1. ಸುದ್ದಿಗಳು

ಗುಡ್‌ನ್ಯೂಸ್‌: ರಾಜ್ಯ ಸರ್ಕಾರಿ ನೌಕರರು ಇನ್ಮುಂದೆ ಆನ್‌ಲೈನ್ ಮೂಲಕ ಸಾಲ ಪಡೆಯಬಹುದು..! ಹೇಗೆ ಗೊತ್ತೆ?

Kalmesh T
Kalmesh T

ರಾಜ್ಯ ಸರ್ಕಾರಿ ನೌಕರರು ಇನ್ಮುಂದೆ ಆನ್‌ಲೈನ್ ಮೂಲಕ ಸಾಲ ಪಡೆಯಬಹುದು. ಹೇಗೆ ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿರಿ: 

ಮುಂದಿನ 5 ದಿನ ರಾಜ್ಯಾದ್ಯಂತ ಭಾರಿ ಮಳೆ ಸಾಧ್ಯತೆ! ಹವಾಮಾನ ಇಲಾಖೆಯಿಂದ ಆರೆಂಜ್‌ ಅಲರ್ಟ್‌ ಘೋಷಣೆ..

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..

ರಾಜ್ಯ ಸರಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಆನ್ ಲೈನ್ (Online) ಮೂಲಕ ಸಾಲ ಪಡೆಯುವ ಅವಕಾಶವನ್ನು ನೀಡಿದೆ. ರಾಜ್ಯ ಸರಕಾರ ತನ್ನ ನೌಕರರಿಗೆ ಇದುವರೆಗೆ ಇದ್ದ ಮ್ಯಾನುಯೆಲ್ ಸಾಲಸೌಲಭ್ಯವನ್ನು ತೆಗೆದು ಹಾಕಿ.

ಆನ್ ಲೈನ್ ಮೂಲಕ ಸಾಲ ಪಡೆಯುವ ಅವಕಾಶವನ್ನು ನೀಡಿದೆ. ಆನ್ ಲೈನ್ ಮೂಲಕ ಸಾಲ ಮಂಜೂರಾತಿಗಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಇನ್ಮುಂದೆ ಸರ್ಕಾರಿ ವಿಮಾ ಇಲಾಖೆಯಿಂದ ಜೀವ ವಿಮಾ ಪಾಲಿಸಿಗಳಿಂದ ಸಾಲ ಪಡೆಯಲು ಆನ್ ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಕುರಿತಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲೆ ವಿಮಾದಾರರಿಗೆ ಆನ್ ಲೈನ್ ನಲ್ಲಿ ಸಾಲ ಮಂಜೂರು ಮಾಡೋದಕ್ಕಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಈ ಸಾಫ್ಟ್ ವೇರ್ ಅನ್ನು ಪ್ರಾಯೋಗಿಕವಾಗಿ ಯಾದಗಿರಿ, ಕೊಡಗು, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದೆ.

ಬ್ರೇಕಿಂಗ್‌: ಜುಲೈ 1 ರಿಂದ ದೇಶಾದ್ಯಂತ ಪ್ಲಾಸ್ಟಿಕ್‌ ಬ್ಯಾನ್‌ಗೆ ಮೋದಿ ಸರ್ಕಾರ ನಿರ್ಧಾರ..!

7th Pay Big Update: ಈಗ ತುಟ್ಟಿಭತ್ಯೆ ಜೊತೆಗೆ HRA ಯಲ್ಲಿ ಕೂಡ ಹೆಚ್ಚಳ! ಎಷ್ಟು ಶೇಕಡ ಗೊತ್ತೆ?

ಈ ಸಂಬಂಧ ಸರ್ಕಾರಿ ನೌಕರರಿಗೆ ತರಬೇತಿ ಕೂಡ ಇರಲಿದೆ. ಸಾಲದ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಸ್ವೀಕರಿಸಿ, ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ನಿರ್ವಹಿಸಲು ಸೂಚನೆ ಹೊರಡಿಸಲಾಗಿದೆ. ಮುಂದುವರೆದು , ದತ್ತಾಂಶ ಪರಿಶೀಲನೆ ಮುಗಿದಿರುವ ಪಾಲಿಸಿಗಳ ಮೇಲೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

5000 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕ, ಗೌರವ ಧನ ಹೆಚ್ಚಳ:

ಅತಿಥಿ ಶಿಕ್ಷಕರಿಗೆ ( guest teachers ) ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ನೀಡಿದ್ದು ಸಂಭಾವನೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ!

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ!

ರಾಜ್ಯ ಸರ್ಕಾರ ಕೊನೆಗೂ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಗೌರವ ಧನವನ್ನು 6 ವರ್ಷದ ಬಳಿಕ ಪರಿಷ್ಕೃತಗೊಳಿಸಿ ಶನಿವಾರ ಆದೇಶ ಹೊರಡಿಸಿದ್ದು ಅತಿಥಿ ಶಿಕ್ಷಕರಿಗೆ ಹೆಚ್ಚಳ ಆಗಿರುವ ಗೌರವ ಧನ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಈ ಮೊದಲು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 7500 ರು. ಹಾಗೂ ಪ್ರೌಢ ಶಾಲೆಗಳಲ್ಲಿ ಪಾಠ ಮಾಡುವ ಅತಿಥಿ ಶಿಕ್ಷಕರಿಗೆ 8000 ರು, ಗೌರವ ಧನವನ್ನು ಸರ್ಕಾರ ನಿಗಧಿಗೊಳಿಸಿತ್ತು. ಆದರೆ ಅತಿಥಿ ಶಿಕ್ಷಕರಿಗೆ 6 ವರ್ಷದಿಂದ ಗೌರವ ಧನ ಹೆಚ್ಚಳ ಮಾಡದ ಬಗ್ಗೆ ಅತಿಥಿ ಶಿಕ್ಷಕರಲ್ಲಿ ತೀವ್ರ ಅಸಮಾಧಾನ ಇತ್ತು.

Published On: 21 June 2022, 04:24 PM English Summary: State government employees can avail loans online

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.