1. ಸುದ್ದಿಗಳು

ಕೋಟಿ ರೂ.ವೇತನ ಇದೆ; ಕೆಲಸನೇ ಇಲ್ಲ: ಕಂಪನಿ ವಿರುದ್ಧ ಕೋರ್ಟ್‌ ಮೊರೆ ಹೋದ ಉದ್ಯೋಗಿ!

Hitesh
Hitesh
There is a salary of Rs. crore; There is no work: the employee went to court against the company!

ಸಕಾಲದಲ್ಲಿ ಸೂಕ್ತ ವೇತನ ನೀಡಿಲ್ಲ ಎಂದು ಉದ್ಯೋಗಿಗಳು ಪ್ರತಿಭಟನೆ ನಡೆಸುವುದು, ಕೋರ್ಟ್‌ ಮೊರೆ ಹೋಗುವುದನ್ನು

ಸಾಮಾನ್ಯವಾಗಿ ಕೇಳಿಯೇ ಇರುತ್ತೀರಿ. ಆದರೆ, ಹೆಚ್ಚು ವೇತನ ಕೊಡುತ್ತಿದ್ದಾರೆ. ಕೆಲಸವನ್ನೇ ಕೊಡಿತ್ತೀಲ್ಲ ಎಂದು ಯಾರಾದರೂ ಕೋರ್ಟ್‌ ಮೊರೆ ಹೋಗಿದ್ದು ಕೇಳಿದ್ದೀರ..

ಸಿಹಿಸುದ್ದಿ: ಕಬ್ಬು ಬೆಳೆಗಾರರಿಗೆ ಸಿಗಲಿದೆ 204 ಕೋಟಿ ಲಾಭಾಂಶ!

ಹೌದು, ವ್ಯಕ್ತಿಯೊಬ್ಬ ತನಗೆ ಮಾಸಿಕವಾಗಿ ಒಂದು ಕೋಟಿ ರೂಪಾಯಿಯ ವರೆಗೆ ವೇತನವನ್ನೇನೋ ಕೊಡುತ್ತಿದ್ದಾರೆ.

ಆದರೆ, ಕೆಲಸವನ್ನೇ ಕೊಡುತ್ತಿಲ್ಲ ಎಂದು ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮೇಲೆಯೇ ದೂರು ದಾಖಲಿಸಿದ್ದಾನೆ.

ಚೀನಾದ ವುಹಾನ್‌ “ಪ್ರಯೋಗ”ದಿಂದಲೇ ಹರಡಿತಂತೆ ಕೊರೊನಾ ಮಹಾಮಾರಿ! 

ಇಂತಹದ್ದೊಂದು ಘಟನೆ ನಡೆದಿರುವುದು ಐರ್ಲೆಂಡ್‌ನಲ್ಲಿ. ಐರ್ಲೆಂಡ್‌ನ ಐರಿಷ್‌ ರೈಲ್‌ ನಲ್ಲಿ ಉದ್ಯೋಗ

ಮಾಡುತ್ತಿರುವ ಡೆರ್ಮೋಟ್‌ ಅಲೆಸ್ಟರ್ ಮಿಲ್ಸ್ ಎಂಬ ವ್ಯಕ್ತಿ ಈ ರೀತಿ  ಕೋರ್ಟ್‌ನಲ್ಲಿ ದೂರೊಂದನ್ನು ದಾಖಲಿಸಿದ್ದಾನೆ.

ಐರಿಷ್‌ ರೈಲ್‌ನಲ್ಲಿ ಹಣಕಾಸು ಅಧಿಕಾರಿಯಾಗಿರುವ ಮಿಲ್ಸ್‌ಗೆ ಕಂಪನಿಯು ವಾರ್ಷಿಕವಾಗಿ  ಬರೋಬ್ಬರಿ 1.03 ಕೋಟಿ ವೇತನವನ್ನೇನೋ ನೀಡುತ್ತಿದೆ.

ಆದರೆ, ಅವನ ವೇತನಕ್ಕೆ ಅನುಗುಣವಾಗಿ ಕೆಲಸವನ್ನು ನೀಡದೆ ಇರುವುದು ವ್ಯಕ್ತಿ ದೂರು ದಾಖಲಿಸಲು ಕಾರಣವಾಗಿದೆ.

ಕಂಪನಿಯಲ್ಲಿ ಉಳಿದೆಲ್ಲರಿಗೂ ಕೆಲಸ ನೀಡಿದರೂ, ತನಗೆ ಕೆಲಸ ನೀಡುತ್ತಿಲ್ಲ.

ಎಲ್ಲರು ಕೆಲಸ ಮಾಡುವಾಗ ನಾನು ಮಾತ್ರ ಖಾಲಿಯಾಗಿ ಕೂರುವುದು ಅತಿಯಾದ ಸಂಕಟವನ್ನು ಸೃಷ್ಟಿ ಮಾಡುತ್ತದೆ ಎನ್ನುವುದು ವ್ಯಕ್ತಿಯ ಅಳಲಾಗಿದೆ.  

38.30 ಲಕ್ಷ ಕೋಟಿ ಡಿಜಿಟಲ್ ಪಾವತಿ; ಚಿನ್ನ- ಬೆಳ್ಳಿ ದರ ತುಸು ಹೆಚ್ಚಳ! 

ಡೆರ್ಮೋಟ್‌ ಅಲೆಸ್ಟರ್ ಮಿಲ್ಸ್ ಎಂಬ ವ್ಯಕ್ತಿಯು ಕೋರ್ಟ್‌ಗೆ ನೀಡಿರುವ ಉತ್ತರದಂತೆ ಆತ ಪ್ರತಿ ದಿನ 10ಕ್ಕೆ ಕಚೇರಿಗೆ ಹಾಜರಾಗುವುದಾಗಿಯೂ

ಎರಡು ದಿನಪತ್ರಿಕೆ ಹಾಗೂ ಸ್ಯಾಂಡ್‌ವಿಚ್ ಖರೀದಿಸಿ, ನಂತರ ಪತ್ರಿಕೆ ಓದಿ, ಸ್ಯಾಂಡ್‌ವಿಚ್ ತಿಂದು ವಾಕಿಂಗ್‌ ಮಾಡುತ್ತೇನೆ ಎಂದಿದ್ದಾರೆ.

10.30ರ ವೇಳೆಗೆ ಕೆಲಸ ಸಂಬಂಧ ಏನಾದರೂ ಮೇಲ್‌ಗಳಿದ್ದರೆ ಉತ್ತರಿಸುತ್ತೇನೆ. ಆದರೆ, ಉಳಿದಂತೆ ಯಾವುದೇ ಕೆಲಸವನ್ನೂ

ಸಂಸ್ಥೆಯವರು ನನಗೆ ವಹಿಸುತ್ತಿಲ್ಲ. ಕಂಪನಿಯವರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.  

ಕಂಪನಿಯಲ್ಲಿ ಕಳೆದ 9 ವರ್ಷಗಳ ಹಿಂದೆ ಕಂಪನಿಯ ವಹಿವಾಟಿನ ಲೋಪದ ಬಗ್ಗೆ ಪ್ರಶ್ನೆ ಮಾಡಿದ್ದೆ.

ಆ ಸಂದರ್ಭದಿಂದ ಸುದೀರ್ಘ ಅವಧಿಯ ವರೆಗೆ ನನಗೆ ಕೆಲಸ ನೀಡದೆ ಈ ರೀತಿ ಮಾಡಲಾಗುತ್ತಿದೆ.

ಇದು ಶಿಕ್ಷೆಯ ರೀತಿಯಲ್ಲಿ ಇದೆ. ನನಗೆ ಸೂಕ್ತವಾದ ಕೆಲಸ ನೀಡಿದರೆ ಉತ್ಸಾಹದಿಂದ ಕೆಲಸ ಮಾಡುವುದಾಗಿ ಮಿಲ್ಸ್ ಕೋರ್ಟ್‌ಗೆ ಹೇಳಿದ್ದಾರೆ.  

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ! 

Published On: 06 December 2022, 04:23 PM English Summary: There is a salary of Rs. crore; There is no work: the employee went to court against the company!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.