1. ಸುದ್ದಿಗಳು

ಸಾರ್ವಜನಿಕರಿಗೆ ರಾಷ್ಟ್ರಪತಿ ಭವನ ವೀಕ್ಷಿಸಲು ಡಿಸೆಂಬರ್‌ 1ರಿಂದ ಅವಕಾಶ!

Hitesh
Hitesh
The public is allowed to see Rashtrapati Bhavan from December 1!

ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸ ರಾಷ್ಟ್ರಪತಿ ಭವನವು ಡಿಸೆಂಬರ್ 1 ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

Elephant Task Force: ರಾಜ್ಯದಲ್ಲಿ ಮನುಷ್ಯ- ಕಾಡಾನೆ ಸಂಘರ್ಷ ತಡೆಗೆ ನಾಲ್ಕು ಜಿಲ್ಲೆಗಳಲ್ಲಿ ಟಾಸ್ಕ್‌ ಪೋರ್ಸ್‌ ರಚನೆ 

ರಾಷ್ಟ್ರಪತಿ ಭವನದ ವೀಕ್ಷಣೆಗೆ ಪ್ರತಿ ವರ್ಷವೂ ನಿರ್ದಿಷ್ಟ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಈ ಬಾರಿ ಐದು ಸ್ಲಾಟ್‌ಗಳಿದ್ದು, ಗೆಜೆಟೆಡ್ ರಜಾದಿನಗಳನ್ನು ಹೊರತುಪಡಿಸಿ ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.   

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ

ನಿಗದಿಪಡಿಸಲಾಗಿರುವ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುತ್ತದೆ.

ಮಂಗಳವಾರದಿಂದ ಭಾನುವಾರದವರೆಗೆ ವಾರದಲ್ಲಿ ಆರು ದಿನಗಳು ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯ ಸಂಕೀರ್ಣಕ್ಕೆ ಸಾರ್ವಜನಿಕರು ಭೇಟಿ ನೀಡಬಹುದು ಎಂದು ರಾಷ್ಟ್ರಪತಿಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.  

ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 8 ರಿಂದ 9 ರವರೆಗೆ ಗಾರ್ಡ್ ಬದಲಾವಣೆ ಸಮಾರಂಭವನ್ನು ವೀಕ್ಷಿಸಲು ಸಹ ಅವಕಾಶ ಕಲ್ಪಿಸಲಾಗಿದೆ.

The public is allowed to see Rashtrapati Bhavan from December 1!

ರಾಷ್ಟ್ರಪತಿಗಳ ಅಂಗರಕ್ಷಕರು ಹೊಸ ಗುಂಪಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಡಲು ಸಿಬ್ಬಂದಿಯ ಬದಲಾವಣೆಯು ಪ್ರತಿ ವಾರ ನಡೆಯುವ ಮಿಲಿಟರಿ ಸಂಪ್ರದಾಯವಾಗಿದ್ದು, ಗಾರ್ಡ್ ಬದಲಾವಣೆ ಸಮಾರಂಭವು ಗೆಜೆಟೆಡ್ ರಜಾ ದಿನವಾದ ಶನಿವಾರದಂದು ಮತ್ತು ರಾಷ್ಟ್ರಪತಿ ಭವನದಿಂದ ಸೂಚಿಸಲಾದ ದಿನಗಳಲ್ಲಿ ನಡೆಯುವುದಿಲ್ಲ.

ಆನ್‌ಲೈನ್‌ನಲ್ಲಿ ಅರ್ಜಿಗೆ ಅವಕಾಶ 

ಡಿಸೆಂಬರ್‌1ರಿಂದ ರಾಷ್ಟ್ರಪತಿ ಭವನದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಇಚ್ಛಿಸುವವರು ಅಧಿಕೃತ ವೆಬ್‌ಸೈಟ್ - https://rb.nic.in/rbvisit/visit_plan.aspx ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ರಾಜ್ಯದ 49 ತಾಲ್ಲೂಕುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಇಳಿಕೆ!

Published On: 23 November 2022, 10:12 AM English Summary: The public is allowed to see Rashtrapati Bhavan from December 1!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.