MFOI 2023 : ದೇಶದ ರೈತರಿಗೆ ಹೊಸ ಗೌರವ ಹಾಗೂ ಗುರುತನ್ನು ನೀಡಲು ದೇಶದ ಅತಿದೊಡ್ಡ ಕೃಷಿ ಮಾಧ್ಯಮ ಸಂಸ್ಥೆ ಕೃಷಿ ಜಾಗರಣ ಪ್ರಾರಂಭಿಸಿದ, ' ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ ಕಿಸಾನ್ ಭಾರತ ಯಾತ್ರಾ 2023' ಆರಂಭಗೊಳ್ಳಲಿ ಇನ್ನೇನು ಕೆಲವೇ ದಿನಗಳು ಬಾಕಿ ಇವೆ..
ಈ ಕುರಿತು ಮಹತ್ತರ ಅಪ್‌ಡೇಟ್ ಒಂದನ್ನು ನಾವು ನಿಮಗೆ ನೀಡ್ತಾ ಇದ್ದೀವಿ. ಅದು ಏನಂದ್ರೆ ʻಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ ಕಿಸಾನ್ ಭಾರತ ಯಾತ್ರಾ 2023' ಈ ಅದ್ದೂರಿ ಕಾರ್ಯಕ್ರಮವನ್ನು ಭಾರತ ಸರ್ಕಾರದ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ.
ಅಷ್ಟೇ ಅಲ್ಲದೆ ಡಿಸೆಂಬರ್ 6,7,8 ರಂದು ನವ ದೆಹಲಿಯಲ್ಲಿ ನಡೆಯಲಿರುವ MFOI ಕಿಸಾನ್ ಭಾರತ್ ಯಾತ್ರೆ 2023-24' ಕ್ಕೆ ಚಾಲನೆ ಕೂಡ ನೀಡಲಿದ್ದಾರೆ. ಆ ಮೂಲಕ ದೇಶಾದ್ಯಂತ ರೈತರ ಅನುಕರಣೀಯ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ಈ ಕಾರ್ಯಕ್ರಮ ಸಾಕ್ಷಿಯಾಗಿ ನಿಲ್ಲಲಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ʻMFOI ಕಿಸಾನ್ ಭಾರತ್ ಯಾತ್ರೆ 2023-24'
“ಕೃಷಿ ಬೆಳವಣಿಗೆ ದರವು 12 ರಿಂದ 24 ಪರ್ಸೆಂಟ್‌ಗೆ ಹೆಚ್ಚಾದರೆ, ಜನರು ಹಳ್ಳಿಗಳಿಂದ ನಗರಗಳಿಗೆ ಹೋಗುವುದಿಲ್ಲ. ಅದರ ಕಲ್ಪನೆಯಲ್ಲಿ MFOI ಕಿಸಾನ್ ಭಾರತ ಯಾತ್ರಾ 2023-24 ಸ್ಮಾರ್ಟ್ ಗ್ರಾಮಗಳನ್ನು ಸ್ಥಾಪಿಸುವ ಮತ್ತು ಗ್ರಾಮೀಣ ಕೃಷಿ ಪದ್ಧತಿಯನ್ನು ಪರಿವರ್ತಿಸುವ ಕಲ್ಪನೆಯನ್ನು ರೂಪಿಸುತ್ತದೆ. MFOI ಕಿಸಾನ್ ಭಾರತ್ ಯಾತ್ರೆಯು ಡಿಸೆಂಬರ್ 2023 ರಿಂದ ನವೆಂಬರ್ 2024 ರವರೆಗೆ ದೇಶಾದ್ಯಂತ ಪ್ರಯಾಣಿಸುವ ಗುರಿಯನ್ನು ಹೊಂದಿದೆ, ಇದು 1 ಲಕ್ಷಕ್ಕೂ ಹೆಚ್ಚು ರೈತರಿಗೆ ತಲುಪುವ 4,000 ಕ್ಕೂ ಹೆಚ್ಚು ಸ್ಥಳಗಳಲಲಿ ವಿಶಾಲವಾದ ನೆಟ್‌ವರ್ಕ್ ಮತ್ತು 26,000 ಕಿಲೋಮೀಟರ್‌ಗಿಂತಲೂ ಹೆಚ್ಚು ಗಮನಾರ್ಹವಾದ ದೂರವನ್ನು ಒಳಗೊಂಡಿದೆ.ರೈತರ ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಹೆಚ್ಚಿಸುವ ಮೂಲಕ ರೈತರನ್ನು ಸಬಲೀಕರಣಗೊಳಿಸುವ ಮೂಲಕ ಕೃಷಿ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದು ಈ ಯಾತ್ರೆಯ ಪ್ರಾಥಮಿಕ ಉದ್ದೇಶವಾಗಿದೆ. - ಎಂ ಸಿ ಡೊಮಿನಿಕ್ ಸಂಸ್ಥಾಪಕ, ಪ್ರಧಾನ ಸಂಪಾದಕ ಕೃಷಿ ಜಾಗರಣ
ʼʼMFOI ಕಿಸಾನ್ ಭಾರತ ಯಾತ್ರಾʼʼ ಬಗ್ಗೆ ಒಂದಿಷ್ಟು
ಈ ಕಾರ್ಯಕ್ರಮವು ವಾರ್ಷಿಕವಾಗಿ ರೂ 10 ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಗಳಿಸುವ ದೇಶದ ರೈತರಿಗಾಗಿ ಮತ್ತು ಕೃಷಿಯಲ್ಲಿ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ಪ್ರಗತಿಪರ ರೈತರಾಗಿ ಗುರುತಿಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವಾಗಿದೆ.
ದೇಶದ ರಾಜಧಾನಿಯ ಹೃದಯಭಾಗವಾದ ಪುಸಾದ IARI ಮೇಳಾ ಗ್ರೌಂಡ್‌ನಲ್ಲಿ ಡಿಸೆಂಬರ್ 6,7,8 ರಂದು ನಡೆಯಲಿದೆ. ಈ ಕೃಷಿ ಮಹಾಕುಂಭದಲ್ಲಿ ಕೃಷಿ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರದರ್ಶನಗಳು, ವ್ಯಾಪಾರ ಅವಕಾಶಗಳು ಮತ್ತು ಸೆಮಿನಾರ್‌ಗಳನ್ನು ಸಹ ಆಯೋಜಿಸುತ್ತವೆ. ಈ ಕಾರ್ಯಕ್ರಮದಲ್ಲಿ ಕೃಷಿ ತಜ್ಞರು, ಉದ್ಯಮಿಗಳು, ಪ್ರಗತಿಪರ ರೈತರು ಜೊತೆಗೆ ಅನೇಕ ದೊಡ್ಡ ಸಂಸ್ಥೆಗಳು ಸಹ ಭಾಗವಹಿಸುತ್ತಿವೆ.
Share your comments