1. ಸುದ್ದಿಗಳು

ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆ!

Hitesh
Hitesh
Human Remains As Fertilizer

ಮರಳಿ ಮಣ್ಣಿಗೆ ನಮ್ಮಲ್ಲಿ ಸದಾ ಚಾಲ್ತಿಯಲ್ಲಿರುವ ಮಾತು. ಭೂವಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಮರಳಿ ಮಣ್ಣಿಗೆ ಸೇರುವುದರೊಂದಿಗೆ ಜನನ- ಮರಣದ ಅಧ್ಯಯನ ಮುಗಿಯುತ್ತದೆ. 

ಇದೀಗ ವಿದೇಶದಲ್ಲಿ ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆಯೊಂದು ಚರ್ಚೆಯ ಮುನ್ನೆಲೆಗೆ ಬಂದಿದೆ. ಅದೇ Human Remains as compost ಎನ್ನುವುದು.

ಮನುಷ್ಯರು ಕಾಲವಾದ ನಂತರದಲ್ಲಿ ಅವರ ಶವವನ್ನು ಗೊಬ್ಬರವಾಗಿ ಪರಿವರ್ತಿಸುವುದಕ್ಕೆ ಈಚೆಗೆ ನ್ಯೂಯಾರ್ಕ್ ಅನುಮೋದನೆ ನೀಡಿದೆ. 

ಮನುಷ್ಯರ ಶವವನ್ನು ಗೊಬ್ಬರವನ್ನಾಗಿಸುವ ಕಾಲವೂ ಬಂದಾಗಿದೆ. ಆಗಿದ್ದರೆ, ಮನುಷ್ಯರ ಶವವನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದು ಎಂದರೇನು, ಇದು ಎಲ್ಲೆಲ್ಲಿ ಪ್ರಾರಂಭವಾಗಿದೆ. ಇದರಿಂದ ಪರಿಸರಕ್ಕೆ ಲಾಭವಾಗುವುದು ಹೇಗೆ, ಭಾರತದಲ್ಲಿ ಇದೆಲ್ಲ ಸಾಧ್ಯವೇ ಎನ್ನುವುದರ ಕುರಿತು (ವಿಡಿಯೋದಲ್ಲಿ ನೋಡೋಣ) ಈ ಲೇಖದಲ್ಲಿ ಸಮಗ್ರವಾಗಿದೆ.   

pan card update online ಇನ್ಮುಂದೆ ಸರ್ಕಾರಿ ಸಂಸ್ಥೆಗಳ ಡಿಜಿಟಲ್ ವ್ಯವಸ್ಥೆಗೆ ಸಾಮಾನ್ಯ ಗುರುತಿನ ಚೀಟಿಯಾಗಿ ಪ್ಯಾನ್ ಕಾರ್ಡ್ !

ಋತುಚಕ್ರ ತಿರುಗುವುದು; ಕಾಲನೆದೆ ಮರುಗುವುದು ಮೃತನ ಮಣ್ಣಿನಿಂದ ಹೊಸ ಹುಲ್ಲು ಮೊಳೆಯುವುದು, ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ, ಸತತ ಕೃಷಿಯೋ ಈ ಪ್ರಕೃತಿ ಮಂಕುತಿಮ್ಮ ಡಿವಿಜಿ ಅವರ ಸಾಲುಗಳಿವು. ಋತುಗಳ ಚಕ್ರ ತಿರುಗುತ್ತಲೇ ಇರುತ್ತದೆ.

ಕಾಲನ ಎದೆಯಲ್ಲಿ ಮರುಕ ಮೂಡುತ್ತದೆ. ಸತ್ತವನ ದೇಹದ ಮಣ್ಣಿನಲ್ಲಿ ಹೊಸ ಹುಲ್ಲು ಚಿಗುರುತ್ತದೆ.

ಭೂವಿ ಗರ್ಭಧರಿಸಿದಾಗ ಮತ್ತೆ ಜೀವದ ಉದಯ. ಹೀಗೆ ಪ್ರಕೃತಿಯಲ್ಲಿ ನಿರಂತರ ಕೃಷಿ ನಡೆಯುತ್ತಲೇ ಇರುತ್ತದೆ ಎನ್ನುವ ಅರ್ಥ ಬಿಂಬಿಸುತ್ತದೆ.

ಮೃತನ ಮಣ್ಣಿನಿಂದ ಹೊಸ ಹುಲ್ಲು ಮೊಳೆಯುವುದು ಎನ್ನುವುದಿದೆಯಲ್ಲ ಅಂತಹದ್ದೇ ಚರ್ಚೆ ಈಗ ನಡೆಯುತ್ತಿರುವುದು.

Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್‌ ಎಂದರೇನು, ಯಾರೆಲ್ಲ ಇದಕ್ಕೆ ಅರ್ಹರು ಇಲ್ಲಿದೆ ಸಂಪೂರ್ಣ ಮಾಹಿತಿ!  

ಮನುಷ್ಯರ ಶವವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ನ್ಯೂಯಾರ್ಕ್ಈಚೆಗೆ ಅನುಮೋದನೆ ನೀಡಿದೆ. ಈ ರೀತಿ ಮಾನವರ ಶವವನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡಲು ಅನುಮೋದನೆ ನೀಡಿದ ಅಮೆರಿಕ ಸಂಯುಕ್ತ ಸಂಸ್ಥಾನದ ಆರನೇ ರಾಜ್ಯ ನ್ಯೂಯಾರ್ಕ್ ಆಗಿದೆ.

ಈಗ ಅನುಮೋದನೆ ಪಡೆದ ಪ್ರದೇಶಗಳಲ್ಲಿ ವ್ಯಕ್ತಿ ಸಾವನ್ನಪ್ಪಿದ ನಂತರ ಅವರ ದೇಹವನ್ನು ಗೊಬ್ಬರವಾಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ.

ಇದು ಶವಸಂಸ್ಕಾರ ಅಥವಾ ಸಮಾಧಿ ಮಾಡುವುದಕ್ಕೆ ಪರ್ಯಾಯ ಎಂದು ಹೇಳಲಾಗಿದೆ.

ಬಜೆಟ್ 2023: ಮಹಿಳೆಯರಿಗೆ ಉಳಿತಾಯ ಖಾತೆಯ ಮೂಲಕ 7.5% ಬಡ್ಡಿ!  

The concept of staying with loved ones even after death in the form of manure!

ಇದೆಲ್ಲವನ್ನು ಕೇಳಿದರೆ, ಜಗತ್ತು ಈಗ ಈ ಹಿಂದಿನಷ್ಟು ಭಾವನಾತ್ಮಕವಾಗಿಲ್ಲ. ಮಾನುಷ್ಯರ ಸಂಬಂಧಕ್ಕೆ ಮೌಲ್ಯ ನೀಡುತ್ತಿಲ್ಲ ಎನ್ನುವ ಪ್ರಶ್ನೆಗಳು ಮೂಡಬಹುದು.ಆದರೆ, ಇದರಲ್ಲಿ ಭಾವನಾತ್ಮಕ ಹಾಗೂ ಪರಿಸರ ಕಾಳಜಿಯೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶದಲ್ಲಿ ಹೆಚ್ಚು ಪ್ರಶಸ್ತ್ಯ ನೀಡುವ ಡೆತ್ಕೇರ್ಎಂಬ ಅಂಶವೂ ಸೇರಿದೆ.

ಮರಣದ ನಂತರ ಅವರ ಆಸೆಯಂತೆ ಶವಸಂಸ್ಕಾರ ಮಾಡುವುದು. ಕೆಲವರು ಸಾಂಪ್ರದಾಯಿಕವಾಗಿ ಶವ ಸಂಸ್ಕಾರ ನಡೆಯಬೇಕು ಎಂದು ಇಚ್ಛಿಸಿದರೆ ಇನ್ನೂ ಕೆಲವರು ಯಾವುದೇ ಸಂಪ್ರದಾಯಿಕತೆಯನ್ನೂ ಅನುಸರಿಸದೆ ಶವ ಸಂಸ್ಕಾರ ಮಾಡಿ ಎನ್ನುತ್ತಾರೆ.

ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಈಚೆಗೆ ನಮ್ಮ ಕರುನಾಡಿನ ಶತಮಾನದ ಸಂತ ಎಂದೇ ಪ್ರಸಿದ್ಧರಾಗಿರುವ ಸಿದ್ಧೇಶ್ವರ ಸ್ವಾಮೀಜಿಗಳು. ಬದುಕಿನುದ್ದಕ್ಕೂ ಸರಳತೆಯಲ್ಲೇ ಜೀವಿಸಿದ್ದ ಸಿದ್ಧೇಶ್ವರ ಸ್ವಾಮೀಜಿ ಅವರು ಮರಣದಲ್ಲಿಯೂ ಸರಳತೆಯ ಸಂದೇಶವನ್ನೇ ನೀಡಿದ್ದರು.

ಮಾನವನ ಶವವನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡುವುದರ ಹಿಂದೆಯೂ ಒಂದು ಭಾವನಾತ್ಮಕ ಸಂದೇಶವಿದೆ. ನಮ್ಮ ಮರಣದ ನಂತರವೂ ನಾವು ನಮ್ಮವರೊಂದಿಗೆ ಇರಬೇಕು ಎನ್ನುವ ಭಾವನಾತ್ಮಕ ವಿಚಾರವೂ ಸೇರಿದೆ.

ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: 7ಲಕ್ಷದ ವರೆಗೆ ಆದಾಯ ತೆರಿಗೆ ವಿನಾಯಿತಿ!

The concept of staying with loved ones even after death in the form of manure!

ಏನಿದು human remains as compost , ಇದರಿಂದ ಪರಿಸರ ಮಾಲಿನ್ಯ ತಡೆಯಬಹುದೇ ?

human remains as compost ಸರಳವಾಗಿ ಹೇಳುವುದಾದರೆ, ಮಾನುಷ್ಯರು ಮೃತಪಟ್ಟ ನಂತರದಲ್ಲಿ ಅವರ ಶವವನ್ನು ಕಾಂಪೋಸ್ಟ್ ಅಂದರೆ ಮಣ್ಣು ಮಿಶ್ರಿತ ಗೊಬ್ಬರವನ್ನಾಗಿ ಪರಿವರ್ತಿಸುವುದು. ಮಣ್ಣು ಮಿಶ್ರಿತ ಗೊಬ್ಬರದ ಮಾದರಿ ಎನ್ನಬಹುದು. ಮಾನವನ ಶವವನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡುವುದಕ್ಕೆ 2019ರಲ್ಲಿ ಮೊದಲ ಬಾರಿ ವಾಷಿಂಗ್ಟನ್ ಅನುಮತಿ ನೀಡಿತ್ತು.

ಇದಾದ ನಂತರದಲ್ಲಿ ಅನುಕ್ರಮವಾಗಿ ಕೊಲೊರೊಡೊ, ಒರೆಗಾನ್, ವರ್ಮೊಂಟ್ ಹಾಗೂ ಕ್ಯಾಲಿಪೋರ್ನಿಯಾ ಭಾಗದಲ್ಲಿಯೂ ಸಹ ಮಾನುಷ್ಯರ ಶವವನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದಕ್ಕೆ ಅನುಮತಿ ನೀಡಲಾಗಿದೆ.

ಮನುಷ್ಯರ ಶವವನ್ನು ಗೊಬ್ಬರವಾಗಿ ಪರಿವರ್ತಿಸುವುದು ನೈಸರ್ಗಿಕವಾಗಿ ಪರಿಸರ ಸಂರಕ್ಷಣೆಯೂ ಹೌದು ಎಂದು ಪ್ರತಿಪಾದಿಸಲಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಸೃಷ್ಟಿ ಆಗುತ್ತಿರುವ ಜಾಗದ ಸಮಸ್ಯೆಯ ಕುರಿತೂ ಚಿಂತಿಸುವ ನಿಟ್ಟಿನಲ್ಲಿ ಸಹಕಾರಿ ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ಹವಾಮಾನ ಬದಲಾವಣೆಯಲ್ಲಿ ಹೆಚ್ಚು ಪರಿಣಾಮ ಬೀರುತ್ತಿದ್ದು, ಈ ಮಾದರಿಯ ಪ್ರಕ್ರಿಯೆಯಿಂದಾಗಿ ಸಾಮಾನ್ಯವಾಗಿ ನಡೆಯುವ ಶವಸಂಸ್ಕಾರದಲ್ಲಿ ಉಂಟಾಗುವ ಒಂದು ಟನ್ಇಂಗಾಲದ ಡೈಆಯಕ್ಸೈಡ್ಅನ್ನು ತಪ್ಪಿಸಬಹುದಾಗಿದೆ.

ಹಸಿರುಮನೆ ಪರಿಣಾಮ ಎಂದು ಕರೆಯಲ್ಪಡುವ ವಿದ್ಯಾಮಾನದಲ್ಲಿ ಭೂಮಿಯ ಶಾಖ ಹೆಚ್ಚಾಗುವುದಕ್ಕೆ ಶವ ಸಂಸ್ಕಾರವೂ ಸಹ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ತಜ್ಞರು. ಸಹಜವಾಗಿ ಬಳಸಲಾಗುತ್ತಿರುವ ಶವಸಂಸ್ಕಾರ ವಿಧಾನಗಳಲ್ಲಿ ಶವಪೆಟ್ಟಿಗೆ ಒಳಗೊಂಡಿರುವ ಸಾಂಪ್ರದಾಯಿಕ ಸಮಾಧಿಗಳು ಮರ, ಭೂಮಿ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಸಹ ಬಳಸಲಾಗುತ್ತದೆ.

ಈ ಎಲ್ಲ ಕಾರಣಗಳಿಂದ ಒಬ್ಬ ವ್ಯಕ್ತಿ ತನ್ನ ಮರಣದ ನಂತರ ತನ್ನ ದೇಹವನ್ನು ಮಣ್ಣಾಗಿ ಪರಿವರ್ತಿಸುವುದು ಪ್ರಕೃತಿಯ ಸಹಜ ಭಾಗ ಎನ್ನುವುದು ಮಾನವನ ಶವವನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಕ್ರಿಗೆ ಸಮ್ಮತಿಸುವವರ ಅಭಿಪ್ರಾಯ

ಶವವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಹೇಗೆ ?
ಮನುಷ್ಯರು ಮರಣವನ್ನು ಅಪ್ಪಿದ ನಂತರದಲ್ಲಿ ಅವರ ಶವವನ್ನು ಒಂದು ಕಂಟೇನರ್
ನಲ್ಲಿ ಇರಿಸಲಾಗುತ್ತದೆ. ಅದರಲ್ಲಿ ಒಣಮರದ ಪುಡಿ
, ಅಲ್ಫಾಲ್ಫಾ, ಒಣಗಿದ ಹುಲ್ಲು ಸೇರಿದಂತೆ ಕೆಲವು ನಿರ್ದಿಷ್ಟ ಸಾವಯವ ಔಷಧಿಗಳನ್ನು ಬಳಸಲಾಗುತ್ತದೆ.  ಒಂದು ತಿಂಗಳುಗಳ ಕಾಲ ಯಾವುದೇ ಸಾಂಕ್ರಾಮಿಕವನ್ನು ಕೊಲ್ಲುವ ತಾಪಮಾನದಲ್ಲಿ ಶವವನ್ನು ಇರಿಸಿ, ಗೊಬ್ಬರವನ್ನಾಗಿ ಪರಿವರ್ತನೆ ಮಾಡಲಾಗುತ್ತದೆ.

ಒಟ್ಟಾರೆ ಈ ಪ್ರಕ್ರಿಯೆಗಳು ಕನಿಷ್ಠ ಆರು ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರದಲ್ಲಿ ಅದನ್ನು ಅವರ ಸಂಬಂಧಿಕರಿಗೆ ಅಥವಾ ಆತ್ಮೀಯರಿಗೆ ಈಗಾಗಲೇ ಆಗಿರುವ ಒಪ್ಪಂದದ ಅನುಸಾರ ನೀಡಲಾಗುತ್ತದೆ. ಮಣ್ಣು ಮತ್ತು ಶವದಗೊಬ್ಬರದ ಮಿಶ್ರಿತವನ್ನು ಸಂಬಂಧಪಟ್ಟವರು ಕೈ ತೋಟದಲ್ಲಿ ಬಳಸಬಹುದಾಗಿದೆ.

ಭಾರತದಲ್ಲಿ ಈ ಪರಿಕಲ್ಪನೆ ಅನುಷ್ಠಾನ ಸಾಧ್ಯವೇ ? 

ಭಾರತದಲ್ಲಿ ಈ ಪರಿಕಲ್ಪನೆ ಬಹುಃಶ ಇಂದು ಯಾರೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದೇ ಹೇಳಬಹುದು. ವಿದೇಶಗಳಲ್ಲಿ ಮಾನವನ ಶವವನ್ನು ಗೊಬ್ಬರವನ್ನಾಗಿ ಬೆಳೆಸುವುದನ್ನು ಪ್ರೀತಿಯ ಪ್ರಾಯೋಗಿಕತೆಯಾಗಿಯೂ, ಡೆತ್ ಕೇರ್ನ ಭಾಗವಾಗಿಯೂ ನೋಡಲಾಗುತ್ತಿದೆ. ಆದರೆ, ಈ ಪರಿಕಲ್ಪನೆಗೆ ನ್ಯೂಯಾರ್ಕ್ನಲ್ಲೇ ಅಸಮಾಧಾನ ಮತ್ತು ವಿರೋಧಗಳು ವ್ಯಕ್ತವಾಗಿವೆ. ಮಾನವರ ದೇಹಗಳನ್ನು “ಮನೆಯ ತ್ಯಾಜ್ಯ” ಎಂದು ಪರಿಗಣಿಸಬಾರದು ಎಂದು ಕೆಲವು ಧಾರ್ಮಿಕ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ನಮ್ಮ ದೇಶದಲ್ಲಿ ಎಲ್ಲ ಧರ್ಮಗಳಲ್ಲಿಯೂ ಕಾಲವಾದವರ ಅಂತ್ಯ ಸಂಸ್ಕಾರವನ್ನು ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ಮಾಡಬೇಕು ಎನ್ನುವ ನಿರೀಕ್ಷೆಗಳಿವೆ. ಸಂಸ್ಕಾರದಲ್ಲಿ ಲೋಪವಾಗಬಾರದು. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಬೇಕು ಎನ್ನುವ ಅಲಿಖಿತ ನಿಯಮಗಳಿವೆ.

ಸಂಪ್ರದಾಯದ ಹೊರತಾಗಿ ನಾವ್ಯಾರೂ ನಮ್ಮ ಆತ್ಮೀಯರು ಕಾಲವಾದ ನಂತರದಲ್ಲಿ ಅವರ ಶವವನ್ನು ಗೊಬ್ಬರವಾಗಿ ಪರಿವರ್ತಿಸಿ ಬಳಸಿಕೊಳ್ಳುವಷ್ಟು ಮಾನಸಿಕವಾಗಿ ಸಿದ್ಧರಾಗಿಲ್ಲ ಎನ್ನುವುದಂತೂ ಸತ್ಯ. 

Published On: 04 February 2023, 02:18 PM English Summary: The concept of staying with loved ones even after death in the form of manure!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.