1. ಸುದ್ದಿಗಳು

14 ದಿನ ಕರ್ನಾಟಕ ಲಾಕ್ಡೌನ್: ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ ಕಠಿಣ ಕ್ರಮ, ವಾಹನ ಜಪ್ತಿ!

lockdown

ಮಹಾಮಾರಿ ಕೊರೋನಾ ವೈರಸ್ ಸೋಂಕು ರಾಜ್ಯದಲ್ಲಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಿಸಿರುವ 2 ವಾರಗಳ ಸೆಮಿ ಲಾಕ್ಡೌನ್ ಸೋಮವಾರ ಬೆಳಿಗ್ಗೆಯಿಂದಲೇ ಜಾರಿಗೆ ಬಂದಿದ್ದು, ಜನ ಸಂಚಾರವನ್ನು ನಿರ್ಬಂಧಿಸಲು ರಾಜ್ಯದಾದ್ಯಂತ ಪೊಲೀಸರು ಸಜ್ಜಾಗಿದ್ದಾರೆ.

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಡೆಗೆ ಜಾರಿಯಾದಂತಹ ರಾತ್ರಿ ಕರ್ಫ್, ವಾರಾಂತ್ಯ ಕರ್ಪ್ಯೂ, ಜತನಾ ಕರ್ಫ್ಯೂಗೆ ಜನರಿಂದ ನಿರೀಕ್ಷಿತ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ 14 ದಿನಗಳ ಲಾಕ್ಡೌನ್ ಹೇರಲಾಗಿದೆ. ಈ ಬಾರಿ ಕ್ಟಟುನಿಟ್ಟಾಗಿ ನಿರ್ಬಂಧ ಜಾರಿ ಮಾಡಲಾಗಿದೆ.

ಅನಗತ್ಯವಾಗಿ ಹೊರಗೆ ಬಂದರೆ ಪೊಲೀಸರ ಲಾಠಿ ಏಟು ರುಚಿಯೊಂದಿಗೆ ನಿಮ್ಮ ಗಾಡಿಯನ್ನು ಜಪ್ತಿ ಮಾಡುವುದು ಖಚಿತ. 14 ದಿನಗಳ ನಂತರವೇ ನಿಮ್ಮ ಗಾಡಿ ನಿಮ್ಮ ಕೈಸೇರುತ್ತದೆ. ನಿರ್ಭಂಧಗಳನ್ನು ಗಾಳಿಗೆ ತೂರಿದರೆ ಕಂಬಿಯೂ ಎಣಿಸಬೇಕಾಗುತ್ತದೆ. ವ್ಯಾಪಾರ ವಹಿವಾಹಿಗೆ ನೀಡಿರುವ ಸಮಯದಲ್ಲಿ ಜನರು ಖರೀದಿಗಾಗಿ ಅಂಗಡಿಗಳಿಗೆ ನಡೆದುಕೊಂಡೇ ಹೋಗಬೇಕು. ವಾಹನ ಬಳಕೆ ಮಾಡಿದರೆ ಪೊಲೀಸರು ವಾಹನವನ್ನು ಜಪ್ತಿ ಮಾಡಲಿದ್ದಾರೆ. ಭಾನುವಾರದಿಂದಲೇ ಪೊಲೀಸರು ಕಾರ್ಯಾಚರಣೆಯನ್ನು ಆರಂಭಿಸಿದ್ದು, ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವ ಕೆಲಸ ಕೈಗೊಂಡಿದ್ದಾರೆ.  ರಾಜ್ಯದಲ್ಲಿ ನಿಯಂತ್ರಣ ಮೀರಿ ಅಬ್ಬರಿಸುತ್ತಿರುವ ಕೊರೊನಾಕ್ಕೆ ಕಡಿವಾಣ ಹಾಕುವ, ಸೋಂಕಿನ ಸರಪಳಿಯನ್ನು ಕತ್ತರಿಸುವ ಉದ್ದೇಶದಿಂದ ಜಾರಿಗೊಳಿಸಿರುವ 14 ದಿನಗಳ ಕಠಿಣ ಕರ್ಫ್ಯೂ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದೆ.

ಖರೀದಿಗೆ ವಾಹನ ಬಳಸುವಂತಿಲ್ಲ

ಅಗತ್ಯ ವಸ್ತುಗಳನ್ನು ತರಲು ನಡೆದುಕೊಂಡೇ ಹೋಗಬೇಕು, ವಾಹನ ಬಳಸಬಾರದು. ಇನ್ನೂ 14 ದಿನ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲವೇ ಇಲ್ಲ. ಬೆಳಗ್ಗೆ 6 ರಿಂದ 10 ಗಂಟೆಯವರೆಗೂ ಅವಶ್ಯಕ ವಸ್ತು ಖರೀದಿಸಲು ಕೂಡ ವಾಹನ ಬಳಸುವಂತಿಲ್ಲ. ಮನೆಯಿಂದ ಹೊರಗೆ ವಾಕ್‌ ಮಾಡುವುದು, ಬೀದಿಯಲ್ಲಿ ಆಟವಾಡುವುದು ಬೇಡ.  ಯಾವ ಕಾರಣಕ್ಕೂ ಮುಚ್ಚಿದ ಅಂಗಡಿ ಮುಂಗಟ್ಟುಗಳ ಮುಂದೆಯೂ ಕುಳಿತುಕೊಳ್ಳಬೇಡಿ.  ಸಣ್ಣ ಪುಟ್ಟ ಕಾರಣ ನೀಡಿ ಬೈಕ್‌, ಕಾರು ಹಿಡಿದುಕೊಂಡು ಓಡಾಡಬೇಡಿ. ಮನೆಯ ಸಮೀಪದ ಕಾಲ್ನಡಿಗೆ ದೂರದ ಅಂಗಡಿಗಳಿಂದಲೇ ಖರೀದಿಸಿ

 ತರಕಾರಿ, ಹಣ್ಣು, ಹಾಲು, ಮಾಂಸ, ದಿನಸಿ, ಔಷಧಿ, ಅಗತ್ಯ ವಸ್ತು ತರಲು ನಡೆದುಕೊಂಡು ಹೋಗಿ ಬರತಕ್ಕದ್ದು.  ಅನಗತ್ಯವಾಗಿ ತಿರುಗುವ ವಾಹನ ಜಪ್ತಿ ಮಾಡಿ ಕೇಸ್‌ ದಾಖಲಿಸಲಾಗುವುದು. ಜನರು ಗುಂಪು ಸೇರಬಾರದು. ಸೂಚನೆ ಉಲ್ಲಂಘಿಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.  ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ಮಾತ್ರ ನಡೆದುಕೊಂಡು ಹೋಗಿ ಅಗತ್ಯ ವಸ್ತು ಕೊಳ್ಳಬೇಕು.

ಲಾಕ್ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಯಾರೂ ರಸ್ತೆಗಿಳಿಯದಂತೆ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಡಿಜಿಪಿ, ದಯವಿಟ್ಟು ಲಾಕ್ಡೌನ್'ನ್ನು ಗಂಭೀರವಾಗಿ ತೆಗೆದುಕೊಳ್ಳಿ. ಇದು ಎಲ್ಲರ ಸುರಕ್ಷತೆಗಾಗಿ ಆಗಿದೆ...ನಿಯಮಗಳನ್ನು ಪಾಲಿಸದೇ ಹೋದಲ್ಲಿ ನಿಮ್ಮ ವಾಹನವನ್ನು ಎರಡು ವಾರಗಳ ಕಾಲ ಜಪ್ತಿ ಮಾಡಲಾಗುತ್ತದೆ. ಅದಕ್ಕೆ ಸಿದ್ಧರಾಗಿ ಎಂದು ಹೇಳಿದ್ದಾರೆ. 

Published On: 10 May 2021, 09:29 AM English Summary: Vehicles prohibited to ply during 14 day lockdown in Karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.