1. ಸುದ್ದಿಗಳು

ಗೋಲ್ಡ್ ಲೋನ್ ಪಡೆಯುವವರಿಗೆ ಸಂತಸದ ಸುದ್ದಿ-ಕಡಿಮೆ ಬಡ್ಡಿದರದಲ್ಲಿ SBI ನೀಡಲಿದೆ ಸಾಲ

ನೀವು ಚಿನ್ನದ ಮೇಲೆ ಸಾಲ ಪಡೆಯಲು ಬಯಸಿದ್ದರೆ ನಿಮಗಾಗಿ ಸಂತಸದ ಸುದ್ದಿ ಇಲ್ಲಿದೆ. ದೇಶದ ಅತೀದೊಡ್ಡ ಸಾರ್ವಜನಿಕ ವಲಯದ ಎಸ್.ಬಿ.ಐ ಬ್ಯಾಂಕ್ ವೈಯಕ್ತಿಕ ಚಿನ್ನದ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ

ಎಸ್.ಬಿ.ಐ (SBI Bank) ಬ್ಯಾಂಕ್ ಇದಕ್ಕಿಂತ ಮೊದಲು 7.75% ರಷ್ಟಿದ್ದ ವಾರ್ಷಿಕ ಬಡ್ಡಿದರವನ್ನು ಈಗ 7.50% ಕ್ಕೆ ಇಳಿಸಿದೆ. ಸಾಲದ ಅಗತ್ಯವಿದ್ದರೆ ಚಿನ್ನ ಅಡಯಿಟ್ಟು ಗ್ರಾಹಕರು  50 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು. ಹೊಸಬಡ್ಡಿದರ ಸೆಪ್ಟೆಂಬರ್ 30ರವರೆಗೆ ಮಾನ್ಯವಾಗಿರುತ್ತದೆ.

ಈ ಯೋಜನೆಯಡಿ ಗ್ರಾಹಕರು ಚಿನ್ನದ ನಾಣ್ಯಗಳು, ಬ್ಯಾಂಕುಗಳು ಮಾರಾಟ ಮಾಡುವ ಆಭರಣಗಳನ್ನು ಅಡಮಾನ ಇಡುವ ಮೂಲಕ ಬ್ಯಾಂಕಿನಿಂದ ಚಿನ್ನದ ಸಾಲ (Gold Loan) ಪಡೆಯಬಹುದು  

ಬಡ್ಡಿದರಗಳನ್ನು ಕಡಿಮೆ ಮಾಡುವುದರ ಜೊತೆಗೆ ಎಸ್‌ಬಿಐ ಚಿನ್ನದ ಸಾಲಗಳ ಸಂಸ್ಕರಣಾ ಶುಲ್ಕವನ್ನು ಸಹ ಕಡಿತಗೊಳಿಸಿದೆ. ಎಸ್‌ಬಿಐ ಈಗ ಬ್ಯಾಂಕ್ ಸಾಲದ ಮೊತ್ತದ 0.25% + ಜಿಎಸ್‌ಟಿಯನ್ನು ಸಂಸ್ಕರಣಾ ಶುಲ್ಕವಾಗಿ ತೆಗೆದುಕೊಳ್ಳುತ್ತಿದೆ. ಇದು ಕನಿಷ್ಠ 250 + ಜಿಎಸ್‌ಟಿ. ಆದರೆ  ಯೋನೋ (YONO APP)  ಅರ್ಜಿ ಸಲ್ಲಿಸುವವರಿಗೆ ಯಾವುದೇ ಪ್ರಕ್ರಿಯೆ ಶುಲ್ಕ (processing fee) ವಿರುವುದಿಲ್ಲ.

ಗ್ರಾಹಕರು ಚಿನ್ನದ ಮೌಲ್ಯದ ಶೇ. 90 ರಷ್ಟು ಈಗ ಸಾಲ ಪಡೆಯಬಹುದು. ಆಗಸ್ಟ್ ತಿಂಗಳಗಿಂತ ಮೊದಲು ಚಿನ್ನದ ಮೇಲೆ ಶೇ. 75 ರಷ್ಟು ಸಾಲ ನೀಡಲಾಗುತ್ತಿತ್ತು. ಆದರೆ ಆಗಸ್ಟ್ ತಿಂಗಳ ನಂತರ ಆರ್.ಬಿ.ಐ ಚಿನ್ನದ ಆಭರಣಗಳ ಮೇಲಿನ ಸಾಲದ ಮೌಲ್ಯವನ್ನು ಹೆಚ್ಚಿಸಿದೆ. ಗ್ರಾಹಕರು ಚಿನ್ನದ ಮೇಲೆ ತೆಗೆದುಕೊಂಡ ಸಾಲವನ್ನು 36 ತಿಂಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಕನಿಷ್ಠ ಸಾಲದ ಮೊತ್ತ 20 ಸಾವಿರ ರೂಪಾಯಿ ಮತ್ತು ಗರಿಷ್ಠ 50 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು.

Published On: 07 September 2020, 01:29 PM English Summary: state bank of india has cut the interest rates of personal gold

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.