1. ಸುದ್ದಿಗಳು

ಡ್ರೋನ್ ಪೈಲಟ್ ಆಗಲು ಇರುವ ಅರ್ಹತೆಗಳೇನು?

Maltesh
Maltesh

5ಜಿ ತಂತ್ರಜ್ಞಾನದ ಈ ಯುಗದಲ್ಲಿ ಇದೀಗ ಕೃಷಿ ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಪೂರಕವಾಗಿ ದೇಶದ ಕೃಷಿ ಭೂಮಿಯಲ್ಲಿ ಇದೀಗ ಕೃಷಿ ಉಪಯೋಗಿ ಡ್ರೋನ್ ಬಳಕೆಯ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ.

ಇದನ್ನು ಬೆಂಬಲಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವೂ ಕೂಡ ಕೃಷಿ ಉಪಯೋಗಕ್ಕೆ ಡ್ರೋನ್‌ ಖರೀದಿ ಮಾಡಲು ರೈತರಿಗೆ ಸಾಕಷ್ಟು ಸಬ್ಸಿಡಿ ಹಾಗೂ ವಿವಿಧ ಯೋಜನೆಗಳನ್ನು ಪರಿಚಯಿಸಿದೆ.

ಕೃಷಿ ಕ್ಷೇತ್ರದಲ್ಲಿ ಡ್ರೋನ್‌ ಬಳಕೆಯನ್ನು ಗಣನೀಯವಾಗಿ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಹಾಯಧನವನ್ನೂ ನೀಡುತ್ತಿವೆ. ಈ ಅವಕಾಶಗಳು ಹಾಗೂ ಸೌಲಭ್ಯಗಳ ಜೊತೆ ಜೊತೆಗೆ ರೈತರು ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ತಂತ್ರಗಳನ್ನು ಪ್ರಯೋಗಿಸುವ ಮೂಲಕ ಉತ್ತಮ ಉತ್ಪನ್ನಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.

ಡ್ರೋನ್‌ಗಳು ಹೊಸ ಯುಗದ ತಂತ್ರಜ್ಞಾನವಾಗಿದ್ದು, ಈ ತಂತ್ರಜ್ಞಾನವನ್ನು ಬಳಸಿಕೊಂಡು ರೈತರಿಗೆ ಕೃಷಿಯನ್ನು ಹೆಚ್ಚು ಸುಲಭ ಹಾಗೂ ವೇಗಗೊಳಿಸುವಲ್ಲಿ ಸಹಕಾರಿಯಾಗುತ್ತದೆ.

ಇತ್ತೀಚಿಗೆ ಮಾರುಕಟ್ಟೆಗ ಲಗ್ಗೆ ಇಟ್ಟ ದ್ರವರೂಪದ ಯೂರಿಯಾ ಮತ್ತು ಕೀಟನಾಶಕಗಳನ್ನು ಡ್ರೋನ್‌ಗಳ ಸಹಾಯದಿಂದ ಯಾವುದೇ ಹೆದರಿಕೆ ಇಲ್ಲದೆ ಸಿಂಪಡಿಸಬಹುದು. ಇನ್ನೊಂದು ವಿಷಯವನ್ನು ಇಲ್ಲಿ ಗಮನಿಸಬೇಕಾದರೆ ಕಳೆದ ವರ್ಷ ಕೇಂದ್ರ ರೈತ ಕಲ್ಯಾಣ ಸಚಿವಾಲಯ ಕೃಷಿಯಲ್ಲಿ ಡ್ರೋನ್‌ ಬಳಕೆ ಹಾಗೂ ಉಪಯೋಗ ಕುರಿತಂತೆ SoP ಯನ್ನು ಕೂಡ ರಿಲೀಸ್‌ ಮಾಡಿತ್ತು.

ಸಮಯ ಹಾಗೂ ಹಣ ಉಳಿತಾಯ

ಡ್ರೋನ್‌ಗಳು ವಿಸ್ತಾರವಾದ ಕೃಷಿ ಪ್ರದೇಶಗಳಲ್ಲಿ ತ್ವರಿತವಾಗಿ ರಾಸಾಯನಿಕ ಸಿಂಪಡಣೆಗ ಹೆಸರುವಾಸಿಯಾಗಿವೆ.‌ಈ ಪ್ರಕ್ರಿಯೇಯಲ್ಲಿ ಸಾಂಪ್ರದಾಯಿಕ ವಿಧಾನಗಳಿಗಿಂತ ಹೆಚ್ಚು ವೇಗವಾಗಿ ರಾಸಾಯನಿಕವನ್ನು ಡ್ರೋನ್‌ಗಳು ಸಿಂಪಡಣೆ ಮಾಡುತ್ತವೆ. ಆ ಮೂಲಕ ಇದು 4 ಜನ ಮಾಡುವ ಕೆಲವನ್ನು ಕಡಿಮೆ ಅವಧಿಯಲ್ಲಿ ಮಾಡುವುದರಿಂದ ಸಮಯ ಮತ್ತು ಕಾರ್ಮಿಕ ವೆಚ್ಚವನ್ನು ಉಳಿಸುತ್ತದೆ.

ಡ್ರೋನ್ ಪೈಲಟ್ ಆಗಲು ಅರ್ಹತೆಗಳೇನು?

ಡ್ರೋನ್ ಪೈಲಟ್ ತರಬೇತಿ ಸಂಸ್ಥೆಯನ್ನು ಸೇರಿಕೊಳ್ಳಲು ಮೊದಲು ನೀವು 18 ವರ್ಷಗಳನ್ನು ಪೂರೈಸಿರಬೇಕು. ಕನಿಷ್ಠ ವಿದ್ಯಾರ್ಹತೆ 10ನೇ ತರಗತಿಯನ್ನು ಹೊಂದಿರುವುದು ಕಡ್ಡಾಯ. ದೇಶದಲ್ಲಿ ನಾಗರೀಕ ವಿಮಾನಯಾನವನ್ನು ನಿಯಂತ್ರಿಸುವ DGCA ಯ ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗಳನ್ನು ಪೂರ್ಣಗೊಳಿಸರಬೇಕು. ಹಾಗೂ ಸರ್ಕಾರಿ ಸಂಸ್ಥೆಯಿಂದ ನಿಮ್ಮ ಪೂರ್ವಾಪರ ತನಿಖೆಯಲ್ಲಿ ಉತ್ತೀರ್ಣರಾಗಿರಬೇಕು. ವಾಣಿಜ್ಯಾತ್ಮಕ ಉದ್ದೇಶವನ್ನು ಅವಲಂಬಿಸಿರುವ ಡ್ರೋನ್‌ ಪೈಲಟ್ ಪರವಾನಗಿಯನ್ನು ಪಡೆಯಲು ವಯಸ್ಸಿನ ಅವಶ್ಯಕತೆ 65 ವರ್ಷಗಳು.

ಡ್ರೋನ್‌ ಪೈಲಟ್‌ ಕೋರ್ಸ್‌ ಫೀ?
ಸಾಮಾನ್ಯವಾಗಿ ಡ್ರೋನ್‌ ಪೈಲೆಟ್‌ ಕೋರ್ಸ್‌ನ ಶುಲ್ಕವು ಪ್ರದೇಶ ಹಾಗೂ ವಿವಿಧ ತರಬೇತಿ ಸಂಸ್ಥೆಗಳ ಮೇಲೆ ಆಧಾರಿತವಾಗಿರುತ್ತದೆ. ಇದು ಅವುಗಳಿಗೆ ಅನುಗುಣವಾಗಿ ಬದಲಾಗುತ್ತದೆ ಒಟ್ಟಾರೆಯಾಗಿ ನೋಡುವುದಾದದರೆ ಕೋರ್ಸ್ ಶುಲ್ಕಗಳು ರೂ 40,000 ರಿಂದ ಸುಮಾರು 80 ಸಾವಿರ ರೂಪಾಯಿಗಳವರೆಗ ಇರುತ್ತದೆ.

Published On: 17 December 2023, 04:23 PM English Summary: What are the qualifications to become a drone pilot?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.