿ ಅವರು ಸಂಸತ್‌ನಲ್ಲಿ ಸ್ಥಾಪನೆ ಮಾಡಿದ್ದಾರೆ. ಭವ್ಯ ಸಂಸತ್‌ನಲ್ಲಿ  ಸೆಂಗೋಲ್‌ ಸ್ಥಾಪನೆ ಮಾಡಿದ ಮೋದಿ ಅವರಿಗೆ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿದ ಅವರು ತಮಿಳು ಶಕ್ತಿಯ ಸಾಂಪ್ರದಾಯಿಕ ಚಿಹ್ನೆಯಾದ  ಸೆಂಗೋಲ್‌ ಇನ್ನು ಭಾರತದ ಹೊಸ ಸಂಸತ್ತಿನ ಕಟ್ಟಡದಲ್ಲಿ ಹೊಳೆಯಲಿದೆ. ಈ ಮೂಲಕ ತಮಿಳರಿಗೆ ಹೆಮ್ಮೆ ತಂದ ಗೌರವಾನ್ವಿತ ಭಾರತ ಪ್ರಥಮ್ ನರೇಂದ್ರ ಮೋದಿ  ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಟ್ವೀಟ್‌ ಮಾಡಿದ್ದಾರೆ.

ಚಿತ್ರ ಕೃಪೆ: Twitter@narendramodi

Published On: 28 May 2023, 01:59 PM English Summary: What will Happen to old Parliament House?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.