ರಾಜ್ಯ ಕೃಷಿ ಸಚಿವ ಚಲುವನಾರಾಯಣ ಅವರು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ Bhagwant Khuba ಅವರನ್ನು ಬುಧವಾರ ವಿಕಾಸಸೌಧದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ರಾಜ್ಯ ಕೃಷಿ ಸಚಿವ ಚಲುವನಾರಾಯಣ ಅವರು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ
Bhagwant Khuba ಅವರನ್ನು ಬುಧವಾರ ವಿಕಾಸಸೌಧದಲ್ಲಿ ಭೇಟಿ ಮಾಡಿದ್ದು, ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿ ಗೌರವಿಸಲಾಗಿದೆ.
ಸಭೆ ಪ್ರಾರಂಭಿಸಿ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ರಸಗೊಬ್ಬರ ದಾಸ್ತಾನು, ಪೂರೈಕೆ ಹಾಗು ಬೇಡಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ರಸಗೊಬ್ಬರ ದಾಸ್ತಾನಿಗೆ ಯಾವುದೇ ಕೊರತೆ ಇಲ್ಲ.
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜುಲೈ 15ರ ನಂತರ ಬರಗಾಲ ಜಂಟಿ ಸದನ ಸಮಿತಿ ಸಭೆ ನಡೆಸಲಿದ್ದು,
ನಂತರ ಬರದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ವಿವರಿಸಲಾಯಿತು.
ಸಭೆಯಲ್ಲಿ ಕೃ಼ಷಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ನೆದರ್‌ಲ್ಯಾಂಡ್ಸ್ ಕಾನ್ಸುಲೇಟ್ ಜನರಲ್ ನಿಯೋಗ ಭೇಟಿ
ನೆದರ್‌ಲ್ಯಾಂಡ್ಸ್ ಕಾನ್ಸುಲೇಟ್ ಜನರಲ್ ಅವರ ನೇತೃತ್ವದ ನಿಯೋಗದ ಸದಸ್ಯರು ಈಚೆಗೆ ವಿಕಾಸಸೌಧದ
ಕಚೇರಿಯಲ್ಲಿ ರಾಜ್ಯ ಕೃಷಿ ಸಚಿವ ಚಲುವನಾರಾಯಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಭಾರತದಲ್ಲಿ ಹಾಲಿನ ಇಳುವರಿಯನ್ನು ಹೆಚ್ಚಿಸುವ ತಂತ್ರಜ್ಞಾನಗಳು ಮತ್ತು ಪಶು ಸಂಗೋಪನೆ ಸಂತಾನೋತ್ಪತ್ತಿ
ಸುಧಾರಣೆ ತಂತ್ರಜ್ಞಾನಗಳನ್ನು ಪರಿಚಯಿಸುವುದು ಹಾಗೂ ತಮ್ಮ ದೇಶದಲ್ಲಿನ
ಕೃಷಿ ಮತ್ತು ತೋಟಗಾರಿಕೆ ಹಾಗೂ ಪಶುಸಂಗೋಪನೆಗೆ ಸಂಭಂದಿಸಿದ ಸಾಧನೆಗಳನ್ನು ವಿವರಿಸಿದರು.
ದೆಹಲಿಯಲ್ಲಿ G-20 ಶೃಂಗಸಭೆಯ ನಂತರ 2023 ರ ಸಪ್ಟೆಂಬರ್ 11 ರಂದು ನೆದರ್ಲ್ಯಾಂಡ್ ಪ್ರಧಾನ ಮಂತ್ರಿಯವರು
ಬೆಂಗಳೂರಿಗೆ ಭೇಟಿ ನೀಡುತ್ತಿದ್ದು ಈ ವೇಳೆ ನೆದರ್‌ಲ್ಯಾಂಡ್ಸ್ ಕಾನ್ಸುಲೇಟ್ ಜನರಲ್ ಅಧಿಕಾರಿಗಳು ಮತ್ತು
ಈ ನಿಟ್ಟಿನಲ್ಲಿ ರಚಿಸಲಾಗುವ ಸಮಿತಿಯ ಸದಸ್ಯರ ನಡುವಿನ ಪೂರ್ವಸಿದ್ಧತಾ ಸಭೆಗಳನ್ನು ನಡೆದಿದೆ.
ಕರ್ನಾಟಕ ಸರ್ಕಾರ ಮತ್ತು ನೆದರ್‌ಲ್ಯಾಂಡ್ಸ್ ಸರ್ಕಾರದ ನಡುವಿನ ಉನ್ನತ ಮಟ್ಟದ ಸಂವಾದ ಸಭೆಗಳಲ್ಲಿ
ಚರ್ಚಿಸುವ ಬಗ್ಗೆ ತಿರ್ಮಾನಿಸಿ, ಜಂಟಿ ಸಭೆ ನಡೆಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ನೆದರ್‌ಲ್ಯಾಂಡ್ಸ್ ದೇಶದ ಕಾನ್ಸುಲೇಟ್ ಜನರಲ್ ಇವೂಟ್ ಡಿ ವಿಟ್, ನವ ದೆಹಲಿಯಲ್ಲಿ
ನೆದರ್‌ಲ್ಯಾಂಡ್ಸ್ ರಾಯಭಾರ ಕಚೇರಿಯಲ್ಲಿ ಭಾರತದ ಕೃಷಿ ಸಲಹೆಗಾರರಾದ ಮೈಕಲ್ ವ್ಯಾನ್ ಎರ್ಕಲ್,
ವಿಲ್ಲೆಮ್ ಸ್ಕೌಸ್ಟ್ರಾ, ನೆದರ್‌ಲ್ಯಾಂಡ್ಸ್ ನ ಕೃಷಿ ಮತ್ತು ಸಹಕಾರ ಸಚಿವಾಲಯ
ನಿರ್ದೇಶಕ, ನೆದರ್‌ಲ್ಯಾಂಡ್ಸ್ ಸರ್ಕಾರ ಮತ್ತು ಬೆಂಗಳೂರಿನಲ್ಲಿರುವ ನೆದರ್ಲ್ಯಾಂಡ್ಸ್ ಕಾನ್ಸುಲೇಟ್ ಜನರಲ್ ದಕ್ಷಿಣ ಭಾರತದ ಕೃಷಿ
ಸಲಹೆಗಾರರಾದ ಸೂರ್ಯ ಕಿರಣ್ ವಡ್ಡಾಡಿ, ಕೃಷಿ ಕಾರ್ಯದರ್ಶಿ ಅಮ್ಬುಕುಮಾರ್,
ಕೃಷಿ ಆಯುಕ್ತ ಎಸ್.ಪಾಟೀಲ್, ಕೃಷಿ ನಿರ್ದೇಶಕ ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ
ಇಲಾಖೆ ನಿರ್ದೇಶಕ ಶ್ರೀನಿವಾಸ್, ವಿಶೇಷ ಅಧಿಕಾರಿ ಡಾ ಎ.ಬಿ.ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿತ್ರಕೃಪೆ: @Chaluvarayaswam
Share your comments