1. ಸುದ್ದಿಗಳು

ಸುಕನ್ಯಾ ಸಮೃದ್ಧಿ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ಜಮೆ ಮಾಡಿ 2.63 ಲಕ್ಷ ಪಡೆಯಿರಿ

ಸುಕನ್ಯಾ ಸಮೃದ್ಧಿ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ಜಮೆ ಮಾಡಿ 2.63 ಲಕ್ಷ ಪಡೆಯಬಹುದು. ಹೌದು ಪ್ರತಿ ವರ್ಷ 6 ಸಾವಿರ ರೂಪಾಯಿ ಹಣವನ್ನು 15 ವರ್ಷ ಜಮೆ ಮಾಡಿದರೆ ಸಾಕು, 21ನೇ ವರ್ಷಕ್ಕೆ ಮಗುವಿನ ಶಿಕ್ಷಣಕ್ಕೆ ಅಥವಾ ಮದುವೆಯ ಸಂದರ್ಭದಲ್ಲಿ  2.63 ಲಕ್ಷ ರೂಪಾಯಿ ಹಣ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಸಂಪೂರ್ಣ ಮಾಹಿತಿ.

ಹೆಣ್ಣು ಮಗುವಿಗೆ 10 ವರ್ಷ ತುಂಬಿದ ಮೊದಲೇ ಅವಳು ಹುಟ್ಟಿನಿಂದ ಯಾವುದೇ ಸಮಯದವರೆಗೆ ಪೋಷಕರು ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ ಮುಂಚೆ ಇದ್ದ 1000 ರೂಪಾಯಿ ವಾರ್ಷಿಕ ಕನಿಷ್ಠ ಕಂತಿನ ಮೊತ್ತವನ್ನು ಇತ್ತೀಚೆಗೆ 250 ಕ್ಕೆ ಇಳಿಸಲಾಗಿದೆ. ಖಾತೆದಾರರು ವರ್ಷಕ್ಕೆ ಕೇವಲ 250 ರೂಪಾಯಿ ಪಾವತಿಸುವ ಮೂಲಕ ಖಾತೆಯನ್ನು ಚಾಲ್ತಿಯಲ್ಲಿಡಬಹುದು.

ಸುಕನ್ಯಾ ಸಮೃದ್ಧಿ ಯೋಜನೆಯಡಿ ಪ್ರತಿವರ್ಷ 6 ಸಾವಿರ ರೂಪಾಯಿ ಜಮೆ ಮಾಡಿದರೆ 15 ವರ್ಷಗಳವರೆಗೆ 90 ಸಾವಿರ ರೂಪಾಯಿ ಆಗುತ್ತದೆ. ನಂತರ ಐದು ಆರು ವರ್ಷಗಳ ಕಾಲ ಕಟ್ಟಬೇಕಾಗಿಲ್ಲ. ಈ ಹಣಕ್ಕೆ ಒಟ್ಟು 1,73,725 ರೂಪಾಯಿ ಬಡ್ಡಿಯಾಗುತ್ತದೆ. ಜಮೆಮಾಡಿದ 90000 ಮತ್ತು ಬಡ್ಡಿ 1,73,725 ರೂಪಾಯಿ ಸೇರಿ ಒಟ್ಟು 2,63,723 ರೂಪಾಯಿ ಸಿಗುತ್ತದೆ. ಈ ಹಣಕ್ಕೆ ಆದಾಯ ತೆರಿಗೆ ಕಾಯ್ದೆ 1961 ರ 80 ಸಿ ಸೆಕ್ಷನ್ ಅಡಿ ತೆರಿಗೆ ವಿನಾಯಿತಿ ನೀಡಲಾಗಿದೆ.

ಎಷ್ಚು ಖಾತೆ ತೆರೆಯಬಹುದು:

ಸುಕನ್ಯಾ ಸಮೃದ್ಧಿ ಯೋಜನೆಯಡಿ ಪಾಲಕರು ಗರಿಷ್ಠ ಎರಡು ಖಾತೆಗಳನ್ನು ತೆರೆಯಬಹುದು. ಅಂದರೆ, ಪ್ರತಿ ಒಬ್ಬ ಮಗಳಿಗೆ ಒಂದು ಖಾತೆಯಂತೆ ಗರಿಷ್ಠ ಇಬ್ಬರು ಪುತ್ರಿಯರಿಗೆ ಖಾತೆ ತೆರೆಯಬಹುದು. ಒಂದು ವೇಳೆ ಮೊದಲ ಅಥವಾ ಎರಡನೆಯ ಹೆರಿಗೆಯಿಂದ ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಈ ಯೋಜನೆಯು ಪೋಷಕರಿಗೆ ಮೂರನೇ ಖಾತೆ ತೆರೆಯಲು ಅನುವು ಮಾಡಿಕೊಡುಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ ಅರ್ಹತಾ ಮಾನದಂಡ:

ಹೆಣ್ಣು ಮಕ್ಕಳು ಮಾತ್ರ ಸುಕನ್ಯಾ ಸಮೃದ್ಧಿ ಖಾತೆಯನ್ನು ಹೊಂದಲು ಅರ್ಹರಾಗಿದ್ದಾರೆ ಖಾತೆ ತೆರೆಯುವ ಸಮಯದಲ್ಲಿ, ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ಇರಬೇಕು. ಖಾತೆ ತೆರೆಯುವಾಗ, ಹೆಣ್ಣು ಮಗುವಿನ ವಯಸ್ಸಿನ ಪುರಾವೆ ಕಡ್ಡಾಯವಾಗಿದೆ.

ಹಣ ಪಾವತಿಯ ಗರಿಷ್ಠ ಕಾಲಾವಧಿ:

ಪಾಲಕರು ಮಗಳ ಹೆಸರಿನ ಮೇಲೆ ಖಾತೆ ತೆರೆದ 14 ವರ್ಷಗಳವರೆಗೆ ಖಾತೆಗೆ ಕಂತಿನ ಹಣ ಪಾವತಿಸಬಹುದು (ಒಟ್ಟು 15 ಕಂತುಗಳಾಗುತ್ತವೆ). ಈ ಅವಧಿಯ ನಂತರ ಸರ್ಕಾರವೇ ಖಾತೆಯಲ್ಲಿ ಹಣಕ್ಕೆ ಬಡ್ಡಿಯನ್ನು ಜಮೆ ಮಾಡುತ್ತ ಹೋಗಲಾಗುತ್ತದೆ.

ಖಾತೆ ತೆರೆಯಲು ಬೇಕಾದ ದಾಖಲೆಗಳು : 

 ಖಾತೆ ಆರಂಭಿಸುವ ಅರ್ಜಿ ಫಾರಂ - ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ - ಗುರುತಿನ ದಾಖಲೆ, ವಿಳಾಸದ ಪುರಾವೆ, ಪಾಲಕರ ಆಧಾರ್ ಕಾರ್ಡ್,

ಸುಕನ್ಯಾ ಸಮೃದ್ಧಿ ಖಾತೆಯನ್ನು ಎಲ್ಲಿ ತೆರೆಯಬಹುದು:

ಅಂಚೆ ಕಚೇರಿ ಶಾಖೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು. ಅಥವಾ ದೇಶದ ಪ್ರಮುಖ ಬ್ಯಾಂಕ್ ಬ್ಯಾಂಕುಗಳಲ್ಲಿಯೂ ತೆರೆಯಬಹುದು.

ತೆರಿಗೆ ವಿನಾಯಿತಿ:

 ಆದಾಯ ತೆರಿಗೆ ಕಾಯ್ದೆ 1961 ರ 80 ಸಿ ಸೆಕ್ಷನ್ ಅಡಿ ತೆರಿಗೆ ವಿನಾಯಿತಿ ನೀಡಲಾಗಿದ್ದು ಸುಕನ್ಯಾ ಸಮೃದ್ಧಿ ಯೋಜನೆಯ ಬಹು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

Published On: 03 May 2021, 09:14 AM English Summary: sukanya samriddhi yojana

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.