1. ಸುದ್ದಿಗಳು

ಕೊರೋನಾ ಸೋಂಕಿಗೆ ತತ್ತರಿಸಿದ ಅಮೇರಿಕಾ-ಒಂದೇ ದಿನ 65,551 ಜನರಿಗೆ ಸೋಂಕು

corona

 ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವುಳ್ಳ ಅಮೇರಿಕಾದಲ್ಲಿ ಗುರುವಾರದ 24 ಗಂಟೆಗಳಲ್ಲಿ ಒಂದೇ ದಿನ ದಾಖಲೆಯ 65,551   ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ.

ವಿಶ್ವದಲ್ಲಿಯೇ ಅತೀ ಹೆಚ್ಚು ಮಹಾಮಾರಿ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ದೇಶ ಇದಾಗಿದೆ. ಇದರಿಂದಾಗಿ ಅಮೇರಿಕಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3158932 ಏರಿಕೆಯಾಗಿದೆ. ಸೋಂಕಿನಿಂದಾಗಿ ಇಲ್ಲಿಯವರೆಗೆ ಅಮೇರಿಕಾದಲ್ಲಿ 1,33,000 ಜನ ಸಾವಿಗೀಡಾಗಿದ್ದಾರೆ. ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಅಮೇರಿಕಾದಲ್ಲಿ ಕೊರೋನಾ ಪೀಡಿತರ ಸಂಖ್ಯೆ ನಿಯಂತ್ರಣ ಆಗುತ್ತಿಲ್ಲ. ಕೊರೋನಾದಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ಕಮ್ಮಿಯಾಗುತ್ತಿಲ್ಲ.

ಕೊರೋನಾ ವೈರಸ್ ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 17,13,160 ಪ್ರಕರಣಗಳು
ಹಾಗೂ 67,964 ಮಂದಿ ಸಾವಿಗೀಡಾಗಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ 2,87,621 ಪ್ರಕರಣಗಳಿಂದ 44,602 ಮಂದಿ
ಮೃತಪಟ್ಟಿದ್ದಾರೆ. ಇಟಲಿಯಲ್ಲಿ 2,42,363 ಪ್ರಕರಣಗಳು ಹಾಗೂ 34,926 ಸಾವು, ಮೆಕ್ಸಿಕೊದಲ್ಲಿ 2,75,003 ಪ್ರಕರಣಗಳು
ಹಾಗೂ 32,796 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 7,94,842 ಪ್ರಕರಣಗಳು ಹಾಗೂ 21,623 ಮಂದಿ
ಸಾವಿಗೀಡಾಗಿದ್ದಾರೆ.
ಹಾಂಗಾಂಕ್ ಮತ್ತು ಮಕಾವ್ ಹೊರತುಪಡಿಸಿ ಚೀನಾದಲ್ಲಿ 83,581 ಪ್ರಕರಣಗಳು ವರದಿಯಾಗಿದ್ದು, 4,634 ಮಂದಿ
ಮೃತಪಟ್ಟಿದ್ದಾರೆ.

Published On: 10 July 2020, 12:48 PM English Summary: US posts new record daily virus caseload of more than 65000

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.