1. ಸುದ್ದಿಗಳು

UPI ಯುಪಿಐ ವಹಿವಾಟು ; ಎ .1ರಿಂದ ಹೆಚ್ಚುವರಿ ವಿನಿಮಯ ಶುಲ್ಕ !

A C Shobha
A C Shobha
UPI payment limit

2,000 ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದಾಗ ಮಾತ್ರ ಈ ವಿನಿಮಯ ಶುಲ್ಕವನ್ನು ವಿಧಿಸಲಾಗುವುದು ಎಂದು ಎನ್‌ಪಿಸಿಐ ಸ್ಪಷ್ಟನೆಯನ್ನು ನೀಡಿದೆ .ಯುಪಿಐ ವಹಿವಾಟುಗಳಿಗೆ ಬಳಸುವ ಪ್ರಿಪೇಯ್ಡ್ ಪಾವತಿ ಉಪಕರಣ (ಪಿಪಿಐ)ಗಳಿಗೆ ಮಾತ್ರ , ವಿನಿಮಯ ಶುಲ್ಕವನ್ನು ವಿಧಿಸಲಾಗುತ್ತದೆ.‌ 2,000 ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ಮಾತ್ರ ವಿನಿಮಯ ಶುಲ್ಕ ವಿಧಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ .

ಈ ಕುರಿತು ಬುಧವಾರದಂದು ಅಧಿಸೂಚನೆಯನ್ನು ಹೊರಡಿಸಿರುವ ಎನ್‌ಪಿಸಿಐ, ಈ ವಿನಿಮಯ ಶುಲ್ಕವು ಕೇವಲ ಪ್ರಿಪೇಯ್ಡ್ ಪಾವತಿ ಸಾಧನಗಳ ಮೂಲಕ ಮಾಡಿದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಮಾಹಿತಿಯನ್ನು ನೀಡಿದೆ .

ಇದನ್ನೂ ಓದಿ -PhonePe :  ನೀವು ಫೋನ್‌ಪೇ App ಉಪಯೋಗಿಸುತ್ತಿದ್ದರೆ ಈ ಮಾಹಿತಿ ಅತೀ ಅವಶ್ಯ

2. ಇನ್ಸೆಕ್ಟಿಸೈಡ್ಸ್ (ಇಂಡಿಯಾ) ಲಿಮಿಟೆಡ್ ಗೆ ಎಫ್‌ವೈ 2018-19 ಚಿನ್ನದ ಪ್ರಶಸ್ತಿ ಮತ್ತು ಎಫ್‌ವೈ 2019-20 ರಜತ ಪ್ರಶಸ್ತಿಯನ್ನು ಒನ್-ಸ್ಟಾರ್ ಎಕ್ಸ್‌ಪೋರ್ಟ್ಸ್ ಹೌಸ್ ವಿಭಾಗ ವತಿಯಿಂದ ಎಕ್ಸ್‌ಪೋರ್ಟ್ಸ್ ಎಕ್ಸಲೆನ್ಸ್ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ನೀಡಲಾಯಿತು . ಈ ಕ್ರಾಯಕ್ರಮವನ್ನು ಮುಂಬೈನಲ್ಲಿ ಭಾರತೀಯ ರಫ್ತು ಸಂಸ್ಥೆಗಳ ಫೆಡರೇಶನ್ (FIEO) ಈ ಕಾರ್ಯಕ್ರಮವನ್ನು ಆಯೋಜಿಸಿದರು . ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವರಾದ ಶ್ರೀಮತಿ. ಅನುಪ್ರಿಯಾ ಪಟೇಲ್ ಅವರು ರಾಜೇಶ್ ಅಗರ್ವಾಲ್ ಹಾಗು ಶ್ರೀಕಾಂತ್ ಸಾತ್ವೆ ಅವರಿಗೆ ಪ್ರಶಸ್ತಿಯನ್ನು ನೀಡಿದರು .

3.ಪಿಎಂ-ಕುಸುಮ್‌ ಯೋಜನೆಯಡಿ ದೇಶಾದ್ಯಂತ ಸುಮಾರು 21 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ವಿದ್ಯುತ್ ಮತ್ತು ಎನ್‌ಆರ್‌ಇ ಸಚಿವ ಆರ್‌.ಕೆ. ಸಿಂಗ್ ತಿಳಿಸಿದ್ದಾರೆ.

ಈ ಯೋಜನೆಯನ್ನು ನವೆಂಬರ್, 2020 ರಲ್ಲಿ 30,800 MW ಸೌರ ವಿದ್ಯುತ್ ಸಾಮರ್ಥ್ಯದ ಗುರಿಯೊಂದಿಗೆ ವಿಸ್ತರಿಸಲಾಯಿತು.28.02.2023 ರಂತೆ, ಕಾಂಪೊನೆಂಟ್-ಎ ಅಡಿಯಲ್ಲಿ ಒಟ್ಟು 89.45 ಮೆಗಾವ್ಯಾಟ್ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ ಮತ್ತು ಕಾಂಪೊನೆಂಟ್-ಬಿ ಮತ್ತು ಕಾಂಪೊನೆಂಟ್-ಸಿ ಅಡಿಯಲ್ಲಿ ಸುಮಾರು 2.09 ಲಕ್ಷ ಪಂಪ್‌ಗಳನ್ನು ಸ್ಥಾಪಿಸಲಾಗಿದೆ ಎಂದು ವರದಿಯಾಗಿದೆ.

ಇದು ಸ್ಥಾಪಿತ ಸೌರ ಸಾಮರ್ಥ್ಯದ ಸುಮಾರು 1,140 ಮೆಗಾವ್ಯಾಟ್‌ಗೆ ಸಮಾನವಾಗಿದೆ. ರಾಜಸ್ಥಾನ ರಾಜ್ಯ ಸೇರಿದಂತೆ ಯೋಜನೆಯಡಿಯಲ್ಲಿ ಪ್ರಯೋಜನ ಪಡೆದ ರೈತರ ರಾಜ್ಯ/UT-ವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ .

4.ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DR) ನಲ್ಲಿ 4% ಹೆಚ್ಚಳ ಮಾಡಿ ಭಾರತ ಸರ್ಕಾರವು ಘೋಷಿಸಿದೆ. ಕಳೆದ ವಾರ, ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (Dearness allowance) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಎರಡರಲ್ಲೂ ಮೂಲ ವೇತನ ಅಥವಾ ಪಿಂಚಣಿಯ 4% ಹೆಚ್ಚಳವನ್ನು ಘೋಷಿಸಿತು .ಇತ್ತೀಚಿನ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ DA/DR ದರವನ್ನು ಮೂಲ ವೇತನ/ಪಿಂಚಣಿಯ 42% ಕ್ಕೆ ಏರಿಸುತ್ತದೆ. ಕೇಂದ್ರ ಸರ್ಕಾರವು ತನ್ನ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡಾ 4.ರಷ್ಟು ಹೆಚ್ಚಿಸಿದೆ. ಒಟ್ಟಾರೆಯಾಗಿ ತುಟ್ಟಿಭತ್ಯೆ ಹೆಚ್ಚಳ ಶೇಕಡಾ 38 ರಿಂದ ಶೇಕಡಾ 42 ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Published On: 30 March 2023, 02:11 PM English Summary: UPI payment limit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.