ಕೇಂದ್ರ ಸರಕಾರದಿಂದ ಕಿಸಾನ್ ಸುವಿಧಾ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ತಯಾರಿಸಲಾಗಿದೆ. ಹೌದು, ಕಿಸಾನ್ ಸುವಿಧಾ 5 ಪ್ರಮುಖ ವಿಷಯಗಳ ಕುರಿತು ಮಾಹಿತಿ ನೀಡುತ್ತದೆ. ಹವಾಮಾನ, ಕೃಷಿ ಪರಿಕರಗಳ ವಿತರಕರು, ಮಾರಕಟ್ಟೆ ಧಾರಣೆಗಳು, ಸಸ್ಯ ಸಂರಕ್ಷಣೆ, ಕೃಷಿ ಸಲಹೆಗಳು. ಅಲ್ಲದೇ, ರೈತರು ಈ ಅಪ್ಲಿಕೇಶನ್ ಮೂಲಕ ಕಿಸಾನ ಕಾಲ್ ಸೆಂಟರಗೆ ನೇರವಾಗಿ ಕರೆ ಮಾಡಬಹುದು.
ಪ್ರಸಕ್ತ ಹವಾಮಾನ ಮತ್ತು ಮುಂದಿನ ಐದು ದಿನಗಳ ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ. ಹತ್ತಿರದ ಪಟ್ಟಣಗಳಲ್ಲಿರುವ ಧಾರಣೆ ರಸಗೊಬ್ಬರ, ಬೀಜ, ಯಂತ್ರೋಪಕರಣಗಳ ಮಾಹಿತಿ ನೀಡುತ್ತದೆ.
ಈ ಅಪ್ಲಿಕೇಶನ್ ಬಳಸಲು ಏನು ಮಾಡಬೇಕು?
ಬೇರೆ ಯಾವುದೇ ಅಪ್ಲಿಕೇಶನ್ಗಳನ್ನು ಮೊಬೈಲ್ಗೆ ಅಳವಡಿಸುವಂತೆ, ಈ ಅಪ್ಲಿಕೇಶನನ್ನು ಕೂಡ ಗೂಗಲ್ ಪ್ಲೇ ಸ್ಟೋರ್ನಿಂದ ಅಥವಾ http://mkisan.gov.in/downloadmobileapps.aspx ಲಿಂಕ್ನಿಂದ ಡೌನ್ಲೋಡ್ ಮಾಡಿಕೊಂಡು, ಮೊಬೈಲ್ನಲ್ಲಿ ಅಳವಡಿಸಿಕೊಳ್ಳಬೇಕು.
ಅಪ್ಲಿಕೇಶನನ್ನು ಉಪಯೋಗಿಸಲು ಮೊದಲು ನೋಂದಣಿ ಮಾಡಬೇಕು, ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ರಾಜ್ಯ, ಜಿಲ್ಲೆ, ತಾಲೂಕು ಇವುಗಳನ್ನು ಸೂಕ್ತ ಸ್ಥಳಗಳಲ್ಲಿ ನಮೂದಿಸಿ ರಿಜಿಸ್ಟರ್ ಗುಂಡಿಯನ್ನು ಅದುಮಬೇಕು.
ನೋಂದಣಿ ಮಾಡಿದ ನಂತರ ಅಪ್ಲಿಕೇಶನ್ ಮುಖಪುಟ ತೆರೆದಕೊಳ್ಳುತ್ತದೆ.
ಮುಖಪುಟದ ವಿನ್ಯಾಸ ಅತಿ ಸರಳವಾಗಿದ್ದು, ಚಿತ್ರಗಳು ಇರುವುದರಿಂದ ರೈತರು ಅತಿ ಸುಲಭವಾಗಿ ಇದನ್ನು ಉಪಯೋಗಿಸಬಹುದು. ಸಧ್ಯ ಇಂಗ್ಲೀಷ, ಹಿಂದಿ, ಗುಜರಾತಿ, ತಮಿಳು ಭಾಷೆಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಉಳಿದ ಪ್ರಾಂತೀಯ ಭಾಷೆಗಳಿಗೂ ಇದನ್ನು ವಿಸ್ತರಿಸಲಾಗುವುದು.
ರೈತರು ತಮ್ಮ ಅಗತ್ಯತೆಗೆ ಅನುಗುಣವಾಗಿ ಹವಾಮಾನ, ಕೃಷಿ ಪರಿಕರಗಳ ವಿತರಕರು, ಮಾರಕಟ್ಟೆ ಧಾರಣೆಗಳು, ಸಸ್ಯ ಸಂರಕ್ಷಣೆ, ಕೃಷಿ ಸಲಹೆಗಳು ಹೀಗೆ ಬೇಕಾದ ಗುಂಡಿಗಳನ್ನು ಒತ್ತಿ ಮಾಹಿತಿ ಪಡೆಯಬಹುದು.
ಹವಾಮಾನ ಗುಂಡಿಯ ಮೇಲೆ ಟ್ಯಾಪ್ ಮಾಡಿದರೆ ಪ್ರಸಕ್ತ ದಿನದ ತಾಪಮಾನ, ಆರ್ದ್ರತೆ, ಗಾಳಿ ಮತ್ತು ಮಳೆಯ ವಿವರಗಳನ್ನು ಮತ್ತು ಮುಂದಿನ ಐದು ದಿನಗಳ ಮುನ್ಸೂಚನೆಯನ್ನು ತೋರಿಸುತ್ತದೆ. ಇದರ ಜೊತೆಗೆ, ಒಬ್ಬ ರೈತನಿಗೆ ಆಲಿಕಲ್ಲು ಮಳೆ ಅಥವಾ ಅಕಾಲಿಕ ಮಳೆಯಂತಹ ಹವಾಮಾನದ ಎಚ್ಚರಿಕೆಗಳನ್ನು ಪಡೆಯಬಹುದು.
ಸ್ಥಳೀಯ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಹೆಚ್ಚಾಗಿ ಮಾರಾಟ ಮಾಡುವ ಸಣ್ಣ ರೈತರಿಗೆ ಇದು ಒಂದು ಪ್ರಮುಖ ಸಾಧನವಾಗಬಹುದು. ಅಲ್ಲದೆ, ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕೆ ಅಥವಾ ಪ್ರಸಕ್ತ ದರಗಳ ಮಾಹಿತಿ ಆಧರಿಸಿ ಕಾಯಬೇಕೇ ಮಾಡಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಬೆಳೆಗಳಿಗೆ ತಗಲುವ ಕೀಟ, ಕಳೆ ಮತ್ತು ರೋಗ-ಸಂಬಂಧಿತ ಮಾಹಿತಿ ಮತ್ತು ನಿರ್ವಹಣಾ ವಿಧಾನಗಳನ್ನು ನೀಡುತ್ತದೆ.
ಕೃಷಿ ಸಲಹಾ ವಿಭಾಗದಲ್ಲಿ ಜಿಲ್ಲೆಯ ಕೃಷಿ ಅಧಿಕಾರಿಗಳು ಮತ್ತು ರಾಜ್ಯ ವಿಶ್ವವಿದ್ಯಾಲಯಗಳು ತಮ್ಮ ಸ್ಥಳೀಯ ಭಾಷೆಯಲ್ಲಿ ರೈತರಿಗೆ ಸಂದೇಶ ಗಳು ತೋರಿಸುತ್ತವೆ. ಕೀಟನಾಶಕ, ಬೀಜ, ರಸಗೊಬ್ಬರ, ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಇನ್ ಪುಟ್ ಡೀಲರ್ ಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ರೈತರು ಈ ಆ್ಯಪ್ ಮೂಲಕ ಪಡೆಯಬಹುದು.
Share your comments