1. ಸುದ್ದಿಗಳು

ವೃದ್ಧನ ಹೊಟ್ಟೆಯಿಂದ 187 ನಾಣ್ಯ ಹೊರತೆಗೆದ ವೈದ್ಯರು!

Hitesh
Hitesh
The doctor extracted 187 coins from the old man's stomach!

1. ಬಾಸ್ಮತಿ ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರದ ಸಮ್ಮತಿ!
2. 30 ಸಾವಿರಕ್ಕೂ ಹೆಚ್ಚು ಜಾನುವಾರು ರಕ್ಷಣೆ: ಸಚಿವ ಪ್ರಭು ಚೌವ್ಹಾಣ್‌
3. ಲೀಟರ್‌ ಹಾಲಿಗೆ ರೂ.40 ಖರೀದಿ ಬೆಲೆಗೆ ಮೈಸೂರು ರೈತರ ಆಗ್ರಹ
4. ಗೋಧಿ ಬೆಲೆಯನ್ನು ನಿಯಂತ್ರಿಸುತ್ತಿಲ್ಲ: ಕೇಂದ್ರ ಸರ್ಕಾರ  
5. ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
6. ದೆಹಲಿಯ ಏಮ್ಸ್‌ ಸರ್ವರ್‌ ಹ್ಯಾಕ್‌:  200 ಕೋಟಿ ಕ್ರಿಪ್ಟೋ ಕೆರೆನ್ಸಿಗೆ ಬೇಡಿಕೆ!
7. ಪ್ರಧಾನಮಂತ್ರಿ ಮನ್ ಕಿ ಬಾತ್‌; ಭಾರತೀಯ ಸಂಗೀತದ ಗುಣಗಾನ
8. ಮಹಾರಾಷ್ಟ್ರ ಪೊಲೀಸ್‌ ನೇಮಕಾತಿ: 18 ಸಾವಿರ ಹುದ್ದೆಗೆ 11 ಲಕ್ಷಕ್ಕೂ ಹೆಚ್ಚು ಅರ್ಜಿ!
9. ಜಗತ್ತಿನ ಅರ್ಧದಷ್ಟು ಜನರಿಗೆ ಬಾಯಿ ಅನಾರೋಗ್ಯ ಸಮಸ್ಯೆ  
10. ತೊಗರಿ ಬೆಳೆಗೆ ನೆಟೆ ರೋಗ: 15 ಸಾವಿರ ಪರಿಹಾರಕ್ಕೆ ಆಗ್ರಹ
11. ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆ ಹೆಚ್ಚಳವಿಲ್ಲ: ಡಿ.ರಂದೀಪ್‌
12. ವೃದ್ಧನ ಹೊಟ್ಟೆಯಿಂದ 187 ನಾಣ್ಯ ಹೊರತೆಗೆದ ವೈದ್ಯರು!
13. Ficci: 2022ನೇ ಸಾಲಿನ ಸುಸ್ಥಿರ ಕೃಷಿ ಪ್ರದಾನ, ಶೃಂಗಸಭೆ ಇಂದು
14. ಮೆಣಸಿನಕಾಯಿ ಬೆಳೆಯಲ್ಲಿ ರೋಗ; ರೈತರಿಗೆ ಆನ್‌ಲೈನ್‌ ತರಬೇತಿ 

1. ಕೇಂದ್ರ ಸರ್ಕಾರವು ಮುರಿದ ಅಕ್ಕಿ ಸೇರಿದಂತೆ ಸಾವಯವಲ್ಲದ ಬಾಸ್ಮತಿ ಅಕ್ಕಿಯ ರಫ್ತು ಮೇಲಿನ ನಿಷೇಧವನ್ನು ತೆಗೆದುಹಾಕಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ದೇಶೀಯ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಒಡೆದ ಅಕ್ಕಿಯ

ರಫ್ತಿನ ಮೇಲೆ ಕಠಿಣ ನಿರ್ಬಂಧ ವಿಧಿಸಿತ್ತು. ಇನ್ನು ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಲೆಗಳು ಏರಿದ ನಂತರ

ದೇಶೀಯ ಸರಬರಾಜುಗಳನ್ನು ಹೆಚ್ಚಿಸುವ ಉದ್ದೇಶದಿಂದ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನ ಮೇಲೆ ಶೇ.20ರಷ್ಟು ಸುಂಕವನ್ನು ವಿಧಿಸಲಾಗಿತ್ತು

Heavy Rain| ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ!   

2. ರಾಜ್ಯದಲ್ಲಿ ಗೋ ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರದಲ್ಲಿ 30 ಸಾವಿರಕ್ಕೂ ಹೆಚ್ಚು ಗೋವುಗಳನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌವ್ಹಾಣ್‌ ತಿಳಿಸಿದ್ದಾರೆ.‌
ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಮೇಲೆ ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಜಾನುವಾರುಗಳ ರಕ್ಷಣೆ ಮಾಡಲಾಗಿದೆ ಎಂದಿದ್ದಾರೆ. 
ಕೋಲಾರದ ಗಂಗಾಪುರ ಗ್ರಾಮ ಗೋಶಾಲೆಗೆ ಭೇಟಿ ನೀಡಿ ಅವರು ಮಾತನಾಡಿದರು. ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸುತ್ತಿದೆ. ಪ್ರತಿ ಗೋಶಾಲೆಯಲ್ಲೂ ನೂರರಿಂದ ಸಾವಿರದವರೆಗೆ ಜಾನುವಾರು ರಕ್ಷಣೆ ಮಾಡಲಾಗಿದೆ. ಇನ್ನು ಚರ್ಮಗಂಟು ರೋಗದಿಂದ ರಾಜ್ಯದಲ್ಲಿ ಈವರೆಗೆ 10,413 ರಾಸು ಮೃತಪಟ್ಟಿವೆ. ಉಳಿದ ರಾಸುಗಳು ಚೇತರಿಸಿಕೊಂಡಿವೆ. ರೋಗ ನಿಯಂತ್ರಣಕ್ಕೆ ಲಸಿಕೆ ನೀಡುವುದು ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.  
--------

Heavy Rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ  

ಲೀಟರ್‌ ಹಾಲಿಗೆ 40 ರೂಪಾಯಿಯಂತೆ ಖರೀದಿ ಬೆಲೆ ನಿಗದಿಪಡಿಸುವಂತೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಮೈಸೂರು ರೈತರು ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೇ ಹಾಲಿನ ದರವನ್ನು ಲೀಟರ್‌ಗೆ ₹ 2 ಹೆಚ್ಚಿಸಿದ್ದರೂ, ಮೈಸೂರಿನ ರೈತರು ಖರೀದಿ ದರವನ್ನು ಲೀಟರ್‌ಗೆ ₹ 40 ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ (KRRS) ಕಾರ್ಯಕರ್ತರು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮಂಡ್ಯದಲ್ಲಿ ಹಾಲು ಉತ್ಪಾದಕರು ಲೀಟರ್‌ಗೆ ₹31 ರೂಪಾಯಿ ಪಡೆಯುತ್ತಿದ್ದು, ಪ್ರತಿ ಲೀಟರ್‌ಗೆ ₹40ಕ್ಕೆ ಏರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೆಆರ್‌ಆರ್‌ಎಸ್‌ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮನವಿ ಪತ್ರ ಸಲ್ಲಿಸಿದರು. ಕಬ್ಬಿನ ದರವನ್ನು ಟನ್‌ಗೆ ₹4 ಸಾವಿರ ನಿಗದಿಪಡಿಸಬೇಕು. ಸರ್ಕಾರವು ರಾಜ್ಯ ಸಲಹಾ ಬೆಲೆಯನ್ನು ತಕ್ಷಣವೇ ಘೋಷಿಸಬೇಕು. ರಾಜ್ಯಾದ್ಯಂತ ಬೆಳೆಗಾರರಿಗೆ ಬೆಂಬಲ ಬೆಲೆಯಾಗಿ ಭತ್ತಕ್ಕೆ ಕ್ವಿಂಟಾಲ್ 500 ರೂಪಾಯಿ ನಿಗದಿ ಮಾಡಬೇಕು ಹಾಗೂ ಎಂಎಸ್‌ಪಿ ದರದಲ್ಲಿ ಭತ್ತ, ರಾಗಿ, ಜೋಳಕ್ಕೆ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.  
--------

ಲೀಟರ್‌ ಹಾಲಿಗೆ 40 ರೂಪಾಯಿಯಂತೆ ಖರೀದಿ ಬೆಲೆ ನಿಗದಿಪಡಿಸುವಂತೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಮೈಸೂರು ರೈತರು ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೇ ಹಾಲಿನ ದರವನ್ನು ಲೀಟರ್‌ಗೆ ₹ 2 ಹೆಚ್ಚಿಸಿದ್ದರೂ, ಮೈಸೂರಿನ ರೈತರು ಖರೀದಿ ದರವನ್ನು ಲೀಟರ್‌ಗೆ ₹ 40 ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ (KRRS) ಕಾರ್ಯಕರ್ತರು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮಂಡ್ಯದಲ್ಲಿ ಹಾಲು ಉತ್ಪಾದಕರು ಲೀಟರ್‌ಗೆ ₹31 ರೂಪಾಯಿ ಪಡೆಯುತ್ತಿದ್ದು, ಪ್ರತಿ ಲೀಟರ್‌ಗೆ ₹40ಕ್ಕೆ ಏರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೆಆರ್‌ಆರ್‌ಎಸ್‌ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮನವಿ ಪತ್ರ ಸಲ್ಲಿಸಿದರು. ಕಬ್ಬಿನ ದರವನ್ನು ಟನ್‌ಗೆ ₹4 ಸಾವಿರ ನಿಗದಿಪಡಿಸಬೇಕು. ಸರ್ಕಾರವು ರಾಜ್ಯ ಸಲಹಾ ಬೆಲೆಯನ್ನು ತಕ್ಷಣವೇ ಘೋಷಿಸಬೇಕು. ರಾಜ್ಯಾದ್ಯಂತ ಬೆಳೆಗಾರರಿಗೆ ಬೆಂಬಲ ಬೆಲೆಯಾಗಿ ಭತ್ತಕ್ಕೆ ಕ್ವಿಂಟಾಲ್ 500 ರೂಪಾಯಿ ನಿಗದಿ ಮಾಡಬೇಕು ಹಾಗೂ ಎಂಎಸ್‌ಪಿ ದರದಲ್ಲಿ ಭತ್ತ, ರಾಗಿ, ಜೋಳಕ್ಕೆ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.  
-------- 

ಕೇಂದ್ರ ಸರ್ಕಾರವು ಗೋಧಿ ಬೆಲೆಯನ್ನು ನಿಯಂತ್ರಿಸುತ್ತಿಲ್ಲ. ಕೇವಲ ಸರಕುಗಳನ್ನು ಪರಿಶೀಲಿಸುತ್ತಿರುವುದಾಗಿ ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ಆಹಾರ ಧಾನ್ಯಗಳ ಬೆಲೆ ಏರಿಕೆ ಆಗಿದೆ. ಆದರೆ,ಅಕ್ಕಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಮೇ ತಿಂಗಳಿನಲ್ಲಿ ಗೋಧಿ ರಫ್ತಿಗೆ ನಿಷೇಧ ಹೇರಿದ ನಂತರ ಚಿಲ್ಲರೆ ವ್ಯಾಪಾರದಲ್ಲಿ ಗೋಧಿ ಬೆಲೆ ಶೇ.7ರಷ್ಟು ಏರಿಕೆ ಆಗಿತ್ತು.
--------
5. ಮಂಗಳವಾರ ಕರಾವಳಿಯ ಕೆಲವು ಕಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ ಆಗಿರುವುದು ವರದಿ ಆಗಿದೆ. ಭಾಗಮಂಡಲ, ಕೊಪ್ಪ, ಬಾಳೆಹೊನ್ನೂರು, ಶಿಗ್ಗಾಂವಿ, ಸುಬ್ರಮಣ್ಯ, ಧಾರವಾಡ ಹಾಗೂ ಸಕಲೇಶಪುರದಲ್ಲಿ ಧಾರಾಕಾರ ಮಳೆ ಆಗಿದೆ. ಬುಧವಾರ ಹಾಗೂ ಗುರುವಾರ ಕರಾವಳಿಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
--------

ದೇಶದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ಎಂದೇ ಖ್ಯಾತಿ ಗಳಿಸಿರುವ ದೆಹಲಿಯ ಏಮ್ಸ್ ಸರ್ವರ್ ಹ್ಯಾಕ್ ಆಗಿದೆ. ಇದರಿಂದ ಸಾವಿರಾರು ರೋಗಿಗಳ ಮೇಲೆ ಪರೋಕ್ಷ ಪರಿಣಾಮ ಬೀರುತ್ತಿದೆ. ಸಂಪೂರ್ಣ ಆಸ್ಪತ್ರೆಯ ಸಾಫ್ಟ್‌ವೇರ್‌ಗಳು ಮಂದಗತಿಯಲ್ಲಿ ಕಾರ್ಯ
ನಿರ್ವಹಿಸುತ್ತಿದ್ದು, ರೋಗಿಗಳ ಡೇಟಾ ನಿರ್ವಹಣೆ ಮಾಡುವುದು ಸವಾಲಾಗಿದೆ. ಸದ್ಯ ಹ್ಯಾಕರ್‌ಗಳು ಏಮ್ಸ್‌ನಿಂದ 200 ಕೋಟಿ ರೂ. ಕ್ರಿಪ್ಟೋ ಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ದೆಹಲಿ ಪೊಲೀಸರು ಅಲ್ಲೆಗೆಳೆದಿದ್ದು, ಹ್ಯಾಕರ್‌ಗಳು ಯಾವುದೇ ರೀತಿಯ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ.
ಈ ಬೆಳವಣಿಗೆಯಿಂದ ಆಸ್ಪತ್ರೆಯ ಒಪಿಡಿ ಮತ್ತು ಐಪಿಡಿಗೆ ಬರುವ ರೋಗಿಗಳು ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಸರ್ವರ್ ಸ್ಥಗಿತದಿಂದಾಗಿ ಆನ್‌ಲೈನ್ ಅಪಾಯಿಂಟ್‌ಮೆಂಟ್ ಬುಕಿಂಗ್ ಮತ್ತು ದೂರವಾಣಿ ಸೇವೆಯಂತಹ ಡಿಜಿಟಲ್ ಸೇವೆಗಳ ಮೇಲೂ ಪರಿಣಾಮ ಬೀರಿದೆ. ಸಂಪರ್ಕ ವ್ಯವಸ್ಥೆ ಸಂಪೂರ್ಣ ದೋಷದಿಂದ ಮುಕ್ತವಾಗಲು ಕನಿಷ್ಠ 5 ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.  
--------
7. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನ 95ನೇ ಆವೃತ್ತಿಯಲ್ಲಿ
ನಮ್ಮ ದೇಶವು ವಿಶ್ವದ ಅತ್ಯಂತ ಹಳೆಯ ಸಂಪ್ರದಾಯಗಳಿಗೆ ನೆಲೆಯಾಗಿದೆ ಎಂದಿದ್ದಾರೆ.
ನಮ್ಮ ಸಂಪ್ರದಾಯಗಳು, ಸಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದು, ಅದನ್ನು ಉತ್ತೇಜಿಸುವುದು ನಮ್ಮ ಜವಾಬ್ದಾರಿಯಾಗಿದೆ. ಭಾರತೀಯ ಸಂಗೀತವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಮೆಚ್ಚುಗೆ ಗಳಿಸಿದೆ ಎಂದು ಶ್ಲಾಘಿಸಿದ್ದಾರೆ. ಸಂಗೀತವು ದೇಹಕ್ಕೆ ಮಾತ್ರ ವಿಶ್ರಾಂತಿ ನೀಡುವುದಿಲ್ಲ, ಮನಸ್ಸಿಗೆ ಸಂತೋಷವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
--------
8. ಮಹಾರಾಷ್ಟ್ರ ರಾಜ್ಯ ಮೀಸಲು ಪೊಲೀಸ್ ಪಡೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು,18 ಸಾವಿರ ಹುದ್ದೆಗೆ 11 ಲಕ್ಷಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿರುವುದು ವರದಿ ಆಗಿದೆ. ಮಹಾರಾಷ್ಟ್ರದ 18,331 ಕಾನ್‌ಸ್ಟೆಬಲ್‌, ಚಾಲಕ ಹಾಗೂ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ 11 ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸಾವಿರಾರು ಜನ ಒಮ್ಮೆಗೆ ಅರ್ಜಿ ಸಲ್ಲಿಸಿರುವುದರಿಂದ ಸರ್ಕಾರಿ ವೆಬ್‌ಪೋರ್ಟಲ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.  
--------
9. ಜಗತ್ತಿನ ಅರ್ಧದಷ್ಟು ಜನ ಬಾಯಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ.
ಬಾಯಿ ಕ್ಯಾನ್ಸರ್‌, ವಸಡಿನ ಸಮಸ್ಯೆ ಹಾಗೂ ಹಲ್ಲುಗಳಲ್ಲಿ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು ಇಂತಹದೊಂದು ಆಘಾತಕಾರಿ ವಿಷಯವನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿದೆ. ಇನ್ನು ಆರ್ಥಿಕವಾಗಿ ಹಿಂದುಳಿದವರು ಬಾಯಿಗೆ ಸಂಬಂಧಿಸಿದ ಚಿಕಿತ್ಸೆಗಳಿಂದ ವಂಚಿತರಾಗುತ್ತಿದ್ದಾರೆ. ವಿಶ್ವದ ಎಲ್ಲೆಡೆಯೂ ಒಂದೇ ಮಾದರಿಯ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದು ವರದಿ ಮಾಡಿದೆ. 
ಜಗತ್ತಿನ ಜನಸಂಖ್ಯೆಯ ಪೈಕಿ 350 ಕೋಟಿ ಜನರು ಹಲ್ಲಿನ ಸೋಂಕು, ವಸಡಿನ ಊತ ಹಾಗೂ ಬಾಯಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಮೂಲಹಂತದಲ್ಲೇ ಬಾಯಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಸಿಗದೆ ಇರುವುದರಿಂದ ಮುಂದೆ ಇದು ಗಂಭೀರವಾದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.   
--------
10.  ಕಲಬುರಗಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆಗೆ ನೆಟೆ ರೋಗ ತಗುಲಿದ್ದು, ಪ್ರತಿ ಎಕರೆಗೆ 15 ಸಾವಿರ ರೂಪಾಯಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಸಮೀಕ್ಷೆ ಮಾಡಿ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನೆಟೆ ರೋಗದಿಂದ ಒಣಗಿದ ತೊಗರಿ ಸಸಿಗಳನ್ನು ಪ್ರದರ್ಶಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಳೆದ ಎರಡು ವರ್ಷಗಳ ಮಳೆಯಿಂದಾಗಿ ಈಗಾಗಲೇ ತೊಗರಿ ಬೆಳೆಗಾರರು ನಷ್ಟ ಅನುಭವಿಸಿದ್ದೇವೆ. ಇದೀಗ ಅಲ್ಪ ಬೆಳೆಗೂ ನೆಟೆ ರೋಗ ತಗುಲಿದೆ. ಮಣ್ಣಿನಲ್ಲಿ ತೇವಾಂಶದಿಂದ ಬೆಳೆ ಹಾನಿಯಾಗುತ್ತಿದ್ದು, ನಿಯಂತ್ರಿಸುವುದು ಸವಾಲಾಗಿದೆ ಎಂದಿದ್ದಾರೆ. ಸಂಕಷ್ಟದಲ್ಲಿ ಇರುವ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಬೇಕು. ಫಸಲ್ ಬಿಮಾ ಯೋಜನೆಯಡಿ ವಿಮಾ ಮಾಡಿಸಿದ ಬೆಳೆಗಾರರ ಜಮೀನುಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

--------
11. ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ಕೆಲವರಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆ. ಆದರೆ, ಕೋವಿಡ್‌ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.

ಚೀನಾದಲ್ಲಿ ಸಾಮೂಹಿಕ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಒಬ್ಬರು ಸೋಂಕಿತರಾದರೆ ಕಟ್ಟಡದ ಎಲ್ಲರನ್ನೂ ಅಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಮ್ಮಲ್ಲಿ ಈ ಮಾದರಿಯ  ಪರೀಕ್ಷಾ ಪದ್ಧತಿಯನ್ನು ಕೈಬಿಡಲಾಗಿದೆ. ಕೆಲವರಲ್ಲಿ ಸೋಂಕು ದೃಢಪಟ್ಟರೂ, ಸೋಂಕಿತರು ಲಕ್ಷಣ ರಹಿತರಾಗಿರುತ್ತಿದ್ದಾರೆ. ಹೀಗಾಗಿ, ಸೋಂಕಿತರ ಸಂಪರ್ಕಿತರಿಗೆ ಪರೀಕ್ಷೆ ಮಾಡುತ್ತಿಲ್ಲ. ಪರೀಕ್ಷೆಗಳ ಸಂಖ್ಯೆಯನ್ನೂ ಇಳಿಕೆ ಮಾಡಲಾಗಿದೆ ಎಂದಿದ್ದಾರೆ.   
--------
12. ಬಾಗಲಕೋಟೆಯ 58 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ 187 ನಾಣ್ಯಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ದ್ಯಾಮಣ್ಣ ಎಂಬವರು ತೀವ್ರ ಹೊಟ್ಟೆ ನೋವಿನಿಂದ ಬಾಗಲಕೋಟೆಯ ಹಾನಗಲ್ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದ ವೈದ್ಯರಿಗೆ ಹೊಟ್ಟೆಯಲ್ಲಿ ನಾಣ್ಯಗಳಿರುವುದು ಕಂಡು ಬಂದಿತ್ತು.  ವೈದ್ಯರಾದ ಡಾ. ಈಶ್ವರ ಕಲಬುರಗಿ, ಡಾ. ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ. ಅರ್ಚನಾ, ಡಾ.ರೂಪಾ ಅವರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ಕಳೆದ ಕೆಲವು ದಿನಗಳಿಂದ ದ್ಯಾಮಣ್ಣ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು,  ನಾಣ್ಯಗಳನ್ನು ನುಂಗುತ್ತಿದ್ದರು ಎನ್ನಲಾಗಿದೆ.   
--------    
13. FICCIಯು 2022ನೇ ಸಾಲಿನ ಸುಸ್ಥಿರ ಕೃಷಿ ಪ್ರಶಸ್ತಿ ಪ್ರದಾನ ಹಾಗೂ ಶೃಂಗಸಭೆಯ 2ನೇ ಆವೃತ್ತಿಯನ್ನು ನವದೆಹಲಿಯದ ಫೆಡರೇಷನ್‌ ಹೌಸ್‌ನಲ್ಲಿ ನವೆಂಬರ್‌ 30ಕ್ಕೆ ಆಯೋಜಿಸಿದೆ. ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಭಾಗವಹಿಸಲಿದ್ದಾರೆ. ಸುಸ್ಥಿರ ಕೃಷಿ ಅಭಿವೃದ್ಧಿಯನ್ನು ಉತ್ತೇಜಿಸುವುದು. ರೈತರ ಆದಾಯವನ್ನು ಸುಧಾರಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.
--------

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಗ್ರಾಮೀಣ ಕೃಷಿ ಹವಾಮಾನ ಸೇವಾ ಘಟಕ ಹಾಗೂ ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನವೆಂಬರ್‌ 30ರಂದು ರೈತರಿಗೆ ಆನ್‌ಲೈನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆನ್‌ಲೈನ್‌ ತರಬೇತಿಯಲ್ಲಿ ಹವಾಮಾನ ಮುನ್ಸೂಚನೆ ಮತ್ತು ಮೆಣಸಿನಕಾಯಿ ಬೆಳೆಯಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು.  
--------    

Published On: 30 November 2022, 04:45 PM English Summary: The doctor extracted 187 coins from the old man's stomach!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.