ಮಳೆ ಬೇಡವಾದ ಸಮಯದಲ್ಲಿ ಮಳೆ ಬಂದು ಕಾಡುವುದು ಸರ್ವೇಸಾಮಾನ್ಯ, ಆದ್ದರಿಂದ ರೈತರು ಹವಮಾನ ವರದಿಯನ್ನು ಗಮನಿಸಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸುವುದು ಅತ್ಯುತ್ತಮ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂತಹ ಸುಳಿಗಾಳಿಯಿಂದ ಫೆಬ್ರುವರಿ 18 ರಿಂದ ಮೂರು ದಿನಗಳ ಕಾಲ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಮುಖ್ಯವಾಗಿ ಉತ್ತರ ಕರ್ನಾಟಕದ ರೈತರು ಗಮನಿಸಬೇಕಾದ ಮಳೆಯ ಮುನ್ಸೂಚನೆ.
-ಫೆಬ್ರವರಿ 18 ರಂದು ಧಾರವಾಡ,ಉತ್ತರ ಕನ್ನಡ,ಬೆಳಗಾವಿ,ಬೀದರ್,ಕಲ್ಬುರ್ಗಿ, ಕೊಪ್ಪಳ,ಗದಗ್ ಹಾವು ಹಾವೇರಿ ಜಿಲ್ಲೆಯ ಕೆಲವು ಬಾಗಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೇ ಎಂದು ಕೃಷಿ ವಿಶ್ವವಿದ್ಯಾಲಯ ಮುನ್ಸೂಚನೆ ನೀಡಿದೆ.ಈ ಮಳೆಯೂ ಫೆಬ್ರವರಿ 19 ರವರೆಗೆ ಆಗುವ ಸಾಧ್ಯತೆ ಇರುವ ಕಾರಣದಿಂದಾಗಿ ರೈತರು ಯಾವುದೇ ಚಟುವಟಿಕೆಯನ್ನು ಮಾಡುವ ಮುನ್ನ ಮೊನ್ನೆಚ್ಚರಿಕೆಯನ್ನು ವಹಿಸಬೇಕು.
ಕೃಷಿ ಇಲಾಖೆಯ ಸಲಹೆಗಳು:
- ಕೊಯ್ಲು ಮಾಡಿದಂತಹ ಬೆಳೆಗಳಾದ ಕಡಲೆ,ಜೋಳ,ಗೋದಿ, ಹತ್ತಿ, ಮೆಣಸಿನಕಾಯಿ ಹಾಗೂ ಇನ್ನಿತರ ಬೆಳೆಗಳನ್ನು ನೀರು ತಾಗದಂತೆ ಸುರಕ್ಷಿತವಾಗಿ ಇಡಬೇಕು.
-ನೀರಾವರಿ ಪ್ರದೇಶಗಳಲ್ಲಿ ಬೆಳೆಗಳಿಗೆ ನೀರು ಕೊಡುವುದನ್ನು ಮುಂದೂಡಬಹುದು.
-ಕುರಿ,ಆಡು,ಹಾಗೂ ಇನ್ನಿತರ ಸಾಕು ಪ್ರಾಣಿಗಳನ್ನು ಗುಡುಗು ಸಹಿತ ಮಳೆಯಾಗಲಿರುವ ಕಾರಣ ಸುರಕ್ಷಿತವಾಗಿರುವಂತಹ ಜಾಗಗಳಿಗೆ ಸಾಗಿಸಬೇಕು.
Share your comments