ನಿಯಮಗಳ ಉಲ್ಲಂಘನೆ ಮತ್ತು ಹೆಚ್ಚಿನ ಹಣ ಪಡೆಯುತ್ತಿರುವ ಕಾರಣದಿಂದ ಕರ್ನಾಟಕದಲ್ಲಿ ಓಲಾ, ಉಬರ್ ಮತ್ತು ರ್ಯಾಪಿಡೋ ನಡೆಸುತ್ತಿರುವ ಎಎನ್ಐ ಟೆಕ್ನಾಲಜೀಸ್ಗೆ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಇನ್ನೂ ಮೂರು ದಿನಗಳಲ್ಲಿ ಆಟೋ ಸೇವೆಗಳನ್ನು ನಿಲ್ಲಿಸಿ ವರದಿ ಸಲ್ಲಿಸುವಂತೆ ಹೇಳಿದೆ.
ಇದನ್ನೂ ಓದಿರಿ: ಅಕ್ಟೋಬರ್ 11ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಸೂಚನೆ! ಇಲ್ಲಿದೆ ಜಿಲ್ಲಾವಾರು ವಿವರ.
ಓಲಾ, ಉಬರ್ ಮತ್ತು ರ್ಯಾಪಿಡೋ ನಡೆಸುತ್ತಿರುವ ಎಎನ್ಐ (ANI) ಟೆಕ್ನಾಲಜೀಸ್ಗೆ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಇನ್ನೂ ಮೂರು ದಿನಗಳಲ್ಲಿ ಆಟೋ ಸೇವೆಗಳನ್ನು ನಿಲ್ಲಿಸಿ ವರದಿ ಸಲ್ಲಿಸುವಂತೆ ಹೇಳಿದೆ.
ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ಸ್, 2016 ರ ಅಡಿಯಲ್ಲಿ ಈ ಸಂಸ್ಥೆಗಳಿಗೆ ಟ್ಯಾಕ್ಸಿಗಳನ್ನು ಮಾತ್ರ ಓಡಿಸಲು ಪರವಾನಗಿ ನೀಡಲಾಗಿದೆ.
ಟ್ಯಾಕ್ಸಿ ಎಂದರೆ ಚಾಲಕನನ್ನು ಹೊರತುಪಡಿಸಿ ಆರು ಪ್ರಯಾಣಿಕರಿಗೆ ಮೀರದ ಆಸನ ಸಾಮರ್ಥ್ಯ ಹೊಂದಿರುವ ಮೋಟಾರ್ ಕ್ಯಾಬ್ ಎಂದು ಸಾರಿಗೆ ಆಯುಕ್ತ THM ಕುಮಾರ್ ತಿಳಿಸಿದ್ದಾರೆ.
DA Hike: ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಸುದ್ದಿ! ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ!
ನಿಯಮಾವಳಿಗಳನ್ನು ಉಲ್ಲಂಘಿಸಿ ಅಗ್ರಿಗೇಟರ್ಗಳು ಆಟೋರಿಕ್ಷಾ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅಲ್ಲದೆ, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಆಟೋ ಸೇವೆಗಳನ್ನು ಸ್ಥಗಿತಗೊಳಿಸಬೇಕು ಮತ್ತು ಪ್ರಯಾಣಿಕರಿಂದ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಬಾರದು. ಎಂದಿರುವ ಇಲಾಖೆ ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ವಿಫಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಕೆಗೆ ಅ.20 ಕೊನೆ ದಿನ..
ಸಾರಿಗೆ ಹೆಚ್ಚುವರಿ ಕಮಿಷನರ್ ಮತ್ತು ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎಲ್ ಹೇಮಂತ್ ಕುಮಾರ್, ಅವರು ಕ್ಯಾಬ್-ಅಗ್ರಿಗೇಟರ್ ಪರವಾನಗಿಯೊಂದಿಗೆ ಆಟೋ ರಿಕ್ಷಾಗಳನ್ನು ಓಡಿಸಬೇಕಾಗಿಲ್ಲ.
ಅಗ್ರಿಗೇಟರ್ ನಿಯಮಗಳು ಕ್ಯಾಬ್ಗಳಿಗೆ ಮಾತ್ರ. ಅಪ್ಲಿಕೇಶನ್ ಮತ್ತು ವರದಿಯನ್ನು ಸಲ್ಲಿಸಿ ನಾವು ಆಟೊರಿಕ್ಷಾ ಸೇವೆಗಳನ್ನು ನಿಲ್ಲಿಸುವಂತೆ ನಾವು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
Share your comments