1. ಸುದ್ದಿಗಳು

ದೇಶದ ಅತಿದೊಡ್ಡ ಕೃಷಿ ಮಹಾಕುಂಭಕ್ಕೆ ದಿನಗಣನೆ ಶುರು! ಇಲ್ಲಿದೆ ಸಂಪೂರ್ಣ ಮಾಹಿತಿ

Maltesh
Maltesh

ದೇಶದ ರೈತರಿಗೆ ಹೊಸ ಗುರುತನ್ನು ನೀಡಲು ಕೃಷಿ ಜಾಗರಣ ಪ್ರಾರಂಭಿಸಿದ 'ದಿ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ 2023' ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ. 

ಡಿಸೆಂಬರ್‌ 6,7,8 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ'MFOI ಕಿಸಾನ್ ಭಾರತ್ ಯಾತ್ರೆ 2023-24' ಗೂ ಕೂಡ ಸಚಿವರು ಚಾಲನೆ ನೀಡಲಿದ್ದಾರೆ. 

ದೇಶಾದ್ಯಂತ ಕೋಟ್ಯಾಧಿಪತಿ ರೈತರ ಅವಿಸ್ಮರಣೀಯ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ದೆಹಲಿಯ ಪುಸಾ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ, ಕೃಷಿ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರದರ್ಶನಗಳು, ವ್ಯಾಪಾರ ಅವಕಾಶಗಳು ಮತ್ತು ಸೆಮಿನಾರ್‌ಗಳನ್ನ ಸಹ ಆಯೋಜಿಸಲಾಗಿದೆ.

ಇದರಲ್ಲಿ ಖ್ಯಾತ ಉದ್ಯಮಿಗಳು, ಕೃಷಿ ಪರಿಣಿತರು, ವಿಜ್ಞಾನಿಗಳು, ಪ್ರಗತಿಪರ ರೈತರ ಜೊತೆಗೆ ಅನೇಕ ದೊಡ್ಡ ಸಂಸ್ಥೆಗಳು ಸಹ ತಮ್ಮ ಭಾಗವಹಿಸುವಿಕೆಯನ್ನು ಈಗಾಗಲೇ ಖಚಿತ ಪಡಿಸಿವೆ.

ದೇಶದ ಅತಿದೊಡ್ಡ ಕೃಷಿ ಮಹಾಕುಂಭವನ್ನು ಆಯೋಜಿಸುತ್ತಿರುವ ಕೃಷಿ ಜಾಗರಣ ತಂಡಕ್ಕೆ ಬೆನ್ನು ತಟ್ಟಿ ಮಹೀಂದ್ರಾ ಟ್ರ್ಯಾಕರ್ಸ್‌ ಟೈಟಲ್‌ ಸ್ಪಾನ್ಸ್‌ರ್‌ಶಿಪ್‌ ಪಡೆದುಕೊಂಡಿದೆ. ಇನ್ನು ಕೋರ್‌ ಮಂಡಲ್‌, ಧಾನುಕಾ, ಸೋಮಾನಿ, FMC ಸ್ಪಾನ್ಸರ್‌ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಬ್ಯಾಂಕಿಂಗ್‌ ಪಾರ್ಟ್ನರ್‌ ಆಗಿ ದೇಶದ ದೊಡ್ಡ ಬ್ಯಾಂಕ್‌ SBI ಕೈ ಜೋಡಿಸಿದ್ದು, Institutional ಪಾರ್ಟ್ನರ್‌ ಆಗಿ MANAGE ಸೇರ್ಪಡೆಯಾಗಿದೆ.

Published On: 30 November 2023, 02:37 PM English Summary: The countdown to the country's largest agricultural Mahakumbha has begun!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.