1. ಸುದ್ದಿಗಳು

ಫೇಸ್‌ಲೆಸ್‌ ಅಸೆಸ್‌ಮೆಂಟ್‌ ಸ್ಕೀಮ್‌ನಿಂದ ಆಡಳಿತದಲ್ಲಿ ಪಾರದರ್ಶಕತೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Hitesh
Hitesh
Transparency in governance through faceless assessment scheme: President Draupadi Murmu

ಫೇಸ್‌ಲೆಸ್‌ ಅಸೆಸ್‌ಮೆಂಟ್‌ ಸ್ಕೀಮ್‌ನಿಂದ ಆಡಳಿತದಲ್ಲಿ ಪಾರದರ್ಶಕತೆ ಮೂಡಲಿದೆ ಎಂದು ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರು ತಿಳಿಸಿದರು.  

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭಾರತೀಯ ಪೊಲೀಸ್ ಸೇವೆ, ಭಾರತೀಯ ಅಂಚೆ ಸೇವೆ, ಭಾರತೀಯ ರೈಲ್ವೆ ಲೆಕ್ಕಪತ್ರ ಸೇವೆ, ಭಾರತೀಯ ಕಂದಾಯ ಸೇವೆ

ಮತ್ತು ಭಾರತೀಯ ರೇಡಿಯೋ ನಿಯಂತ್ರಣ ಸೇವೆಯ  ಪ್ರಶಿಕ್ಷಣಾರ್ಥಿ ಅಧಿಕಾರಿಗಳು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅತ್ಯುನ್ನತ ಜವಾಬ್ದಾರಿಯನ್ನು ಹೊಂದಿರುವ ಹುದ್ದೆಗಳಿಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ನೀತಿಗಳನ್ನು ಜಾರಿಗೆ ತರುವಲ್ಲಿ ಮತ್ತು ಆ

ಮೂಲಕ ಜನರ ಭವಿಷ್ಯವನ್ನು ರೂಪಿಸುವಲ್ಲಿ ಅಧಿಕಾರಿಗಳು ಹೊಂದಿರುವ ಸಾಮರ್ಥ್ಯಗಳ ಮೇಲೆ ಆಡಳಿತ ವ್ಯವಸ್ಥೆಯು ಅಪಾರ ವಿಶ್ವಾಸ ಇರಿಸಿದೆ ಎಂದರು.  

ಅಧಿಕಾರಿಗಳು ತಮ್ಮ ಸೇವೆಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ನಾಗರಿಕ ಕೇಂದ್ರಿತ ದೃಷ್ಟಿಕೋನವನ್ನು ಅನುಸರಿಸುವರೆಂಬ ನಿರೀಕ್ಷೆಯಿದೆ ಎಂದು ಹೇಳಿದರು.

ಅಧಿಕಾರಿಗಳು ತಮ್ಮ ಗುರಿಗಳು ಮತ್ತು ಕ್ರಿಯೆಗಳ ಬಗ್ಗೆ ಜಾಗರೂಕರಾಗಿರಬೇಕು. ಜೊತೆಗೆ ತಮ್ಮ ಉದ್ದೇಶಗಳು ಮತ್ತು ಗುರಿಗಳನ್ನು ರಾಷ್ಟ್ರದ ವಿಶಾಲ ಗುರಿಗಳೊಂದಿಗೆ

ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ರಾಷ್ಟ್ರಪತಿಗಳು ಸಲಹೆ ನೀಡಿದರು.

ಇದು ತಂತ್ರಜ್ಞಾನದ ಯುಗ. ಆಡಳಿತ ಮತ್ತು ಆಡಳಿತ ಕ್ಷೇತ್ರದಲ್ಲಿ ಆವಿಷ್ಕಾರಕ್ಕೆ ವಿಪುಲ ಅವಕಾಶಗಳಿವೆ. ಆಡಳಿತವನ್ನು ಹೆಚ್ಚು ಹೆಚ್ಚು ಪರಿಣಾಮಕಾರಿ, ತ್ವರಿತ,

ಪಾರದರ್ಶಕ ಮತ್ತು ಜನಪರವಾಗಿಸಲು ತಂತ್ರಜ್ಞಾನವನ್ನು ಬಳಸಬಹುದು ಎಂದು ರಾಷ್ಟ್ರಪತಿಗಳು ಹೇಳಿದರು.

ಭಾರತೀಯ ಕಂದಾಯ ಸೇವೆಯ ಪ್ರಶಿಕ್ಷಣಾರ್ಥಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಅವರು ವಹಿಸಬೇಕಾದ ಅವಳಿ ಪಾತ್ರಗಳ ಬಗ್ಗೆ ವಿವರಿಸಿದರು.

ತೆರಿಗೆದಾರರಿಗಾಗಿ ತೆರಿಗೆ ಕಾನೂನುಗಳ ಅನುಸರಣೆಯನ್ನು ಸುಗಮಗೊಳಿಸುವುದ ಜೊತೆಗೆ, ತೆರಿಗೆ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಾಸಾರ್ಹ

ಕ್ರಮಗಳನ್ನು ಕೈಗೊಳ್ಳಲು ಕೊಡುಗೆ ನೀಡಬೇಕೆಂದರು. ತೆರಿಗೆದಾರರ ಜೊತೆ ಹೆಚ್ಚು ಗೌರವಯುತವಾಗಿ ಸಂವಹನ ನಡೆಸಬೇಕು.

ತೆರಿಗೆ ಪಾವತಿ ವ್ಯವಸ್ಥೆಯು ಸ್ವಯಂಪ್ರೇರಿತ ತೆರಿಗೆ ನಿಯಮಗಳ ಅನುಸರಣೆಯತ್ತ ಸಾಗಬೇಕು.

ಭಾರತ ಸರಕಾರದ ʻಫೇಸ್‌ಲೆಸ್‌ ಅಸೆಸ್‌ಮೆಂಟ್‌ ಸ್ಕೀಮ್‌ʼ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಹೊಸ ʻಫೇಸ್‌ಲೆಸ್‌ ಅಸೆಸ್‌ಮೆಂಟ್‌ʼ ಪರಿಸರ ವ್ಯವಸ್ಥೆಯ ಪರಿಚಯ ಬೆಳೆಸಿಕೊಳ್ಳುವಂತೆ ರಾಷ್ಟ್ರಪತಿಗಳು ಸಲಹೆ ನೀಡಿದರು.

ಭಾರತೀಯ ರೇಡಿಯೋ ನಿಯಂತ್ರಕ ಸೇವೆಯ ಕಾರ್ಯಗಳ ಬಗ್ಗೆ ಮಾತನಾಡಿದ ರಾಷ್ಟ್ರಪತಿಗಳು, ಈ ಸೇವೆಯು ಬಹಳ ಮಹತ್ವದ್ದಾಗಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ

ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿದರು. ʻಸ್ಪೆಕ್ಟ್ರಂʼ ಪರವಾನಗಿಗಳ ಹಂಚಿಕೆ, ʻಸ್ಪೆಕ್ಟ್ರಂʼ ಹರಾಜು ನಡೆಸುವುದು ಮತ್ತು ಅಗತ್ಯ ಅನುಮತಿಗಳನ್ನು

ಒದಗಿಸುವುದು ಈ ಸೇವೆಯ ಕೆಲವು ಪ್ರಮುಖ ಜವಾಬ್ದಾರಿಗಳಾಗಿವೆ. ಡಿಜಿಟಲ್ ಪರಿಸರದಲ್ಲಿ, ದೂರ-ಸಂವಹನ ಜಾಲಗಳನ್ನು ವಿಸ್ತರಿಸಲು ಮತ್ತು ಡೇಟಾ ಸೇವೆಗಳಿಗೆ

ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸಲು ʻಸ್ಪೆಕ್ಟ್ರಂʼ ಲಭ್ಯತೆಯ ಅಗತ್ಯ ಸಾಕಷ್ಟಿದೆ ಎಂದು ಅವರು ಹೇಳಿದರು.

ಮಾಂಡೌಸ್‌ ಚಂಡಮಾರುತ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಧಾರಾಕಾರ ಮಳೆ

ಭಾರತೀಯ ರೇಡಿಯೋ ನಿಯಂತ್ರಣ ಸೇವೆಯ ಅಧಿಕಾರಿಗಳು ಸಂಬಂಧಿತ ನೀತಿಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಹೊಸ ಆಲೋಚನೆಗಳು ಹಾಗೂ ತಂತ್ರಜ್ಞಾನಗಳನ್ನು ಹೊರತರುತ್ತಾರೆ ಎಂಬ ವಿಶ್ವಾಸವನ್ನು ರಾಷ್ಟ್ರಪತಿಗಳು ವ್ಯಕ್ತಪಡಿಸಿದರು.

ಸಾರ್ವಜನಿಕ ನೀತಿಯು ಸಾಮಾಜಿಕ ನ್ಯಾಯದ ಸಾಧನವಾಗಿದೆ. ಹೀಗಾಗಿ ಸಾರ್ವಜನಿಕ ವಲಯದ ಸಿಬ್ಬಂದಿ ಸಾಮಾಜಿಕ ಬದಲಾವಣೆಯ ಏಜೆಂಟರೆಂದು ಎಂದು ರಾಷ್ಟ್ರಪತಿಗಳು ಅಭಿಪ್ರಾಯಪಟ್ಟರು.

ಅಧಿಕಾರಿಗಳು ಸಾರ್ವಜನಿಕ ಸೇವೆಯನ್ನು ತಮ್ಮ ವೃತ್ತಿಯಾಗಿ ಆರಿಸಿಕೊಂಡಿದ್ದಾರೆ; ಆದ್ದರಿಂದ ಅವರು ರಾಷ್ಟ್ರ ಸೇವೆ ಮಾಡಲು ಇಲ್ಲಿಗೆ ಬಂದಿದ್ದಾರೆ ಎಂಬುದನ್ನು ಸದಾ ನೆನಪಿಡಬೇಕೆಂದು ಅವರು ಸಲಹೆ ನೀಡಿದರು.

ರಾಜ್ಯದಲ್ಲಿ “ಪಕ್ಷಿ ಉತ್ಸವ”; ಎಲ್ಲಿ ಮತ್ತು ಯಾವಾಗ ಇಲ್ಲಿದೆ ವಿವರ! 

Published On: 08 December 2022, 01:00 PM English Summary: Transparency in governance through faceless assessment scheme: President Draupadi Murmu

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2023 Krishi Jagran Media Group. All Rights Reserved.