1. ಸುದ್ದಿಗಳು

ಕೃಷಿ ಕ್ಷೇತ್ರದ ವಿದ್ಯಾರ್ಥಿಗಳಿಗೆ  ಕೃಷಿ ಜಾಗರಣದಿಂದ "ವಿಂಗ್ಸ್‌ ಟು ಕೆರಿಯರ್‌" ಆರಂಭ

Maltesh
Maltesh
Today Krishi Jagran launches Wings to Career platform in delhi

ಕೃಷಿ ಜಾಗರಣ ಇಂದು 'ವಿಂಗ್ಸ್ ಟು ಕೆರಿಯರ್' - ಕೃಷಿ ಆಧಾರಿತ ವೃತ್ತಿ ವೇದಿಕೆಯ ಬಿಡುಗಡೆಗೊಳಿಸಿದೆ.  ವಿಂಗ್ಸ್ ಟು ಕೆರಿಯರ್' ವೃತ್ತಿಜೀವನದ ವೇದಿಕೆಯಾಗಿದ್ದು, ಇದು ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ಮಾಡಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ವೇದಿಕೆಯಲ್ಲಿ, ಎಲ್ಲಾ ವಿದ್ಯಾರ್ಥಿಗಳು ಕೃಷಿ ಉದ್ಯಮದ ತಜ್ಞರನ್ನು ನೇರವಾಗಿ ಭೇಟಿಯಾಗುವ ಮೂಲಕ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಇದು ವಿದ್ಯಾರ್ಥಿಗಳು ಕೃಷಿ ಕ್ಷೇತ್ರದಲ್ಲಿ ಪ್ರಾರಂಭಿಸಲು ಸಹಾಯ ಮಾಡುತ್ತದೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಘಿ ಭಾಗವಹಿಸಿದ್ದ  ಐಸಿಎಆರ್ ನ ಡಿಡಿಜಿ   ಡಾ. ಆರ್.ಸಿ.. ಅಗರ್ವಾಲ್ ಅವರು, 'ವಿಂಗ್ಸ್ ಟು ಕೆರಿಯರ್ ಪ್ಲಾಟ್‌ಫಾರ್ಮ್' ಒಂದು ಶಿಕ್ಷಣ ಎಂದು ಶ್ಲಾಘಿಸಿದರು ಮತ್ತು ಕೃಷಿ ಶಿಕ್ಷಣದ ಪ್ರಾಮುಖ್ಯತೆ ಈಗ ಹೆಚ್ಚುತ್ತಿದೆ ಎಂದು ಹೇಳಿದರು.

ಇಂಜಿನಿಯರಿಂಗ್ ಹೊರತುಪಡಿಸಿ ವಿದ್ಯಾರ್ಥಿಗಳು ಈಗ ಕೃಷಿಯಲ್ಲಿ ಆಸಕ್ತಿ ತೋರುತ್ತಿದ್ದು, ಹುಡುಗರು ಹಾಗೂ ಹುಡುಗಿಯರು ಕೃಷಿಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಈ ವಿಂಗ್ಸ್ ಟು ಕೆರಿಯರ್ ಪ್ಲಾಟ್‌ಫಾರ್ಮ್ ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.    

Today Krishi Jagran launches Wings to Career platform in delhi

ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ  ರಾಜು  ಕಪೂರ್, ಈ ವಿಂಗ್ಸ್ ಟು ಕೆರಿಯರ್ ಪ್ಲಾಟ್‌ಫಾರ್ಮ್ ಉತ್ತಮ ಉಪಕ್ರಮ ಎಂದು ಬಣ್ಣಿಸಿದರು. ತಂತ್ರಜ್ಞಾನದ ಈ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗಬೇಕಿದೆ ಎಂದ ಅವರು, ಇಂದಿನ  ಸಂಗತಿಗಳು ನಾಳೆಗೆ  ಸರಿಯಾಗದಿರಬಹುದು .

ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ವೇಗವಾಗಿ  ಬೆಳೆಯುತ್ತಿದೆ ಎಂದು ಹೇಳಿದರು . ಇದರೊಂದಿಗೆ ಇಂಡಸ್ಟ್ರಿಯಲ್ಲಿಯೂ ಸಾಕಷ್ಟು ಬದಲಾವಣೆ ಆಗಲಿದೆ. ಇಂದಿನ ವಿದ್ಯಾರ್ಥಿಗಳು ಉದ್ಯೋಗ ಕಲ್ಪಿಸುವ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದರು. ಇಂದಿನ ಕಾಲದಲ್ಲಿ  ಕೃಷಿಯಲ್ಲಿ ತಂತ್ರಜ್ಞಾನದ ಅವಶ್ಯಕತೆ ಹೆಚ್ಚಿದೆ . ಇದರೊಂದಿಗೆ ಕೃಷಿ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು.  

ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ಈ ವೇದಿಕೆಗೆ ಕೃಷಿ ಜಾಗರಣ ಸಂಸ್ಥೆಯನ್ನು ಡಾ.ರಮೇಶ್ ಮಿತ್ತಲ್ ಅಭಿನಂದಿಸಿದರು. ಪ್ರಸ್ತುತ ಉದ್ಯಮದಲ್ಲಿ ಕೃಷಿ ಕ್ಷೇತ್ರದ ತಜ್ಞರ ಬೇಡಿಕೆ ಹೆಚ್ಚುತ್ತಿದೆ ಎಂದರು. ಅವರು ಕೃಷಿ ವಲಯದ ಪ್ರಾರಂಭ, ಕೃಷಿ ವ್ಯವಹಾರ ನಿರ್ವಹಣೆ ಶಿಕ್ಷಣ ಮತ್ತು ಕೃಷಿ ಮಾರುಕಟ್ಟೆ ಕುರಿತು ಮಾತನಾಡಿದರು. ದೇಶದ  ಯುವಕರು ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ಗಳತ್ತ  ಹೆಜ್ಜೆ ಹಾಕುತ್ತಿದ್ದಾರೆ ಎಂದು ಅವರು ಮಾತನಾಡಿದರು . ಇದರೊಂದಿಗೆ ಹವಾಮಾನ ಬದಲಾವಣೆ, ಆಹಾರ ಭದ್ರತೆ, ಆಹಾರ ಕಲಬೆರಕೆ ಮತ್ತು ಕೃಷಿಯಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನದ ಸವಾಲುಗಳ ಕುರಿತು ಮಾತನಾಡಿದರು.  

Today Krishi Jagran launches Wings to Career platform in delhi

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ಆರ್.ಸಿ. ಅಗರ್ವಾಲ್ (ಡಿಡಿಜಿ ಶಿಕ್ಷಣ ಐಸಿಎಆರ್),  ಡಾ. ಎಸ್.ಎನ್. ಝಾ (ಇಂಜಿನಿಯರ್ ಐಸಿಎಆರ್), ಡಾ. ರಮೇಶ್ ಮಿತ್ತಲ್ (ನಿರ್ದೇಶಕ ಎನ್ಐಎಂ), ಡಾ. ನೂತನ್ ಕೌಶಿಕ್ (ಅಮಿಟಿ ಫುಡ್ ಅಂಡ್ ಅಗ್ರಿಕಲ್ಚರ್ ಫೌಂಡೇಶನ್), ರಾಜು ಕಪೂರ್ (ನಿರ್ದೇಶಕ  ಕಾರ್ಪೊರೇಟ್  ವ್ಯವಹಾರಗಳು),  ಡಾ. ಓಂಬಿರ್ ಎಸ್. ತ್ಯಾಗಿ (ವಿಪಿ ಯುಪಿಎಲ್ ಲಿಮಿಟೆಡ್), ಮೊರುಪ್ ನಮಗಿಲ್ (IFFCO ಹೆಡ್), ಸಂಗೀತಾ ಪಾಂಡೆ (ಜಂಟಿ ಸಂಯೋಜಕಿ AIOA), ಕೃಷ್ಣ ಸುಂದರಿ (ಪ್ರೊಫೆಸರ್ ಬಯೋಟೆಕ್ನಾಲಜಿ JP), ಪ್ರೊಫೆಸರ್ ಶ್ವೇತಾ ಪ್ರಸಾದ್ (Placement Coordinator  Imperial School of Business) ಉಪಸ್ಥಿತರಿದ್ದರು.    

Today Krishi Jagran launches Wings to Career platform in delhi
Published On: 11 May 2023, 04:46 PM English Summary: Today Krishi Jagran launches Wings to Career platform in delhi

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.