8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ SSLC ಪರೀಕ್ಷೆಯ ಫಲಿತಾಂಶ ಇಂದು ಹೊರ ಬಿದ್ದಿದೆ. ಈ ಫಲಿತಾಂಶ ದಾಖಲೆಯ ಫಲಿತಾಂಶವಾಗಿದ್ದು, ರಾಜ್ಯಾದ್ಯಾಂತ 4 ವಿದ್ಯಾರ್ಥಿಗಳು 625 ಅಂಕಕ್ಕೆ ಬರೋಬ್ಬರಿ 625 ಅಂಕಗಳನ್ನು ಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಅಚ್ಚರಿ ಎಂಬಂತೆ 15 ಸಾವಿರ ವಿದ್ಯಾರ್ಥಿಗಳು ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ.
2022-23ನೇ ಸಾಲಿನ ಶೈಕ್ಷಣಿಕ ವರ್ಷದ ಈ ಪರೀಕ್ಷೆಯಲ್ಲಿ ಈ ಬಾರಿ 80% ರಷ್ಟು ರಿಸಲ್ಟ್ ದಾಖಲಾಗಿದೆ. ಇತ್ತೀಚಿಗೆ ನಡೆದ ಈ ಪರೀಕ್ಷೆಯಲ್ಲಿ 8 ಲಕ್ಷ 35 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 7 ಲಕ್ಷದ 617 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅತಿ ಹೆಚ್ಚು ಫಲಿತಾಂಶದೊಂದಿಗೆ ಚಿತ್ರದುರ್ಗ ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಅಲಂಕರಿಸಿದೆ. ಈ ಜಿಲ್ಲೆಗಳು ಕ್ರಮವಾಗಿ 96.86 % ಹಾಗೂ 96.55 % ಪಡೆದುಕೊಂಡಿವೆ.ಇನ್ನು ಯಾದಗಿರಿ ಜಿಲ್ಲೆ .75.49ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನ ಪಡೆದಿದೆ
ಜಿಲ್ಲೆಗಳು |
ಫಲಿತಾಂಶ (ಶೇಕಡಾವಾರು) |
ಚಿತ್ರದುರ್ಗ |
96.8 |
ಮಂಡ್ಯ |
96.74 |
ಹಾಸನ |
96.68 |
ಬೆಂಗಳೂರು ಗ್ರಾಮೀಣ |
96.48 |
ಚಿಕ್ಕಬಳ್ಳಾಪುರ |
96.48 |
ಕೋಲಾರ |
94.6 |
ಚಾಮರಾಜನಗರ |
96.15 |
ಮಧುಗಿರಿ |
93.23 |
ಕೊಡಗು |
93.19 |
ವಿಜಯನಗರ |
91.41 |
ವಿಜಯಪುರ |
91.23 |
ಚಿಕ್ಕೋಡಿ |
91.07 |
ಉತ್ತರ ಕನ್ನಡ |
90.53 |
ದಾವಣಗೆರೆ |
90.43 |
ಕೊಪ್ಪಳ |
90.27 |
ಮೈಸೂರು |
89.75 |
ಚಿಕ್ಕಮಗಳೂರು |
89.69 |
ಉಡುಪಿ |
89.49 |
ದಕ್ಷಿಣ ಕನ್ನಡ |
89.47 |
ತುಮಕೂರು |
89.43 |
ರಾಮನಗರ |
89.42 |
ಹಾವೇರಿ |
89.11 |
ಶಿರಸಿ |
88.39 |
ಧಾರವಾಡ |
86.55 |
ಗದಗ |
86.51 |
ಬೆಳಗಾವಿ |
85.85 |
ಬಾಗಲಕೋಟೆ |
85.14 |
ಕಲಬುರಗಿ |
|
ಶಿವಮೊಗ್ಗ |
84.04 |
ರಾಯಚೂರು |
84 |
ಬಳ್ಳಾರಿ |
81.54 |
ಬೆಂಗಳೂರು ಉತ್ತರ |
80.93 |
ಬೆಂಗಳೂರು ದಕ್ಷಿಣ |
78.7 |
ಬೀದರ್ |
78.95 |
ಯಾದಗಿರಿ |
75.49 |
Share your comments