1. ಸುದ್ದಿಗಳು

PVC ಪೈಪ್‌ ಹಾಗೂ ಮೋಟಾರ್‌ ಕೊಳ್ಳುವ ರೈತರಿಗೆ ಭರ್ಜರಿ ಸಹಾಯಧನ..ಇಲ್ಲಿದೆ Details

KJ Staff
KJ Staff

ತಮಿಳುನಾಡು ಆದಿ ದ್ರಾವಿಡರ್ ಹೌಸಿಂಗ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (TAHDCO) ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದದೆ. ಚೆನ್ನೈನಲ್ಲಿ PVC ಪೈಪ್‌ಗಳು ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಖರೀದಿಸಲು ಆದಿ ದ್ರಾವಿಡರ್ (ಬುಡಕಟ್ಟು) ರೈತರಿಗೆ ಸಹಾಯಧನ ನೀಡಲು ಸಿದ್ಧವಾಗಿದೆ. ಸಬ್ಸಿಡಿಗಳ ರೂಪದಲ್ಲಿ ಬೋರ್ಡ್‌ ಸಹಾಯಕ್ಕೆ ನಿಂತಿದ್ದು, ಪಿವಿಸಿ ಪೈಪ್‌ಗಳಿಗೆ 15,000 ವರೆಗೆ ಮತ್ತು ವಿದ್ಯುತ್ ಮೋಟರ್‌ಗೆ 10,000 ರೂ. ವರೆಗೆ ಸಬ್ಸಿಡಿ ನೀಡೋದಾಗಿ ಬೋರ್ಡ್‌ ತಿಳಿಸಿದೆ.

ಇದನ್ನೂ ಓದಿ:Income tax ತೆರಿಗೆಯಿಂದ ತುಂಬಿದ ಸರ್ಕಾರದ ಖಜಾನೆ, ಎಷ್ಟಂತಿರಾ ಇಲ್ಲಿದೆ Details.

TAHDCO ಫಾರ್ಮರ್ ಸಬ್ಸಿಡಿ: ಅರ್ಹತೆ
TAHDCO ಪ್ರಕಾರ, ಆದಿ ದ್ರಾವಿಡ ರೈತರಿಗೆ ಮತ್ತು ಡಿನೋಟಿಫೈಡ್ ಬುಡಕಟ್ಟುಗಳಿಗೆ ಮಾತ್ರ ಈ ಸಬ್ಸಿಡಿಗಳು ಲಭ್ಯವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಣ್ಣ ಮತ್ತು ಅತಿ ಸಣ್ಣ ರೈತರು TAHDCO ಗೆ ಅರ್ಹರಾಗಿರುತ್ತಾರೆ. ತ್ವರಿತ ಕೃಷಿ ವಿದ್ಯುತ್ ಸಂಪರ್ಕ ಯೋಜನೆಗೆ ಅರ್ಜಿಗಳು ಇನ್ನೂ ಕಾಯುತ್ತಿರುವವರು ಸಹ ಯೋಜನೆಯಡಿ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ. ಭೂಮಿ ಖರೀದಿ ಮತ್ತು ಅಭಿವೃದ್ಧಿ ಯೋಜನೆಗಳು ಸೇರಿದಂತೆ TAHDCO ಕಾರ್ಯಕ್ರಮಗಳಿಂದ ಹಿಂದೆ ಪ್ರಯೋಜನ ಪಡೆದ ರೈತರು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ:Petrol-Diesel Price Hike! Petrol-Diesel ಬೆಲೆ 110 ರೂ.ಗಿಂತ ಹೆಚ್ಚಿಗೆಯಾಗಿದೆ! ಗ್ರಾಹಕರಿಗೆ ಮತ್ತಷ್ಟು ಚಿಂತೆ!

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 2 ಲಕ್ಷವನ್ನು ಮೀರಬಾರದು, ರೈತರು ಸಿಟ್ಟಾ, ಪಟ್ಟಾ, ಪಡಿತರ ಚೀಟಿಯ ನಕಲುಗಳೊಂದಿಗೆ ಇತರ ವಿವರಗಳೊಂದಿಗೆ application.tahdco.com ನಲ್ಲಿ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಮತ್ತು ಡಿನೋಟಿಫೈಡ್ ಬುಡಕಟ್ಟುಗಳಿಗೆ ಸೇರಿದವರು fast.tahdco.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ವಿವರಗಳನ್ನು 04342-260007 ಗೆ ಕರೆ ಮಾಡುವ ಮೂಲಕ TAHDCO ಕಚೇರಿಯಿಂದ ಪಡೆಯಬಹುದು.

ಇದನ್ನೂ ಓದಿ:ಕೋಟ್ಯಾಧಿಪತಿಯಾಗಲು Top 5 ಐಡಿಯಾಗಳು. ಹೆಚ್ಚು ಹಣ ಗಳಿಸಲು ಹೀಗೆ ಮಾಡಿ .

TAHDCO ಕುರಿತು:
ತಮಿಳುನಾಡು ಆದಿ ದ್ರಾವಿಡರ್ ಹೌಸಿಂಗ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (TAHDCO) ಅನ್ನು 1974 ರಲ್ಲಿ ಕಂಪನಿಗಳ ಕಾಯಿದೆ, 1956 ರ ಅಡಿಯಲ್ಲಿ ಸಂಯೋಜಿಸಲಾಯಿತು. ತಮಿಳುನಾಡು ಸರ್ಕಾರ ಮತ್ತು ಭಾರತ ಸರ್ಕಾರವು ನಿಗಮದ ಷೇರು ಬಂಡವಾಳಕ್ಕೆ ಕೊಡುಗೆ ನೀಡುತ್ತವೆ. ಪ್ರಸ್ತುತ, ನಿಗಮದ ಅಧಿಕೃತ ಷೇರು ಬಂಡವಾಳ ರೂ. 150.00 ಕೋಟಿ ಮತ್ತು ಪಾವತಿಸಿದ ಷೇರು ಬಂಡವಾಳ ರೂ.128.27 ಕೋಟಿ.

ಇದನ್ನೂ ಓದಿ:ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ನಿಗಮವು ಆರಂಭದಲ್ಲಿ 1974 ರಲ್ಲಿ ನಿರ್ಮಾಣ ಕಂಪನಿಯಾಗಿ ಪ್ರಾರಂಭವಾದರೂ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಆದಾಯ ಉತ್ಪಾದನೆ, ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ ವ್ಯಾಪಕವಾದ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ನಿಗಮದ ಚಟುವಟಿಕೆಗಳನ್ನು ವಿಸ್ತರಿಸಲಾಯಿತು.

Published On: 19 March 2022, 03:40 PM English Summary: Subsidy on PVC Pipes & Electric Motors for Farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.