1. ಸುದ್ದಿಗಳು

news ಇಂದಿನ ಪ್ರಮುಖ ಸುದ್ದಿಗಳ ವಿವರ ಇಲ್ಲಿವೆ!

Hitesh
Hitesh
Today's top news details are here!

ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂದು ಹಲವು ಬೆಳವಣಿಗೆಗಳು ನಡೆದಿವೆ. ಅದರ ಚುಟುಕು ಸುದ್ದಿಗಳ ವಿವರ ಇಲ್ಲಿದೆ.

ವಿಶ್ವ ಆಹಾರ ಭಾರತ-2023 ಮೇಳ ನಾಳೆ

ವಿಶ್ವ ಆಹಾರ ಭಾರತ-2023 ಮೇಳ ಶುಕ್ರವಾರ ಉದ್ಘಾಟನೆಯಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿರುವ ಪ್ರಗತಿ

ಮೈದಾನದಲ್ಲಿ ಶುಕ್ರವಾರ ವಿಶ್ವ ಆಹಾರ ಭಾರತ-2023 ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ.

ಈ ಮೇಳವನ್ನು ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯ ಆಯೋಜಿಸಿದ್ದು, ಮೂರು ದಿನಗಳ ಕಾಲ ನಡೆಯಲಿದೆ. 

ಅಲ್ಲದೇ ವಿಶ್ವಕ್ಕೆ ದೇಶೀಯ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಗುರಿ ಇದೆ ಉದ್ದೇಶವಾಗಿದೆ.     

----------

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಇದೀಗ ಕ್ಷಣಗಣನೆ ಪ್ರಾರಂಭವಾಗಿದೆ. ಮೊದಲನೇ ಹಂತದ ಚುನಾವಣೆಗೆ ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿದೆ.

ಈ ಸಂದರ್ಭದಲ್ಲಿ ಚುನಾವಣಾ ಪ್ರಚಾರ ತೀವ್ರ ಬಿರುಸು ಪಡೆದುಕೊಂಡಿದೆ. ನವೆಂಬರ್‌ 7ರಂದು 20 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಇದರಲ್ಲಿ ಮುಖ್ಯವಾದ ಅಂಶವೆಂದರೆ ಚುನಾವಣೆ ನಡೆಯುವ ಬಹುತೇಕ ಕ್ಷೇತ್ರಗಳು ಮಾವೋವಾದಿಗಳಿಂದ ಬಾಧಿತಕ್ಕೆ ಒಳಪಟ್ಟವಾಗಿವೆ.

----------
ಲಾಗಿನ್‌ ನೀಡಿದ್ದು ನಿಜ ಎಂದ ಮೊಹ್ವಾ ಮೊಯಿತ್ರಾ!

ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದಕ್ಕೆ ಕಾಸು ಎನ್ನುವುದು ಇತ್ತೀಚಿಗೆ ಸಾಕಷ್ಟು ಚರ್ಚೆಯಾದ ವಿಷಯವಾಗಿದೆ.  

 ತೃಣಮೂಲ ಕಾಂಗ್ರೆಸ್‌ನ ಸಂಸದೆ ಮೊಹ್ವಾ ಮೊಯಿತ್ರಾ ಲೋಕಸಭೆಯ ನೈತಿಕ ಸಮಿತಿಯ ಮುಂದೆ ಇದೇ ವಿಚಾರವಾಗಿ

ಅಂದರೆ ಪ್ರಶ್ನೆಗಾಗಿ ಕಾಸು ಹಗರಣದ ಸಂಬಂಧ ಶುಕ್ರವಾರ ಹಾಜರಾದರು.

ಮೂರು ಕೇಂದ್ರ ಸಚಿವಾಲಯಗಳಿಂದ ನೈತಿಕ ಸಮಿತಿಯು ಸ್ವೀಕರಿಸಿದ ವರದಿಗಳು ಹಾಗೂ ದಾಖಲೆಗಳ ಆಧಾರದ ಮೇಲೆ ಅವರನ್ನು ಪ್ರಶ್ನಿಸಲಾಯಿತು.

ಈ ಸಂದರ್ಭದಲ್ಲಿ ಮೊಹ್ವಾ ಮೊಯಿತ್ರಾ ಅವರು, ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.

ಆದರೆ, ಉದ್ಯಮಿ ದರ್ಶನ್ ಹೀರಾನಂದನಿ ಅವರೊಂದಿಗೆ ಸಂಸದೀಯ ಲಾಗಿನ್ ಹಂಚಿಕೊಂಡಿರುವುದು ಸತ್ಯ ಎಂದಿದ್ದಾರೆ.

----------

ಶ್ರೀಲಂಕಾದ ಕೊಲಂಬೋ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಲಂಬೋದಲ್ಲಿ ಶುಕ್ರವಾರ

ಭಾರತೀಯ ಮೂಲದ ತಮಿಳರು ಶ್ರೀಲಂಕಾಕ್ಕೆ ಭೇಟಿ ನೀಡಿದ ದ್ವಿಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

----------

ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸುವ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೆ ಶೇಕಡ 97 ಪ್ರಮಾಣಕ್ಕೂ

ಅಧಿಕ ನೋಟುಗಳು ಹಿಂದಿರುಗಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. 2023ರ ಮೇಯಲ್ಲಿ ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ಮೌಲ್ಯದ ಕರೆನ್ಸಿ

ನೋಟುಗಳ ಪೈಕಿ, ಅಕ್ಟೋಬರ್ 31 ರಂದು ವ್ಯವಹಾರದ ಮುಕ್ತಾಯದ ವೇಳೆಗೆ, ಮೌಲ್ಯವು ಕೇವಲ 0.10 ಲಕ್ಷ ಕೋಟಿಗೆ ಕುಸಿದಿದೆ ಎಂದು ಪ್ರಕಟಣೆ ತಿಳಿಸಿದೆ.

----------

ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ “ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ

ಆಯೋಜಿಸಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹಂಪಿಯಲ್ಲಿ ಚಾಲನೆ ನೀಡಲಿದ್ದಾರೆ.

ಇದೇ ವೇಳೆ ಸುವರ್ಣ ಕರ್ನಾಟಕ 50ರ ಸಂಭ್ರಮದ ಕರ್ನಾಟಕ ಜ್ಯೋತಿ ರಥಯಾತ್ರೆಯನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ.

----------  

ಇನ್ನು ರಾಜ್ಯದ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಶೀಘ್ರ ಕ್ರಮವಹಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಸುಮಾರು 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಉಳಿದ ಖಾಲಿ ಹುದ್ದೆಗಳ ಭರ್ತಿಗೂ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ.  

Published On: 02 November 2023, 06:04 PM English Summary: Today's top news details are here!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.