ಕಲ್ಲಿದ್ದಲು ಸಚಿವಾಲಯದ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯು ಜುಲೈ 2021 ಕ್ಕೆ ಹೋಲಿಸಿದರೆ ಜುಲೈ 2022 ರಲ್ಲಿ 54.25 ದಶಲಕ್ಷ ಟನ್ನಿಂದ 60.42 ದಶಲಕ್ಷ ಟನ್ಗೆ 11.37%ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿರಿ: Breaking News: IT ದಾಳಿಯಲ್ಲಿ ಬರೋಬ್ಬರಿ 390 ಕೋಟಿ ಮೌಲ್ಯದ ಅಕ್ರಮ ಹಣ, ಬಂಗಾರ, ವಜ್ರ ಪತ್ತೆ!
ಕಲ್ಲಿದ್ದಲು ಸಚಿವಾಲಯದ ತಾತ್ಕಾಲಿಕ ಅಂಕಿ-ಅಂಶಗಳ ಪ್ರಕಾರ, ಈ ವರ್ಷದ ಜುಲೈನಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ (CIL) , ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್ (SCL) ಮತ್ತು ಕ್ಯಾಪ್ಟಿವ್ ಮೈನ್ಸ್ / ಇತರ ಸಂಸ್ಥೆಗಳು ಕ್ರಮವಾಗಿ 47.33 ದಶಲಕ್ಷ ಟನ್ ಮತ್ತು 9.80 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸುವ ಮೂಲಕ 11.12% ಮತ್ತು 44.37% ನಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಆದರೂ, ಎಸ್ಸಿಸಿಎಲ್ ತಿಂಗಳ ಅವಧಿಯಲ್ಲಿ 32.51% ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
ಪ್ರಮುಖ 37 ಕಲ್ಲಿದ್ದಲು ಗಣಿಗಳಲ್ಲಿ, 24 ಗಣಿಗಳ ಉತ್ಪಾದನೆಯ ಪ್ರಮಾಣವು ಈ ವರ್ಷದ ಜುಲೈನಲ್ಲಿ ಶೇಕಡಾ 100 ಕ್ಕಿಂತ ಹೆಚ್ಚಾಗಿದೆ. ಇನ್ನೂ ಏಳು ಗಣಿಗಳ ಉತ್ಪಾದನೆಯು ಶೇಕಡಾ 80 ರಿಂದ 100 ರ ನಡುವೆ ಇವೆ.
ಅದೇ ಸಮಯದಲ್ಲಿ, ಕಲ್ಲಿದ್ದಲು ಸಾಗಾಣಿಕೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಜುಲೈ 2022 ರಲ್ಲಿ 62.49 ದಶಲಕ್ಷ ಟನ್ ನಿಂದ 67.81 ದಶಲಕ್ಷ ಟನ್ ಗೆ 8.51% ರಷ್ಟು ಹೆಚ್ಚಾಗಿದೆ.
ಜುಲೈ 2022 ರಲ್ಲಿ, ಸಿಐಎಲ್ ಮತ್ತು ಖಾಸಗಿ ಗಣಿಗಳು / ಇತರ ಸಂಸ್ಥೆಗಳು ಕ್ರಮವಾಗಿ 54.54 ಮತ್ತು 9.91 ದಶಲಕ್ಷ ಟನ್ ರವಾನೆ ಮಾಡುವ ಮೂಲಕ 8.17% % ಮತ್ತು 40.78% ಬೆಳವಣಿಗೆಯನ್ನು ದಾಖಲಿಸಿವೆ.
ವಿದ್ಯುತ್ ಬೇಡಿಕೆಯ ಹೆಚ್ಚಳದಿಂದಾಗಿ ಜುಲೈ 2021 ರಲ್ಲಿ 49.92 ದಶಲಕ್ಷ ಟನ್ ಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ 58.45 ದಶಲಕ್ಷ ಟನ್ ಗೆ 17.09% ರಷ್ಟು ವಿದ್ಯುತ್ತಿನ ರವಾನೆಯಾಗಿದೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು ಜುಲೈ 2022 ರಲ್ಲಿ 4.76% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಜುಲೈ 2022 ರಲ್ಲಿ ಒಟ್ಟಾರೆ ವಿದ್ಯುತ್ ಉತ್ಪಾದನೆಯು ಜುಲೈ 2021 ಕ್ಕಿಂತ 4.29% ಹೆಚ್ಚಾಗಿದೆ.
Share your comments